CHITRADURGA NEWS | 11 NOVEMBER 2025
ಚಿತ್ರದುರ್ಗ: ಆಯುರ್ವೇದ ಪದ್ದತಿ ಎಲ್ಲಾ ವಿಜ್ಞಾನಗಳ ತಾಯಿ ಬೇರಿದ್ದಂತೆ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಿಇಓ ಎಂ.ಸಿ.ರಘುಚಂದನ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಓಬವ್ವನ ತ್ಯಾಗ, ಸಾಹಸ, ಧೈರ್ಯ ಇಂದಿನ ಮಹಿಳೆಯರಿಗೆ ಸ್ಫೂರ್ತಿ | ADC ಬಿ.ಟಿ.ಕುಮಾರಸ್ವಾಮಿ
ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಪ್ರಕೃತಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 2025-26 ನೇ ಸಾಲಿನ ನೂತನ ವಿದ್ಯಾರ್ಥಿಗಳ ಆಯುರ್ ಪ್ರವೇಶಿಕಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಐದು ಸಾವಿರ ವರ್ಷಗಳ ಇತಿಹಾಸವಿರುವ ಆಯುರ್ವೇದ ಪದ್ದತಿ ಮನುಷ್ಯನ ಜೀವನದಲ್ಲಿಯೂ ವಿಜ್ಞಾನದ ಅರಿವು ಮೂಡಿಸಲಿದೆ. ಬೇರೆ ಬೇರೆ ಪದ್ದತಿಯಲ್ಲಿ ಚಿಕಿತ್ಸೆ ಪಡೆದರೂ ಕೊನೆಗೆ ಆಯುರ್ವೇದಿಕ್ ಪದ್ದತಿಗೆ ಬರಬೇಕು. ಹಾಗಾಗಿ ಈ ಪದ್ದತಿಗೆ ಹೆಚ್ಚಿನ ಮಹತ್ವವಿದೆ ಎಂದು ಹೇಳಿದರು.
43 ವರ್ಷಗಳ ಹಿಂದೆ ಆರಂಭಗೊಂಡ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಬೇಕೆಂಬ ಧ್ಯೇಯವಿಟ್ಟುಕೊಂಡಿದೆ. ಹಣ ಗಳಿಕೆ ಮುಖ್ಯವಲ್ಲ.
ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸ್ರವರ ಹೆಸರನ್ನಿಟ್ಟುಕೊಂಡು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇವೆ. ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ. ದೇಶ, ಹೊರದೇಶಗಳಲ್ಲಿಯೂ ಇಲ್ಲಿ ಶಿಕ್ಷಣ ಪಡೆದವರಲ್ಲಿ ಕೆಲವರು ನೌಕರಿಯಲ್ಲಿದ್ದಾರೆನ್ನುವುದು ನಮಗೆ ಹೆಮ್ಮೆಯೆನಿಸುತ್ತದೆ ಎಂದರು.
ಇದನ್ನೂ ಓದಿ: ಶ್ರೀರಾಮ ಆತ್ಮ ಮಹಿಳಾ ಆಹಾರ ಭದ್ರತಾ ಸ್ವ ಸಹಾಯ ಗುಂಪಿಗೆ ರಾಜ್ಯ ಪ್ರಶಸ್ತಿ | ಜಿ.ಪಂ. ಸಿಇಓ ಅಭಿನಂದನೆ
ಕರ್ನಾಟಕವಲ್ಲದೆ ಮಹಾರಾಷ್ಟ್ರ, ಆಂಧ್ರದಿಂದಲೂ ಮಕ್ಕಳು ನಮ್ಮ ಸಂಸ್ಥೆಗೆ ಶಿಕ್ಷಣಕ್ಕಾಗಿ ಬರುತ್ತಿದ್ದಾರೆ. ನಿಮ್ಮ ಮಕ್ಕಳನ್ನು ನಮ್ಮ ಮಕ್ಕಳಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಪೋಷಕರುಗಳಿಗೆ ಭರವಸೆ ನೀಡಿದ ಎಂ.ಸಿ.ರಘುಚಂದನ್ ಪಿ.ಯು.ಸಿ. ಪದವಿ, ನರ್ಸಿಂಗ್, ಬಿ.ಇ.ಡಿ. ಕಾಲೇಜು ಜೊತೆಗೆ ಪ್ರಕೃತಿ ಆಯುರ್ವೇದಿಕ್ ಕಾಲೇಜು ಕೂಡ ನಮ್ಮ ಸಂಸ್ಥೆಯಲ್ಲಿದೆ ಎಂದರು.
ಪ್ರಕೃತಿ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಚಾರ್ಯರಾದ ಡಾ.ಎಸ್.ಬಿ.ನವಾಜ್, ಡೀನ್ ಅಕಾಡೆಮಿಕ್ನ ಡಾ.ಬಿ.ಸಿ.ಅನಂತರಾಮು, ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಎ.ಜೆ.ಶಿವಕುಮಾರ್, ಆದ್ಯಾ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಕೆ.ಮೊಹಮದ್ ಮುತಾಹರ್, ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಕೆ.ಪಿ.ನಾಗಭೂಷಣ್ಶೆಟ್ಟಿ, ಎಸ್.ಎಲ್.ವಿ.ಶಾಲೆ ಮತ್ತು ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಂ.ಮಹಾಂತೇಶ್, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಹಾಜರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

