
CHITRADURGA NEWS | 06 SEPTEMBER 2025
ಹೊಸದುರ್ಗ: ಕಳೆದ 23 ವರ್ಷಗಳಿಂದ ಪ್ರತಿ ತಿಂಗಳು 10 ನೇ ತಾರೀಖು ಸಂಜೆ 6.30 ಕ್ಕೆ ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಸುಜ್ಞಾನ ಸಂಗಮ ಕಾರ್ಯಕ್ರಮ ನಡೆಯಲಿದೆ. ಕಾಯಕಯೋಗಿ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸುವವರು.
ಇದನ್ನೂ ಓದಿ: ಸೆ.22 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭ | ವಿದ್ಯಾರ್ಥಿಗಳಿಂದ ಮನೆ ಮನೆ ಭೇಟಿ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಲಿಂಗದಹಳ್ಳಿ ಮುಖ್ಯ ಶಿಕ್ಷಕರಾದ ಎಲ್.ಅರ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಸರ್ಕಾರಿ ಪದವಿ ಪೂರ್ವ ಕಾಲೇಜ್ ಸಾಣೆಹಳ್ಳಿ ನಿವೃತ್ತ ಪ್ರಾಂಶುಪಾಲರಾದ ಈಶ್ವರಪ್ಪ ಕಾರ್ಯಕ್ರಮ ಉದ್ಘಾಟನೆ ನೆರವೇರಿಸುವವರು. ಹೊಸದುರ್ಗ ಶಿಕ್ಷಣ ಇಲಾಖೆ ಚಂದ್ರಶೇಖರ್ ರಂಗಾಪುರ ಉಪನ್ಯಾಸ ನೀಡುವರು.
ಭಜನಾ ಸೇವೆಯನ್ನು ಶ್ರೀ ಮಾರುತಿ ಯುವಕ ಸಂಘ ಹಾಗಲಕೆರೆ ನೆರವೇರಿಸಿ ಕೊಡುವವರು ಎಂದು ಪ್ರಕಟಣೆ ತಿಳಿಸಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

