CHITRADURGA NEWS | 17 MAY 2026
ಚಿತ್ರದುರ್ಗ: ರೋಟರಿ ಕ್ಲಬ್, ವಾಸವಿಕ್ಲಬ್, ರೋಟ್ರಾಕ್ಟ್ ಕ್ಲಬ್ ಹಾಗೂ ವಾಸವಿ ರಕ್ತ ಕೇಂದ್ರ ವತಿಯಿಂದ ಎಸ್.ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಇದನ್ನೂ ಓದಿ: ಡಿ.ಸುಧಾಕರ್ ಆಸೆಯಂತೆ ಚಿತ್ರದುರ್ಗಕ್ಕೆ ಭದ್ರಾ ನೀರು | ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)
ರಕ್ತದಾನ ಶಿಬಿರ ವಾಸವಿ ರಕ್ತ ಕೇಂದ್ರದ ಡಾ. ಶ್ರೀನಿವಾಸ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ರಕ್ತ ದೇವರು ನೀಡಿದ ವರ ಇದನ್ನು ಕೃತಕವಾಗಿ ತಯಾರು ಮಾಡಲು ಸಾಧ್ಯವಿಲ್ಲ, ಅಲ್ಲದೆ ಯಾವುದೇ ಪ್ರಾಣಿ, ಪಕ್ಷಿಗಳಿಂದ ರಕ್ತವನ್ನು ತೆಗೆದು ಮಾನವನಿಗೆ ನೀಡಲು ಸಾಧ್ಯವಿಲ್ಲ. ಮಾನವ ರಕ್ತವನ್ನು ಮಾನವನಿಗೆ ಮಾತ್ರ ನೀಡಬಹುದಾಗಿದೆ.
ಒಬ್ಬರು ರಕ್ತವನ್ನು ದಾನ ಮಾಡಿದರೆ ಅದರಿಂದ ನಾಲ್ಕು ಜನರ ಜೀವವನ್ನು ಕಾಪಾಡಬಹುದಾಗಿದೆ. ಅಪಘಾತ, ಹೆರಿಗೆ, ಆಪರೇಷನ್ ಸಮಯದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿ ಕಂಡು ಬರುತ್ತದೆ.
ಈ ಹಿನ್ನಲೆಯಲ್ಲಿ ಜನತೆ ಸ್ವಯಂ ಆಗಿ ಈ ರೀತಿಯಾದ ರಕ್ತ ದಾನ ಶಿಬಿರದಲ್ಲಿ ಭಾಗವಹಿಸಿ ರಕ್ತವನ್ನು ದಾನ ಮಾಡಬೇಕು. ಈ ರೀತಿಯಾಗಿ ದಾನ ಮಾಡಿದ ರಕ್ತ ಮುಂದಿನ ಮೂರು ತಿಂಗಳಲ್ಲಿ ನಮ್ಮ ದೇಹದಲ್ಲಿ ಸಂಗ್ರಹವಾಗಲಿದೆ ಎಂದರು.
ಇದನ್ನೂ ಓದಿ: ಅಂಬೇಡ್ಕರ್ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಅಹ್ವಾನ
ಶಿಬಿರದಲ್ಲಿ 12ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ರೋಟರಿ ಕ್ಲಬ್ನ ಅಧ್ಯಕ್ಷರಾದ ಭಾಗ್ಯಮೂರ್ತಿ, ವಾಸವಿ ಕ್ಲಬ್ನ ಅಧ್ಯಕ್ಷರಾದ ರಶ್ಮಿ ಹರೀಶ್, ರೋಟ್ರಾಕ್ಟ್ ಅಧ್ಯಕ್ಷರಾದ ಚಿನ್ಮಯ್, ವಾಸವಿ ಕ್ಲಬ್ನ ಹಾಲಿ ಜಾಯಿಂಟ್ ಕ್ಯಾಬಿನೆಟ್ ಸೆಕ್ರೆಟರಿ ಎ.ಆರ್.ಲಕ್ಷ್ಮಣ್ ಎಸ್.ವಿರೇಶ್, ವೀರಭದ್ರ ಸ್ವಾಮಿ, ಎಲ್ಲಾ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

