
CHITRADURGA NEWS | 01 DECEMBER 2025
ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘ ಮತ್ತು ತಾಲ್ಲೂಕು ನಿವೃತ್ತ ನೌಕರರ ಮನರಂಜನಾ ಮತ್ತು ಸಾಂಸ್ಕøತಿಕ ಸಂಘದ ವತಿಯಿಂದ ನಗರದ ಕ್ರೀಡಾ ಭವನದಲ್ಲಿ 2026ನೇ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ, 75 ವರ್ಷ ತುಂಬಿದ ಸಂಘದ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರ ಸಂಘ | 2026ರ ಕ್ಯಾಲೆಂಡರ್ ಬಿಡುಗಡೆ
ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಇಂಜಿನಿಯರ್ ಕೆ.ಜಿ.ಜಗದೀಶ್ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಕೆಲಸ ಮಾಡಿ ಈಗ ನಿವೃತ್ತಿ ಹೊಂದಿರುವ ನೀವುಗಳು, ನಿಮ್ಮ ಅನುಭವವನ್ನು ಇಂದಿನ ಹೊಸದಾಗಿ ನೇಮಕವಾಗಿರುವ ನೌಕರರಿಗೆ ತಿಳಿಸುವುದರ ಮೂಲಕ ಸರ್ಕಾರಿ ಕೆಲಸ ಸರಿದಾರಿಯಲ್ಲಿ ನಡೆಯವಲ್ಲಿ ಮುಂದಾಗಬೇಕಿದೆ ಎಂದು ಕರೆ ನೀಡಿದರು.
ನಾನು ಸಹಾ 20 ವರ್ಷಗಳ ಕಾಲ ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಈ ಸಮಯದಲ್ಲಿ ನೌಕರರ ಹಲವಾರು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಇದ್ದಲ್ಲದೆ ನಮ್ಮ ನೌಕರರು ತೊಂದರೆಗೆ ಸಿಲಿಕಿದಾಗ ಅವರನ್ನು ಅದರಿಂದ ಪಾರು ಮಾಡಲಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿದ ಮತದಾರರಿಗೆ ಯಾವುದೇ ಆನ್ಯಾಯ ಮಾಡಿಲ್ಲ. ಅವರಿಗೆ ನ್ಯಾಯ ನೀಡುವಂತ ಕಾರ್ಯ ಮಾಡಿದ್ದೇನೆ ಎಂದರು.
ಈಗ ಸ್ಥಾಪನೆಯಾಗಿರುವ ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘ ಉತ್ತಮವಾದ ಕಾರ್ಯ ಮಾಡಲಿ. ಆರೋಗ್ಯ, ಪಿಂಚಿಣಿ ಸಮಸ್ಯೆ, ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಅವರ ಮನಸ್ಸನ್ನು ಬೇರೆ ಕಡೆಯಲ್ಲಿ ತೊಡಗುವಂತ ಕಾರ್ಯವನ್ನು ಮಾಡಿ. ನಿಮ್ಮ ಸಂಘ ಮುಂದಿನ ದಿನದಲ್ಲಿ ಕೈಗ್ಗೊಳ್ಳುವಂತ ವಿವಿಧ ರೀತಿಯ ಜನಪರವಾದ ಕಾರ್ಯಗಳಲ್ಲಿ ನಾನು ಸಹಾ ಕೈಜೊಡಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ಜನವರಿ 1 | ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ ರೇಟ್
2026ನೇ ಹೊಸ ವರ್ಷದ ಕ್ಯಾಲೆಂಡರ್ ರನ್ನು ಬಿಡುಗಡೆ ಮಾಡಿದ ಜಿಲ್ಲಾ ವಿಕಲಚೇತನ ಕಲ್ಯಾಣಧಿಕಾರಿಗಳಾದ ಕೆ.ವೈಶಾಲಿ ಮಾತನಾಡಿ, ವರ್ಷದ ಆರಂಭದಲ್ಲಿ ಮಾಡಿದ ಕಾರ್ಯಗಳು ವರ್ಷ ಪೂರ್ತಿಯಾಗಿ ನಡೆಯುತ್ತವೆ ಎಂಬ ಪ್ರತೀತಿ ಇದೆ. ಈ ಹಿನ್ನಲೆಯಲ್ಲಿ ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘ ಮತ್ತು ತಾಲ್ಲೂಕು ನಿವೃತ್ತ ನೌಕರರ ಮನರಂಜನಾ ಮತ್ತು ಸಾಂಸ್ಕøತಿಕ ಸಂಘದ ಹೊಸ ವರ್ಷದ ಪ್ರಾರಂಭ ದಿನದಂದು ಉತ್ತಮವಾದ ಕಾರ್ಯವನ್ನು ಮಾಡಿದೆ.
ಇದು ವರ್ಷ ಪೂರ್ತಿಯಾಗಿ ನಡೆಯಲಿ ಎಂದು ಹಾರೈಸಿ, ನೀವುಗಳು ತಮ್ಮ ಕೆಲಸದ ಸಮಯದಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ಅಲಂಕರಿಸಿ ಸರ್ಕಾರದ ಸೇವೆಯನ್ನು ಮಾಡಿದ್ದೀರಾ. ಈ ನಿಮ್ಮ ಅನುಭವವನ್ನು ಇಂದಿನ ಯುವ ಜನಾಂಗಕ್ಕೆ ಧಾರೆ ಎರೆಯಬೇಕಿದೆ. ನಾನು ನಿವೃತ್ತರು ಎಂದು ಮಾನಸಿಕವಾಗಿ ಕುಗ್ಗ ಬೇಡಿ. ಈ ರೀತಿಯಾದ ಸಂಘಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡಿ. ಇದರಿಂದ ನಿಮಗೆ ಮಾನಸಿಕಮಾಗಿ ದೈಹಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂದರು.
ಇಲಾಖೆ ವತಿಯಿಂದ ಹಿರಿಯ ನಾಗರೀಕರಿಗೆ ಉತ್ತಮವಾದ ಸೌಲಭ್ಯ ನೀಡಲಾಗುತ್ತಿದೆ. ನೀವುಗಳು ಸದಸ್ಯರಾಗುವುದರ ಮೂಲಕ ಇದನ್ನು ಪಡೆಯಬಹುದಾಗಿದೆ. ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಇದಕ್ಕೆ ನಮ್ಮ ಇಲಾಖೆಯೂ ಸಹಾ ಸಹಾಯ ಮಾಡಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜನವರಿ 01 | ಹತ್ತಿ ರೇಟ್ ಎಷ್ಟಿದೆ?
ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಮನರಂಜನಾ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ಬಿ.ಕೆ.ಹನುಮಂತಪ್ಪ ಮಾತನಾಡಿದರು.
ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಬಿ.ಮಹಾಂತೇಶ್, ತಾಲ್ಲೂಕು ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ನಾಗರಾಜ್ ಸಂಗಂ, ಕಾರ್ಯಾದ್ಯಕ್ಷ ಹೆಚ್.ಗೋವಿಂದಯ್ಯ, ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘ ಮತ್ತು ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಮನರಂಜನಾ ಮತ್ತು ಸಾಂಸ್ಕøತಿಕ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್. ಪರಮೇಶ್ವರಪ್ಪ, ಖಂಚಾಚಿ ಎಸ್.ಹಾಲಾನಾಯ್ಕ, ಪ್ರೇಮಕ್ಕ ಸೇರಿದಂತೆ ತಾಲ್ಲೂಕು ನಿವೃತ್ತ ನೌಕರರ ಮನರಂಜನಾ ಕೇಂದ್ರದ ಪದಾಧಿಕಾರಿಗಳು, ನಿರ್ದೆಶಕರು, ಸಲಹಾ ಸಮಿತಿ ಸದಸ್ಯರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
