
CHITRADURGA NEWS | 13 October 2025
ಹೊಸದುರ್ಗ: ಸಾಣೇಹಳ್ಳಿಯ ಶ್ರೀಮಠದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಸಾನ್ನಿಧ್ಯದಲ್ಲಿ ರಾಷ್ಟ್ರೀಯ ನಾಟಕೋತ್ಸವ -2025 ರ ಪೂರ್ವಭಾವಿ ಸಭೆ ನಡೆಯಿತು.
ಇದನ್ನೂ ಓದಿ: RSS@100 | ಕೋಟೆನಾಡಲ್ಲಿ ಆಕರ್ಷಕ ಪಥ ಸಂಚಲನ
ನವೆಂಬರ್ 2 ರಿಂದ 7 ರವರೆಗೆ ಆರು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ. ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ಮತ್ತು ನಾಟಕಗಳ ಪ್ರದರ್ಶನ ನಡೆಯಲಿವೆ.
ಮುಖ್ಯ ವಿಚಾರ ಸಂಕಿರಣದ ಕಾರ್ಯಕ್ರಮಗಳು ನಡೆಯಲಿವೆ. ಶಿವಕುಮಾರ ರಂಗಮಂದಿರದಲ್ಲಿ ಪ್ರತಿದಿನ ಬೆಳಗ್ಗೆ ಪ್ರಾರ್ಥನಾ ಕಾರ್ಯಕ್ರಮಗಳು ಜರುಗಲಿವೆ.
ನಾಟಕೋತ್ಸವದಲ್ಲಿ ಶಿವಸಂಚಾರದ ೩ ನಾಟಕಗಳು ಮತ್ತು ಬೇರೆ ಬೇರೆ ಭಾಗಗಳಿಂದ ನಾಟಕಗಳು ಪ್ರದರ್ಶನಗೊಳ್ಳುವವು. ಪ್ರತಿದಿನದ ವಿಚಾರ ಮಾಲಿಕೆ, ವಚನ ಸಂಗೀತ, ನೃತ್ಯರೂಪಕ, ಸಾಧಕರಿಗೆ ಅಭಿನಂದನೆ, ರಾಜಕೀಯ ನೇತಾರರ, ವಿದ್ವಜನರ, ಚಿಂತಕರ ಮಾತುಗಳು, ಸ್ವಾಮಿಜಿಗಳ ಆಶೀರ್ವಚನ, ಶಿವಕುಮಾರ ಪ್ರಶಸ್ತಿ ಪ್ರದಾನ ಮುಂತಾದ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ನಡೆಯಲಿವೆ.
ಇದನ್ನೂ ಓದಿ: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ | ಅರ್ಜಿ
ಅತಿಥಿಗಳು, ಸ್ವಾಮಿಗಳು, ಆಯ್ದುಕೊಳ್ಳಬಹುದಾದ ವಿಚಾರಗಳು, ವಿಚಾರ ಸಂಕಿರಣ, ನಾಟಕಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಶಿವಮೊಗ್ಗದ ವರ್ತಕ ಹೆಚ್.ಓಂಕಾರಪ್ಪ, ಎಸ್ ಸಿದ್ಧಪ್ಪ, ಅಜ್ಜಂಪುರದ ಎ.ಸಿ.ಚಂದ್ರಣ್ಣ, ಕೆ.ಸಿ.ಶಿವಮೂರ್ತಿ, ಹೆಬ್ಬಳ್ಳಿ ಮಲ್ಲಿಕಾರ್ಜುನ, ಅಜ್ಜಪ್ಪ, ಎಸ್. ಕೆ.ಪರಮೇಶ್ವರಯ್ಯ, ಕೆ. ಸಿ. ಶಿವಮೂರ್ತಿ, ವೀರಶೈವ ನೌಕರರ ಸಂಘದ ಅಧ್ಯಕ್ಷ ಶಶಿಧರ, ಲೋಕೇಶ್, ಬಿ.ಪಿ ಓಂಕಾರಪ್ಪ, ಕೊಮಾರನಹಳ್ಳಿ ರವಿಕುಮಾರ್, ಸಿದ್ದಯ್ಯ, ದೃವಕುಮಾರ್, ಕೆ.ಆರ್.ಆನಂದಪ್ಪ, ಅಜ್ಜಂಪುರ ಪಟ್ಟಣ ಪಂಚಾಯಿತಿ ಸದಸ್ಯ ಅತ್ತತ್ತಿ ಮಧು, ಅಣ್ಣಪ್ಪ, ಶಿವಮೂರ್ತಯ್ಯ, ಸಾಣೇಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು, ಕಲಾಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

