
CHITRADURGA NEWS | 12 July 2026
ಚಿತ್ರದುರ್ಗ: ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ (95) ವಯೋಸಹಜ ಅನಾರೋಗ್ಯ ಹಿನ್ನೆಲೆ ನಿಧನರಾಗಿದ್ದಾರೆ.
ಇದನ್ನೂ ಓದಿ: ಸರ್ಕಾರದಿಂದ ನೀಡುವ ಶಿಕ್ಷಣ ಸೌಲಭ್ಯ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ | ಮಾದಾರ ಚನ್ನಯ್ಯ ಸ್ವಾಮೀಜಿ
ಅನಾರೋಗ್ಯ ಹಿನ್ನೆಲೆ, ಬೆಂಗಳೂರು ಆಸ್ಪತ್ರೆಗೆ ತೆರಳುತ್ತಿದ್ದರು, ತೀರ್ವ ಅನಾರೋಗ್ಯ ಹಿನ್ನೆಲೆ ತುಮಕೂರು ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎಚ್.ಹನುಮಂತಪ್ಪ ಅವರು 1932 ಮೇ 13ರಂದು ಜನಿಸಿದ್ದರು. ಕಾಂಗ್ರೆಸ್ ಹಿರಿಯ ರಾಜಕಾರಣಿಯಾಗಿದ್ದ ಕಾಂಗ್ರೆಸ್ ಪಕ್ಷದಿಂದ 3 ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
1982-1988, 1988-1994, 1994-2000 ಮೂರು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 1995 ರಲ್ಲಿ ರಾಷ್ಟ್ರೀಯ SC, ST ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಟಿಇಟಿ ಪರೀಕ್ಷೆ ರದ್ದುಪಡಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಂಸದ ಗೋವಿಂದ ಕಾರಜೋಳಗೆ ಮನವಿ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಆಪ್ತರು:
ಎಚ್.ಹನುಮಂತಪ್ಪ ಮಾಜಿ ಪ್ರಧಾನಿ ಎಚ್.ಹನುಮಂತಪ್ಪ ಅವರ ಆಪ್ತರಾಗಿದ್ದರು. ರಾಜೀವ್ ಗಾಂಧಿ ಅವರು ಹತ್ಯೆಯಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಹಿಂದಿನ ಅನೇಕ ಪ್ರಧಾನ ಮಂತ್ರಿಗಳೊಂದಿಗೆ ಎಚ್ಎಚ್ ಆತ್ಮೀಯತೆ ಇತ್ತು.
ಕೇಂದ್ರ ರೇಷ್ಮೆ ಮಂಡಳಿ, ಕೇಂದ್ರ ರೈಲ್ವೇ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ನಗರದ ಪ್ರತಿಷ್ಠಿತ ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷರಾಗಿ, ನಗರದ ಹೊರವಲಯದ ಎಸ್.ನಿಜಲಿಂಗಪ್ಪ ಸ್ಮಾರಕ ಪುಣ್ಯಭೂಮಿ ಸ್ಥಳದ ಅಭಿವೃದ್ಧಿ ಹಾಗೂ ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಛಲವಾದಿ ಗುರುಪೀಠದ ಗೌರವಾಧ್ಯಕ್ಷರಾಗಿದ್ದ ಎಚ್.ಹನುಮಂತಪ್ಪ ಅವರು ಹಿರಿಯ ಕಾಂಗ್ರೆಸ್ಸಿಗರಾಗಿ ಪಕ್ಷಕ್ಕೆ ಮಾರ್ಗದರ್ಶನ ಮಾಡಿಕೊಂಡಿದ್ದರು.
ಜಿ.ಎಸ್.ಉಜ್ಜನಪ್ಪ ಅವರ ಅತ್ಯಾಪ್ತರು:
ಹಿರಿಯ ಪತ್ರಕರ್ತರಾದ ಜಿ.ಎಸ್.ಉಜ್ಜಿನಪ್ಪ ಹಾಗೂ ಎಚ್.ಹನುಮಂತಪ್ಪ ಅವರು ಆತ್ಮೀಯ ಗೆಳೆಯರು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮೊದಲ ವರದಿಗಾರರಾಗಿ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿದ್ದರು. ಇದೇ ಕಾಲಕ್ಕೆ ಜಿ.ಎಸ್.ಉಜ್ಜಿನಪ್ಪ ಟೈಮ್ಸ್ ಆಫ್ ಇಂಡಿಯಾ ವರದಿಗಾರರಾಗಿದ್ದರು.
ಕಳೆದ ತಿಂಗಳು ಜಿ.ಎಸ್.ಉಜ್ಜಿನಪ್ಪ ಅಗಲಿದಾಗ ದುಃಖಿತರಾಗಿದ್ದ ಎಚ್.ಹನುಮಂತಪ್ಪ, ಅಗಲಿದ ಗೆಳೆಯನ ತಲೆಯ ಪಕ್ಕದಲ್ಲೇ ಕುಳಿತು ಮೌನಕ್ಕೆ ಶರಣಾಗಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

