
CHITRADURGA NEWS | 23 MARCH 2026
ಚಿತ್ರದುರ್ಗ: ಮಠಗಳಿಗೆ ಮನುಷ್ಯನ ಭಾವನೆ, ಭಕ್ತಿ ಹಾಗೂ ಮನಸ್ಸನ್ನು ಜಾಗೃತಗೊಳಿಸುವ ಶಕ್ತಿಯಿದೆ. ಮನುಷ್ಯನ ಒತ್ತಡಗಳನ್ನು ಸಡಿಲಿಸುವ ಜೊತೆಗೆ ನೆಮ್ಮದಿಯ ಬಾಳಿಗೆ ಭದ್ರ ಬುನಾದಿ ಕರುಣಿಸುವ ಪುಣ್ಯಸ್ಥಳವಾಗಿವೆ ಎಂದು ಬೀದರ್ ಜಿಲ್ಲೆ ಎಣುಕಲ್ಲುಗುಡ್ಡದ ಶ್ರೀ ವೀರಭದ್ರ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: ತೊಗರಿ ಬೆಳೆಗಾರರ ಸಂಘದಿಂದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಗೆ ಸನ್ಮಾನ
ನಗರದ ರಂಗಯ್ಯನ ಬಾಗಿಲು ಬಳಿಯಿರುವ ಉಜ್ಜಯಿನಿ ಮಠದಲ್ಲಿ ಶ್ರೀ 1008 ಲಿಂ. ಮರುಳಾರಾಧ್ಯ ಶಿವಾಚಾರ್ಯ ಭಗವತ್ಪಾದರ 31ನೇ ವರ್ಷದ ಪುಣ್ಯ ಸ್ಮರಣೋತ್ಸವದಲ್ಲಿ ಮಾತನಾಡಿದರು.
ಮಕ್ಕಳಿಗೆ ಬಾಲ್ಯದಿಂದಲೇ ಸನ್ನಡತೆ, ಭಾರತೀಯ ಉಡುಗೆ ಮತ್ತು ಇತಿಹಾಸದ ಸತ್ಯಾಂಶವನ್ನು ತಿಳಿಸಬೇಕು. ಪಾಲಕರು ತಮ್ಮ ಮಕ್ಕಳನ್ನು ವಿದೇಶದಲ್ಲಿ ವಿದ್ಯಾಭ್ಯಾಸ ಹಾಗೂ ಕೆಲಸಕ್ಕೆ ಕಳುಹಿಸಿ, ದೇಶದ ಸಂಪತ್ತನ್ನು ವಿದೇಶಕ್ಕೆ ವ್ಯಯಿಸುತ್ತಿದ್ದಿರಿ. ಕೂಡಲೇ ಈ ನಿರ್ಧಾರದಿಂದ ಹೊರ ಬಂದು ಮಕ್ಕಳ ಉತ್ತಮ ಭವಿಷ್ಯಕ್ಕೆ ಸ್ವದೇಶದಲ್ಲೇ ಸಂಪತ್ತನ್ನು ವ್ಯಯಿಸಬೇಕು ಎಂದು ಕರೆ ನೀಡಿದರು.
ಪ್ರಸ್ತುತ ಹಿಂದೂ ಸಮಾಜ ಜಾತಿ ಎಂಬ ವಿಷಬೀಜದಿಂದ ಹೊರಬಂದು, ಸನಾತನ ಧರ್ಮವನ್ನು ಪಾಲಿಸಬೇಕು ಮಠಗಳಿಗೆ ಮನುಷ್ಯನ ಭಾವನೆ, ಭಕ್ತಿ ಹಾಗೂ ಮನಸ್ಸನ್ನು ಜಾಗೃತಗೊಳಿಸುವ ಶಕ್ತಿಯಿದೆ ಮನುಷ್ಯನ ಒತ್ತಡಗಳನ್ನು ಸಡಿಲಿಸುವ ಜೊತೆಗೆ ನೆಮ್ಮದಿ ಬಾಳಿಗೆ ಭದ್ರ ಬುನಾದಿ ಕರುಣಿಸುವ ಪುಣ್ಯಸ್ಥಳ ಮಠಗಳಾಗಿವೆ ಎಂದು ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಗುಡ್ ನ್ಯೂಸ್ | ಕೇಂದ್ರೀಯ ವಿದ್ಯಾಲಯ ಪ್ರಾರಂಭ | ತರಗತಿ ಪ್ರವೇಶಕ್ಕೆ ನೊಂದಣಿಗೆ ಏ.2 ಕೊನೆ ದಿನ
ಲಕ್ಷೇಶ್ವರದ ಕರೇವಾಡಿ ಮಠದ ಶ್ರೀ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಕ್ಕಳಲ್ಲಿ ಅಧ್ಯಾತ್ಮ ಹಾಗೂ ಸಂಸ್ಕಾರವನ್ನು ಬೆಳೆಸಲು ಸತ್ಸಂಗವನ್ನು ಒದಗಿಸಬೇಕಿದೆ. ಶರಣರು, ಸಂತರು ನಿರ್ಮಿಸಿದ ಮಠಗಳು ಜನರಿಗೆ ಮಾರ್ಗದರ್ಶನ ಕೇಂದ್ರಗಳಾಗಿ ಕೆಲಸ ಮಾಡುತ್ತಿವೆ. ಭಾರತ ವಿಶ್ವಗುರುವಾಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುತ್ತಿದೆ.
ಇಡೀ ವಿಶ್ವದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತಿರುವ ಸನ್ನಿವೇಶದಲ್ಲಿ ಭಾರತ ಮತ್ತು ರಾಜ್ಯದ ಜನತೆ ಶಾಂತಿ ಮತ್ತು ನೆಮ್ಮದಿಯಾಗಿ ಬದುಕುತ್ತಿದ್ದಾರೆಂದರೆ ಅದಕ್ಕೆ ರಾಜ್ಯದ ಸಂತರು ಕಾರಣ. ಮಕ್ಕಳನ್ನು ಕೇವಲ ಐಟಿಬಿಟಿ ಉದ್ಯೋಗಕ್ಕೆ ಸೀಮಿತಗೊಳಿಸದೆ ಅವರಲ್ಲಿ ರೈತ ಮತ್ತು ಸೈನಿಕರಾಗುವ ಆಸಕ್ತಿ ಬೆಳೆಸಬೇಕು ಎಂದರು.
ಉಕ್ಕಡಗಾತ್ರಿಯ ಶ್ರೀ ಹಾಲಶಂಕರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಎಳೆವಯಸ್ಸಿನಿಂದಲೇ ಸಂಸ್ಕಾರ, ಸಂಸ್ಕೃತಿ, ಪರಂಪರೆ ಹಾಗೂ ರಾಷ್ಟ್ರದ ಹಿನ್ನೆಲೆ ಪರಿಚಯಿಸಬೇಕು. ಹೆಣ್ಣುಮಕ್ಕಳು ತುಂಡು ಬಟ್ಟೆಗಳನ್ನು ಧರಿಸುವುದನ್ನು ಪಾಲಕರು ತಪ್ಪಿಸಬೇಕು. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸನಾತನ ಧರ್ಮವನ್ನು ಬೋಧಿಸಬೇಕು ಎಂದು ಸೂಚಿಸಿ ರಾಷ್ಟ್ರದ ಹಿತಚಿಂತನೆ, ಮಕ್ಕಳ ಸರ್ವಾಂಗೀಣ ಬೆಳವಣಿಗೆ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 23 | ಮೆಕ್ಕೆಜೋಳ, ಶೇಂಗಾ, ರಾಗಿ ರೇಟ್…
ಕಾರ್ಯಕ್ರಮದಲ್ಲಿ ಉಜ್ಜಯಿನಿ ಮಠದ ಅಭೀಷೇಕ ದೇವರು ಹಾಗೂ ಕಾರ್ಯದರ್ಶಿ ಯು.ಎಂ.ಆರ್. ಈಶ್ವರ ಪ್ರಸಾದ್, ವೀರಶೈವ ಸಮಾಜದ ಮುಖಂಡರಾದ ಎಸ್.ಷಣ್ಮುಖಪ್ಪ, ತಿಪ್ಪಕ್ಕ ಜಯ್ಯಪ್ಪ ಇತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

