CHITRADURGA NEWS | 03 JULY 2026
ಚಿತ್ರದುರ್ಗ: ಶ್ರದ್ಧೆ ಮತ್ತು ಬದ್ಧತೆಯಿಂದ ನಮ್ಮ ವೃತ್ತಿಯಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ಡಯಟ್ ಪ್ರಭಾರಿ ಪ್ರಾಚಾರ್ಯ ಎಸ್.ನಾಗಭೂಷಣ್ ಹೇಳಿದರು.
ಇದನ್ನೂ ಓದಿ: BRC ಶಾಲಾ ಸಿದ್ಧತಾ ಕೇಂದ್ರಗಳಲ್ಲಿ ಹುದ್ದೆ | ಅರ್ಜಿ ಅಹ್ವಾನ
ಡಯಟ್ನಲ್ಲಿ ನಿವೃತ್ತ ಪ್ರಾಚಾರ್ಯ ಎಂ.ನಾಸಿರುದ್ದೀನ್ ಅವರಿಗೆ ಇತ್ತೀಚಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾವು ನಮ್ಮ ವೃತ್ತಿಯನ್ನು ಪ್ರೀತಿಸಬೇಕು. ಸಮರ್ಪಣಾಭಾವದಿಂದ ಕೆಲಸ ನಿರ್ವಹಿಸಬೇಕು. ನಾಸಿರುದ್ದೀನ್ರವರು ಕಾಯಕಯೋಗಿಯಂತೆ ನಮ್ಮ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸಿದ್ದಾರೆ.
ಡಯಟ್ ವತಿಯಿಂದ ನಡೆಯುವ ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಎಡ್ ಲ್ಯಾಬ್ ನಿರ್ಮಾಣದಲ್ಲಿಯೂ ಪ್ರಮುಖ ಪಾತ್ರ ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ನಿವೃತ್ತ ಪ್ರಾಚಾರ್ಯ ಎಂ.ನಾಸಿರುದ್ದೀನ್ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಮುಖ್ಯ ಶಿಕ್ಷಕ, ಶಿಕ್ಷಣಾಧಿಕಾರಿ, ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ಪ್ರಭಾರಿ ಡಿಡಿಪಿಐ ಮತ್ತು ಡಯಟ್ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸಲು ಎಲ್ಲ ಅಧಿಕಾರಿ ವರ್ಗದವರು ಮಾರ್ಗದರ್ಶನ ನೀಡಿದ್ದಾರೆ. ನಾವು ಕೆಲಸ ನಿರ್ವಹಿಸುವ ಕಚೇರಿಯಲ್ಲಿ ಕೌಟುಂಬಿಕ ವಾತಾವರಣ ನಿರ್ಮಿಸಿಕೊಂಡಾಗ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಡಯಟ್ನಲ್ಲಿ ಪ್ರಾಚಾರ್ಯರಾಗಿ 3 ವರ್ಷ 5 ತಿಂಗಳು ಕೆಲಸ ನಿರ್ವಹಿಸಿದ್ದು ಈ ಅವಧಿಯಲ್ಲಿ ಹಿರಿಯ ಉಪನ್ಯಾಸಕರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಜಿಲ್ಲೆಯ ಎಲ್ಲ ಅನುಷ್ಟಾನಾಧಿಕಾರಿಗಳು ನೀಡಿದ ಉತ್ತಮ ಸಹಕಾರದಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
ಇದನ್ನೂ ಓದಿ: ಅಗ್ನಿ ಸುರಕ್ಷತಾ ಪ್ರಾತ್ಯಕ್ಷತೆ ಹಾಗೂ ಅಣಕು ಪ್ರದರ್ಶನ
ಹಿರಿಯ ಉಪನ್ಯಾಸಕ ಅಶ್ವಥ್ನಾರಾಯಣ, ಎಸ್.ಸಿ.ಪ್ರಸಾದ್, ತಿಪ್ಪೇಸ್ವಾಮಿ, ಜ್ಞಾನೇಶ್ವರಿ, ಅನಿತಾ, ಉಪನ್ಯಾಸಕರಾದ ಎಸ್.ಬಸವರಾಜು, ಶಿವಲೀಲ, ರಾಮಣ್ಣ, ಎಲ್.ರೇವಣ್ಣ, ಪದ್ಮ, ಮಂಜುಳಾ, ಶಂಕರನಾಯ್ಕ, ರಂಗಸ್ವಾಮಿ, ತಾಂತ್ರಿಕ ಸಹಾಯಕರಾದ ಅವಿನಾಶ್, ಭ್ರಮರ, ವಿಷಯ ಪರಿವೀಕ್ಷಕರಾದ ಕೆ.ಜಿ.ಪ್ರಶಾಂತ್, ನಿತ್ಯಾನಂದ, ರಂಗನಾಯ್ಕ, ರಾಘವೇಂದ್ರ, ಬಿ.ಆರ್ ಸಿ ಸಂಪತ್ಕುಮಾರ್, ಕಚೇರಿ ಅಧೀಕ್ಷಕರಾದ ಗಿರೀಶ್, ಕವಿತ, ಪ್ರ.ದ.ಸ. ಅಶ್ವಿನಿ, ವಿಜಯಲಕ್ಷ್ಮಿ, ದ್ವಿ.ದ.ಸ. ಚಂದ್ರಶೇಖರ್, ಹೇಮಲತ, ವಿನಯ್, ಶ್ರೀನಿವಾಸ್, ಪರಿಚಾರಕರಾದ ಪಿ. ಬೋಸಯ್ಯ, ಮಂಜುಳಾ, ಡಿ.ದರ್ಜೆ ನೌಕರರಾದ ಗೀತಮ್ಮ, ಝಾನ್ಸಿ, ಯುವರಾಜ್, ನಿರ್ಮಲ ಮತ್ತಿತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
