
CHITRADURGA NEWS | 17 AUGUST 2025
ಚಿತ್ರದುರ್ಗ ನಗರದ ಬಿವಿಕೆಎಸ್ ಲೇಔಟ್ ಮುಂಭಾಗದ ಭೀಮಸಮುದ್ರ ಮುಖ್ಯ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಈ ರಸ್ತೆಯ ಮೂಲಕವೇ ಶಾಲಾ ಕಾಲೇಜ್ ಗಳಿಗೆ ವಾಹನಗಳು ಓಡಾಡುತ್ತವೆ, ರೈತರು ಸಾರ್ವಜನಿಕರು ಈ ರಸ್ತೆಯ ಮೂಲಕವೇ ಮಾಳಪ್ಪನಹಟ್ಟಿ, ಜಾಲಿಕಟ್ಟೆ, ಸಿದ್ದಾಪುರ, ಮಾನಂಗಿ, ಹಿರೇಗುಂಟನೂರು, ಬೊಮ್ಮೇನಹಳ್ಳಿ, ಭೀಮಸಮುದ್ರ ಸೇರಿದಂತೆ ಹಳ್ಳಿಗಳಿಗೂ ಹೋಗುತ್ತಾರೆ.
ಹೆಚ್ಚಾಗಿ ಓಡಾಡುವ ಈ ರಸ್ತೆಯಲ್ಲಿ ನಗರಸಭೆ ಮ್ಯಾನ್ ಹೋಲ್ ಚರಂಡಿಯ ಮುಚ್ಚಳವನ್ನು ಆವರಿಸಿರುವ ಆರು ಕಾಂಕ್ರೀಟ್ ಚಪ್ಪಡಿಗಳ ಮೇಲೆ ಒಂದು ಚಪ್ಪಡಿ ಇಟ್ಟು ಬಿಟ್ಟಿದ್ದಾರೆ, ಅದರ ಮುಂದೆ ಒಂದು ಬ್ಯಾರಿಕೇಡ್ ಇರಿಸಿದ್ದಾರೆ.
ಸುಮಾರು ವರ್ಷಗಳಿಂದಲ್ಲೂ ವಾಹನ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಹಗಲು ವೇಳೆ ಗುಂಡಿಗಳನ್ನು ನೋಡಿಕೊಂಡು ಎಚ್ಚರದಿಂದ ವಾಹನಗಳನ್ನು ಚಲಾಯಿಸುವುದು ಆದರೆ ರಾತ್ರಿ ವೇಳೆ ಪಾದಚಾರಿಗಳನ್ನು ಹಾಗೂ ವಾಹನ ಸವಾರರನ್ನು ದೇವರೇ ಕಾಪಾಡಬೇಕು ಎಂದು ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಎ.ಸಿ.ಅಬ್ಬು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದ್ದಾರೆ.
ಹಾಗಾಗಿ ಕೂಡಲೇ ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮ್ಯಾನ್‌ಹೋಲ್‌ಗಳನ್ನು ದುರಸ್ತಿ ಪಡಿಸಬೇಕು.
ಎಸ್. ಸಿ.ಅಬ್ಬು,
ಜೆಡಿಎಸ್ ವಿದ್ಯಾರ್ಥಿ ಘಟಕದ ಜಿಲ್ಲಾ ಅಧ್ಯಕ್ಷರು,


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
