
CHITRADURGA NEWS | 10 NOVEMBER 2024
ಚಳ್ಳಕೆರೆ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ (BUS) ಬಸ್ಸೊಂದು ಪಲ್ಟಿಯಾಗಿರುವ ಘಟನೆ ಬೆಳ್ಳಂ ಬೆಳಗ್ಗೆ ನಡೆದಿದೆ.
ಬಳ್ಳಾರಿ ಶಿವಮೊಗ್ಗ ಸಂಚಾರ ಮಾಡುವ ಖಾಸಗಿ ಬಸ್ ಬೆಳಗ್ಗೆ ಬಳ್ಳಾರಿಯಿಂದ ಚಳ್ಳಕೆರೆ ಕಡೆಗೆ ಬರುವಾಗ ಈ ಘಟನೆ ನಡೆದಿದೆ.
ಚಳ್ಳಕೆರೆ ಪಟ್ಟಣದ ಶಿವಗಂಗಾ ಪೆಟ್ರೋಲ್ ಬಂಕ್ ಬಳಿ ಈ ದುರ್ಘಟನೆ ನಡೆದಿದೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಹರಿದು ಬಂತು 1 ಸಾವಿರ ಕ್ಯೂಸೆಕ್ ನೀರು
ಪಲ್ಟಿಯಾದ ಬಸ್ಸಿನಲ್ಲಿ ಸುಮಾರು 50 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಆಗಿಲ್ಲ. ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಬಸ್ಸಿನಲ್ಲಿ ಚಾಲಕನ ಹಿಂಭಾಗದಲ್ಲಿ ಬಾಕ್ಸೊಂದರಲ್ಲಿ ಪಾರಿವಾಳಗಳಿದ್ದು, ಬಸ್ ಹೋಗುತ್ತಿದ್ದಾಗ ಒಂದು ಪಾರಿವಾಳ ಬಾಕ್ಸ್ನಿಂದ ಹೊರಗೆ ಹಾರಿದೆ.
ಇದನ್ನೂ ಓದಿ: ದುಬೈ ಕನ್ನಡ ರಾಜ್ಯೋತ್ಸವಕ್ಕೆ ಎಸ್.ಲಿಂಗಮೂರ್ತಿಗೆ ಆಹ್ವಾನ
ಈ ಪಾರಿವಾಳ ಹಿಡಿಯಲು ಚಾಲಕ ಪ್ರಯತ್ನಿಸಿದ್ದು, ಈ ವೇಳೆ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಚಳ್ಳಕೆರೆ ಠಾಣೆ ಸಿಪಿಐ ಸತೀಶ್ ನಾಯ್ಕ್ ಭೇಟಿ ನೀಡಿ ಪರಿಶೀಲಿಸಿದ್ದು, ಗಾಯಾಳುಗಳನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

