CHITRADURGA NEWS |15 DECEMBER 2025
ಕೆಲವರು ಪಾರ್ಟಿಗಳನ್ನು ಮಾಡುವಾಗ ಬಿಯರ್, ವಿಸ್ಕಿಯನ್ನು ಕುಡಿಯುತ್ತಾರೆ. ಅದರ ಜೊತೆಗೆ ಕೆಲವೊಂದು ಪದಾರ್ಥಗಳನ್ನು ಮಿಶ್ರಣ ಮಾಡಿ ತಿನ್ನುತ್ತಾರೆ. ಆದರೆ ಇದು ಮದ್ಯಕ್ಕಿಂತ ಹೆಚ್ಚಿನ ಹಾನಿ ಮಾಡುತ್ತದೆ. ಆಲ್ಕೋಹಾಲ್ ಜೊತೆ ಕೆಲವೊಂದು ಪದಾರ್ಥಗಳನ್ನು ಮಿಕ್ಸ್ ಮಾಡಿ ತಿನ್ನುವುದು ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಆಲ್ಕೋಹಾಲ್ ಜೊತೆ ಯಾವ ಆಹಾರಗಳನ್ನು ಮಿಕ್ಸ್ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಎಣ್ಣೆಯುಕ್ತ ಅಥವಾ ಹುರಿದ ಆಹಾರದೊಂದಿಗೆ ಸೇರಿಬಾರದು
ಮೊದಲ ತಪ್ಪು ಅನೇಕರು ಮೊದಲ ಸಿಪ್ ಜೊತೆಗೆ ಎಣ್ಣೆಯುಕ್ತ ಅಥವಾ ಹುರಿದ ಆಹಾರಗಳನ್ನು ತಿನ್ನುತ್ತಾರೆ. ಈಗಾಗಲೇ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಆಲ್ಕೋಹಾಲ್, ಎಣ್ಣೆಯುಕ್ತ ಅಥವಾ ಹುರಿದ ಆಹಾರದೊಂದಿಗೆ ಸೇರಿದಾಗ ಹೊಟ್ಟೆಯ ಮೇಲೆ ಹೆಚ್ಚು ಹೊರೆಯಾಗುತ್ತದೆ. ಕೊಬ್ಬು ಮತ್ತು ಆಲ್ಕೋಹಾಲ್ ಎರಡನ್ನೂ ಹೊರಹಾಕುವ ಲಿವರ್ ಇದರಿಂದ ಹೆಚ್ಚು ಶ್ರಮಿಸಬೇಕಾಗುತ್ತದೆ. ಚಯಾಪಚಯ ಕ್ರಿಯೆ ನಿಧಾನವಾದಾಗ, ಆಮ್ಲೀಯತೆ ಹೆಚ್ಚಾಗುತ್ತದೆ. ಎದೆಯುರಿ ಸಾಮಾನ್ಯವಾಗುತ್ತದೆ ಮತ್ತು ಹೊಟ್ಟೆಯುಬ್ಬರ ಸಮಸ್ಯೆ ಕಾಡುತ್ತದೆ.
ಸಿಹಿತಿಂಡಿಗಳ ಜೊತೆಗೆ ಸೇವಿಸಬಾರದು
ಕೆಲವರು ಮದ್ಯದ ಕಹಿ ರುಚಿಯನ್ನು ಕಡಿಮೆ ಮಾಡಲು ಸಿಹಿತಿಂಡಿಗಳನ್ನು ತಿನ್ನುತ್ತಾರೆ. ಆಲ್ಕೋಹಾಲ್ ಸ್ವತಃ ಸಕ್ಕರೆಯನ್ನು ಹೊಂದಿರುವುದರಿಂದ, ಪೇಸ್ಟ್ರಿಗಳು, ಚಾಕೊಲೇಟ್‌ಗಳು ಅಥವಾ ಸಿರಪ್ ತುಂಬಿದ ಸಿಹಿತಿಂಡಿಗಳನ್ನು ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟಗಳು ಹಠಾತ್ ಏರಿಕೆಯಾಗುತ್ತದೆ. ಇದು ಮೇದೋಜ್ಜೀರಕ ಗ್ರಂಥಿಯ ಮೇಲೆ ಹೊರೆಯಾಗುತ್ತವೆ ಮತ್ತು ಮರುದಿನ ಬೆಳಿಗ್ಗೆ ಹೆಚ್ಚು ಹ್ಯಾಂಗೊವರ್‍ಗೆ ಒಳಗಾಗಬಹುದು. ಇದು ಆಯಾಸ, ವಾಕರಿಕೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು.
ಕೆಫೀನ್ ಹೊಂದಿರುವ ಪಾನೀಯಗಳನ್ನು ಸೇವಿಸಬಾರದು
ಕುಡಿದ ನಂತರ ಎಚ್ಚರವಾಗಿರಲು ಕೆಲವು ಯುವಕರು ವಿಶೇಷವಾಗಿ ಕೆಫೀನ್ ಹೊಂದಿರುವ ಪಾನೀಯಗಳನ್ನು ಸೇವಿಸುತ್ತಾರೆ. ಆದರೆ ಕಾಫಿ ಮತ್ತು ಶಕ್ತಿ ಪಾನೀಯಗಳು ಈಗಾಗಲೇ ಮದ್ಯದಿಂದ ಉಂಟಾದ ನಿರ್ಜಲೀಕರಣವನ್ನು ಇನ್ನಷ್ಟು ಹದಗೆಡಿಸುತ್ತವೆ. ಈ ತಪ್ಪು ಆರೋಗ್ಯದ ಅಪಾಯಗಳನ್ನು ಹಲವು ಪಟ್ಟು ಹೆಚ್ಚಿಸುತ್ತದೆ.
ಆದ್ದರಿಂದ ತಜ್ಞರು ಸೂಚಿಸುವ ಪ್ರಕಾರ, ಆಲ್ಕೋಹಾಲ್ ಸೇವಿಸಿದ ನಂತರ ನೀರು ಅಥವಾ ಎಳನೀರನ್ನು ಕುಡಿಯುವುದರಿಂದ ದೇಹವು ದ್ರವದ ನಷ್ಟದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಸೇಬು, ದ್ರಾಕ್ಷಿ ಅಥವಾ ಬಾಳೆಹಣ್ಣುಗಳಂತಹ ಹಗುರವಾದ ಹಣ್ಣುಗಳನ್ನು ತಿನ್ನುವುದು ಹೊಟ್ಟೆಯ ಸಮಸ್ಯೆಯನ್ನು ನಿವಾರಿಸಲು ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಬೆಚ್ಚಗಿನ ಸೂಪ್‌ಗಳು ಅಥವಾ ಬೇಯಿಸಿದ ತರಕಾರಿಗಳು ಜೀರ್ಣಕ್ರಿಯೆಯನ್ನು ಸರಿಯಾಗಿಡಲು ಸಹಾಯ ಮಾಡುತ್ತದೆ. ಲಿವರ್‍ಗೆ ಹೆಚ್ಚುವರಿ ಹೊರೆಯಿಲ್ಲದೆ ಆರಾಮವನ್ನು ನೀಡುತ್ತದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________


