
CHITRADURGA NEWS | 30 JULY 2025
ಚಿತ್ರದುರ್ಗ: ಚಿತ್ರದುರ್ಗದ ರೋಟರಿ ಟ್ರಸ್ಟ್. ಮತ್ತು ಯುವಜಯ ಫೌಂಡೇಶನ್ನಿಂದ ಯುವ ಜನರಿಗಾಗಿ ಉದ್ಯೋಗ, ಕೌಶಲ ವೃದ್ಧಿಗಾಗಿ ಕೆರಿಯರ್ ಕನೆಕ್ಟ್ ಎಂಬ ವಿಶೇಷ ತರಬೇತಿ ಹಮ್ಮಿಕೊಳ್ಳಲಾಗಿದೆ.
ಕಾರ್ಪೋರೇಟ್ ತರಬೇತಿ ಇದಾಗಿದ್ದು,ಚಿತ್ರದುರ್ಗದ ಚಳ್ಳಕೆರೆ ರಸ್ತೆಯಲ್ಲಿ ಇರುವ SRBMS ರೋಟರಿ ಸೇವಾ ಭವನ ದಲ್ಲಿ ಹತ್ತು ವಾರಗಳ ಕಾಲ ಟ್ರೈನಿಂಗ್ ದೊರೆಯಲಿದೆ.

ಇದನ್ನೂ ಓದಿ: ನವೋದಯ ವಿದ್ಯಾಲಯ | 9 ಮತ್ತು 11ನೇ ತರಗತಿ ಪ್ರವೇಶಕ್ಕೆ ಅರ್ಜಿ
ಬೆಂಗಳೂರಿನಲ್ಲಿ ಎರಡು ವಾರಗಳ ಕಾಲ ಉದ್ಯೋಗಕ್ಕೆ ಪ್ಲೇಸ್ಮೆಂಟ್ ಸೇವೆಯನ್ನೂ ನೀಡಲಾಗುತ್ತದೆ. ನಿರುದ್ಯೋಗಿ ಯುವಕರಿಗೆ ಯುವತಿಯರಿಗೆ ಇದೊಂದು ಸುವರ್ಣಾವಕಾಶ ಆಗಿದ್ದು, ಆಗಸ್ಟ್ 5 2025 ರಿಂದ ತರಬೇತಿ ಪ್ರಾರಂಭವಾಗಲಿದೆ.
ತರಬೇತಿಯಲ್ಲಿ ಪ್ರೊಫೆಷನಲ್ ಇಂಗ್ಲೀಷ್, ವಿಶ್ಲೇಷಣಾತ್ಮಕ ಕೌಶಲಗಳ ವೃದ್ಧಿ, ಸಂದರ್ಶನದ ಸಿದ್ಧತೆಗಳ ಕುರಿತು ತರಬೇತಿ ನೀಡಲಾಗುತ್ತದೆ.
ತರಬೇತಿ ಅವಧಿಯಲ್ಲಿ ಕಂಪ್ಯೂಟರ್ ಸೌಲಭ್ಯವೂ ದೊರೆಯಲಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ರಿಯಾಯಿತಿ ದೊರೆಯಲಿದೆ.
ಇದನ್ನೂ ಓದಿ: ಪ್ರತಿದಿನ ರಾತ್ರಿ ಕೊತ್ತಂಬರಿ ಎಲೆಯ ನೀರನ್ನು ಕುಡಿದರೆ ಆರೋಗ್ಯಕ್ಕೆ ಸಂಬಂಧಿಸಿದ ಈ ಸಮಸ್ಯೆಗಳು ದೂರವಾಗುತ್ತವೆಯಂತೆ
26 ವರ್ಷದೊಳಗಿನ BA. B.COM, BSc, BBA, M.Com, MBD, MSW ಸೇರಿದಂತೆ ಯಾವುದೇ ಪದವಿ ಪಡೆದ ಯುವಕ, ಯುವತಿಯರು ಈ ತರಬೇತಿಗೆ ಸೇರಬಹುದಾಗಿದೆ.
ನೋಂದಣಿಗಾಗಿ ಚಿತ್ರದುರ್ಗ ನಗರದ ಚಳ್ಳಕೆರೆ ರಸ್ತೆಯಲ್ಲಿ, ಬಾಷ್ ಸರ್ವೀಸ್ ಸೆಂಟರ್ ಹಿಂಭಾಗದ SRBMS ರೋಟರಿ ಸೇವಾ ಭವನಕ್ಕೆ ಭೇಟಿ ನೀಡಬಹುದಾಗಿದೆ. ಸಂಪರ್ಕಕ್ಕಾಗಿ ಮೊ.7019425659
ಇದನ್ನೂ ಓದಿ: ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಜಿಪಂ ನೂತನ ಸಿಇಓ ಡಾ.ಆಕಾಶ್ | ಜೆಜೆಎಂ ಕಾಮಗಾರಿ ಮುಗಿಸಲು ಸೂಚನೆ
SRBMS ರೋಟರಿ ಸೇವಾ ಭವನದಲ್ಲಿ ದೊರೆಯುವ ಇತರ ಸೌಲಭ್ಯಗಳು:
1 ಅತ್ಯಾಧುನಿಕ ಹವಾನಿಯಂತ್ರಿತ ಡೈಯಾಲಿಸಿಸ್ ಸೇವೆಗಳು, ಕಡಿಮೆ ದರದಲ್ಲಿ
2 ಅತ್ಯುತ್ತಮ ಸೌಲಭ್ಯವುಳ್ಳ ಫಿಸಿಯೋತೆರಪಿ ಸೆಂಟರ್
3 ಲ್ಯಾಬೋರೇಟರಿ
4 tally ಕಲಿಕಾ ಕೇಂದ್ರ


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
