CHITRADURGA NEWS | 11 OCTOBER 2026
ಚಿತ್ರದುರ್ಗ: ಸಮಾಜಮುಖಿ ಹಾಗೂ ಪರಿಸರಪೂರಕ ಕಾರ್ಯಗಳನ್ನು ಕೈಗೊಂಡವರು ನಿಧನದ ನಂತರವೂ ಜನರ ಮನದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ದುರ್ಗದ ಸಿರಿ ಕಲಾ ಸಂಘದ ಗೌರವಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಹೇಳಿದರು.
ಇದನ್ನೂ ಓದಿ: ಜಿಲ್ಲಾ ಪಂಚಾಯಿತಿ ಮೀಸಲಾತಿ | ಯಾವ ಕ್ಷೇತ್ರಕ್ಕೆ ಯಾವ ಮೀಸಲು?
ನಗರದ ಐಶ್ವರ್ಯ ಫೋರ್ಟ್ನಲ್ಲಿ ದುರ್ಗದ ಸಿರಿ ಕಲಾ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಡಾ. ಕೆ.ಎಂ. ವೀರೇಶ್ ಅವರ ಭಾವಪೂರ್ಣ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಕೆ.ಎಂ. ವೀರೇಶ್ ಅವರು ಎಲ್ಲರನ್ನೂ ಪ್ರೋತ್ಸಾಹಿಸುವ ಹಾಗೂ ಉತ್ತಮ ಮಾತುಗಳ ಮೂಲಕ ಹುರಿದುಂಬಿಸುವ ಗುಣ ಹೊಂದಿದ್ದರು. ಹುಟ್ಟು ಕಲಾವಿದರಾಗಿದ್ದ ಅವರು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ತಿಂಗಳು ಬೆಳದಿಂಗಳ ಕಾರ್ಯಕ್ರಮ ಆಯೋಜಿಸುವ ಮೂಲಕ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಉಪಯುಕ್ತ ಮಾಹಿತಿ ಒದಗಿಸುತ್ತಿದ್ದರು. ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದ ಅವರು ಮೃದು ಸ್ವಭಾವದವರಾಗಿದ್ದು, ಯಾರೊಂದಿಗೂ ಸಿಟ್ಟಾಗುತ್ತಿರಲಿಲ್ಲ ಎಂದು ಸ್ಮರಿಸಿದರು.
ದುರ್ಗದ ಸಿರಿ ಕಲಾ ಸಂಘದ ಗೌರವಾಧ್ಯಕ್ಷ ಜಿ.ಎಸ್. ಮಂಜುನಾಥ್ ಮಾತನಾಡಿ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ವೀರೇಶ್ ಅವರ ಕೊಡುಗೆ ಅಪಾರ. ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುತ್ತಿದ್ದ ಅವರು ಇಷ್ಟು ಬೇಗ ನಮ್ಮನ್ನೆಲ್ಲ ಅಗಲುತ್ತಾರೆಂದು ನಿರೀಕ್ಷಿಸಿರಲಿಲ್ಲ ಎಂದು ಕಂಬನಿ ಮಿಡಿದರು.
ಇದನ್ನೂ ಓದಿ: ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬಿಸುವುದು ಆದ್ಯತೆ | ಶಾಸಕ ಡಾ.ಎಂ.ಚಂದ್ರಪ್ಪ
ಸಂಘದ ಅಧ್ಯಕ್ಷ ಮಹಾಂತರೆಡ್ಡಿ ಮಾತನಾಡಿ, ಡಾ. ಕೆ.ಎಂ. ವೀರೇಶ್ ಅವರೊಂದಿಗೆ 34 ವರ್ಷಗಳ ಒಡನಾಟವಿತ್ತು. ಹಾಸ್ಯಪ್ರಜ್ಞೆ, ಪ್ರೀತಿ ಹಾಗೂ ವಿಶ್ವಾಸದಿಂದ ಎಲ್ಲರನ್ನೂ ಕಾಣುತ್ತಿದ್ದ ಅವರು ಚಿತ್ರದುರ್ಗದ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅವರ ಅಗಲಿಕೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಬಯಲುಸೀಮೆಯ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸುವ ಹೋರಾಟದಲ್ಲಿಯೂ ವೀರೇಶ್ ಅವರ ಪಾತ್ರವಿತ್ತು. ಸಾಂಸ್ಕೃತಿಕ ವಾತಾವರಣ ನಿರ್ಮಾಣಕ್ಕೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ನ್ಯಾಯವಾದಿ ಫಾತ್ಯರಾಜನ್ ಮಾತನಾಡಿ, ಸ್ನೇಹಜೀವಿ ಹಾಗೂ ಕೊಡುಗೈದಾನಿಯಾಗಿದ್ದ ವೀರೇಶ್ ಅವರು ಮುರುಘಾಮಠದಲ್ಲಿಯೂ ಸೇವೆ ಸಲ್ಲಿಸಿದ್ದರು. ಅನೇಕ ಜನರಿಗೆ ನೆರವಾಗಿದ್ದ ಅವರು ಸದಾ ಸ್ಮರಣೀಯರು ಎಂದರು. ಸೈಟ್ ಬಾಬಣ್ಣ ಅವರು ವೀರೇಶ್ ಅವರ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದ ಸೇವೆಯನ್ನು ಸ್ಮರಿಸಿದರು.
ಇದನ್ನೂ ಓದಿ: ಹೆಚ್ಚು ಧ್ಯಾನದಿಂದ ವ್ಯಕ್ತಿ, ಕುಟುಂಬ ಮತ್ತು ಸಮಾಜ ಪ್ರಬುದ್ಧವಾಗುತ್ತದೆ
ಕಾರ್ಯಕ್ರಮದಲ್ಲಿ ಅರುಣ್ಕುಮಾರ್, ನಗರಸಭೆ ಮಾಜಿ ಸದಸ್ಯ ಸುರೇಶ್, ಪ್ರಶಾಂತ್, ಭವಾನಿ ಮಂಜುನಾಥ್, ನಿವೃತ್ತ ಡಿವೈಎಸ್ಪಿಗಳಾದ ಸೈಯದ್ ಇಸಾಕ್, ಅಬ್ದುಲ್ ರೆಹಮಾನ್, ಜಾನಪದ ಗಾಯಕ ಜಿ.ಓ. ಮುರಾರ್ಜಿ, ಬಸವರಾಜು ಖಾನಮಡುಗು, ಶಾರದಾ ಬ್ರಾಸ್ಬ್ಯಾಂಡ್ನ ಗುರುಮೂರ್ತಿ, ಕ್ಯಾಪ್ಟನ್ ಮಹೇಶ್ವರಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

