
CHITRADURGA NEWS | 18 July 2025
ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಮುತ್ತಿಗಾರಹಳ್ಳಿ ಗ್ರಾಮದ ರಿ.ಸ.ನಂ.31 ರಲ್ಲಿನ ಒತ್ತುವರಿಯಾದ ಸರ್ಕಾರ ಗೋಮಾಳ ಜಮೀನನ್ನು ತೆರವುಗೊಳಿಸಿ ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಶ್ರೀಶೈಲ ಮಲ್ಲಿಕಾರ್ಜುನ ಮುತ್ತಿಗಾರ ದೇವರ ಎತ್ತುಗಳ ಮೇವಿಗಾಗಿ ಮೀಸಲಿರುಸುವಂತೆ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಡಾ.ಗರೇಗಲ್ ಪಾಪಯ್ಯರ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ | ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ | ಅರ್ಜಿ ಅಹ್ವಾನ
ಚಿತ್ರದುರ್ಗ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯ ಹೆಚ್ಚು ವಾಸಿಸುತ್ತಿದ್ದು ಕುರಿ ಮೇಕೆ ದನಗಳನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದು ಹಸು ಮತ್ತು ಎತ್ತುಗಳನ್ನು ದೇವರು ಎಂದು ಪೂಜಿಸುವ ಪದ್ಧತಿ ಇದ್ದು ದೇವರ ಎತ್ತುಗಳನ್ನು ಕಿಲಾರಿ ಮತ್ತು ಕಾವಾಳಿಗಳು ಸಂರಕ್ಷಿಸಿಕೊಂಡು ಬರುತ್ತಿದ್ದು ದೈವ ಭಕ್ತಿಯಿಂದ ಪೋಷಿಸಿಕೊಂಡು ಬರಲಾಗಿದೆ.
ಮ್ಯಾಸ ಬೇಡ ಜನಾಂಗದ ಗಟ್ಟಿಮುತ್ತಿನಾಯಕ, ಮೀಸಲು ನಾಯಕ, ಬೋಸೆನಾಯಕ, ಎದ್ದಾರು, ಬೋಡೆಪಾಡುಗೆ ಸೇರಿದ ಕುಲಗಳು ತಮ್ಮ ಮನೆ ದೇವರನ್ನು ಈ ಎತ್ತುಗಳ ಆಸ್ಥಾನಕ್ಕೆ ಕರೆದುಕೊಂಡು ಬಂದು ಪೂಜೆ ಮಾಡುವ ಸಂಪ್ರದಾಯವಿದೆ ಅಲ್ಲದೆ ಶ್ರಾವಣ, ದಸರಾ, ದೀಪಾವಳಿ ಮತ್ತು ಯುಗಾದಿಯ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಈ ಮ್ಯಾಸ ನಾಯಕರು ತಮ್ಮ ಕುಟುಂಬದೊಂದಿಗೆ ಬಂದು ಈ ಸನ್ನಿಧಿಯಲ್ಲಿ ತಂಗಿ ಮರುದಿನ ಹೋಗುತ್ತಾರೆ.
ಪಶುಗಳನ್ನು ದೈವೀ ನೆಲೆಯಲ್ಲಿ ಕಾಣುವ ಈ ಸಮುದಾಯದ ದೇವರ ಎತ್ತುಗಳ ಮೇವುಗಾಗಿ ಮುತ್ತಿಗಾರಹಳ್ಳಿಯ ಸರ್ಕಾರಿ ಗೋಮಾಳ ಒತ್ತುವರಿಯನ್ನು ತೆರವುಗೊಳಿಸಿ ಮುತ್ತಿಗಾರ ಎತ್ತುಗಳಿಗೆ ಮೀಸಲಿಡುವಂತೆ ಜಿಲ್ಲಾಡಳಿತ ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ದಿನ ಭವಿಷ್ಯ | ಜುಲೈ 18 | ಕೈಗೊಂಡ ವ್ಯವಹಾರಗಳಲ್ಲಿ ಅಡೆತಡೆಗಳು, ಆಸ್ತಿ ವಿವಾದಗಳು, ದೂರದ ಪ್ರಯಾಣ ಬೇಡ
ಈ ವೇಳೆ ಮ್ಯಾಸ ನಾಯಕ ಬುಡಕಟ್ಟು ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ದೊಡ್ಡಮನಿ ಪ್ರಸಾದ್, ಕೆ.ಬಿ.ಓಬಣ್ಣ, ಕೆ.ಬಿ.ತಿಪ್ಪೇಸ್ವಾಮಿ, ಪಾಪಣ್ಣ, ಮಂಜಣ್ಣ, ಚಂದ್ರಣ್ಣ, ಕಿಲಾರಿ ಪಾಪಯ್ಯ, ಮುತ್ತಯ್ಯ, ಅಜ್ಜನ ಪಾಪಯ್ಯ, ಎಸ.ಪಿ.ಓಬಣ್ಣ, ಹೆಚ್.ಎಂ. ಬಾಲಚಂದ್ರ ನಾಯಕ, ಬಿ.ಬೋರಯ್ಯ, ಮಲ್ಲಯ್ಯ, ಬೋರಯ್ಯ, ದೊಡ್ಡಟ್ಟಿ ಚಂದ್ರಣ್ಣ, ಮಲ್ಲೇಶಪ್ಪ ಮತ್ತಿತರರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
