
CHITRADURGA NEWS | 10 MAY 2024
ಚಿತ್ರದುರ್ಗ: ನಗರದ ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಫೂರ್ತಿ- 2024ರ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ರಾಮನ ಅವತಾರ ಚಿತ್ರದ ನಾಯಕ ರಿಷಿ, ನಿರ್ದೇಶಕ ವಿಕಾಸ್ ಪಂಪಾಪತಿ ಮತ್ತು ಚಿತ್ರತಂಡದವರು ಆಗಮಿಸಿದ್ದರು.
ಇದನ್ನೂ ಓದಿ: ಮಹಾದೇವಪುರದಲ್ಲಿ ಭರ್ಜರಿ ಮಳೆ | ನೀರು ಹರಿಯುವ ವಿಡಿಯೋ ವೈರಲ್
ಚಿತ್ರನಟ ರಿಷಿ ಮಾತನಾಡಿ, ವಿದ್ಯಾರ್ಥಿ ಜೀವನವನ್ನು ಖುಷಿಯಿಂದ ಅನುಭವಿಸಬೇಕು. ಕಲಿಕೆ ಬಹಳಷ್ಟಿದೆ. ವಿದ್ಯಾರ್ಥಿ ಜೀವನದಲ್ಲಿ ಕಲಿಕೆಗಿಂತ ಹೆಚ್ಚಿನದಾಗಿ ಹೊರಜಗತ್ತಿನಲ್ಲಿ ಕಲಿಯುವುದು ಸಾಕಾಷ್ಟಿದೆ.
ವಿದ್ಯಾಬ್ಯಾಸದ ನಂತರ ನಿಮಗೆ ಇಷ್ಟವಾದ ಕ್ಷೇತ್ರವನ್ನು ಆಯ್ದುಕೊಂಡು ಜೀವನವನ್ನು ರೂಪಿಸಿಕೊಳ್ಳಿ.
ಇದನ್ನೂ ಓದಿ: SSLC RESULT | ಪಾತಾಳಕ್ಕೆ ಕುಸಿದ ಚಿತ್ರದುರ್ಗ ಫಲಿತಾಂಶ

ಸಾಮಾಜಿಕ ಜಾಲತಾಣಗಳ ಬಳಕೆಗೆ ಆದಷ್ಟೂ ಕಡಿಮೆ ಸಮಯ ಮೀಸಲಿಡಿ. ಚಿತ್ರದುರ್ಗದ ಜನತೆ ನನ್ನ ಚಿತ್ರಗಳನ್ನು ಉತ್ತಮವಾಗಿ ಸ್ವೀಕರಿಸಿದ್ದಾರೆ. ನನ್ನ ರಾಮನ ಅವತಾರ ಚಲನಚಿತ್ರ ಇದೇ 10ನೇ ತಾರೀಖು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಚಿತ್ರದುರ್ಗದವರೇ ಆದ ವಿಕಾಸ್ ಪಂಪಾಪತಿ ನಿರ್ದೇಶನ ಮಾಡಿದ್ದಾರೆ. ಚಿತ್ರದುರ್ಗ ಹುಡುಗ ನಿರ್ದೇಶಿಸಿರುವ ಈ ಚಿತ್ರವನ್ನು ಪ್ರೋತ್ಸಾಹಿಸಿ ಎಂದು ನುಡಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಗೆ SSLC ಟಾಪರ್ಸ್ ಇವರೇ ನೋಡಿ
ಈ ವೇಳೆ ಪ್ರಾಂಶುಪಾಲರಾದ ಡಾ.ಭರತ್.ಪಿ.ಬಿ, ಸ್ಫೂರ್ತಿ-2024ರ ಮುಖ್ಯ ಸಂಚಾಲಕರಾದ ಡಾ.ಬಿ.ಜಿ ಕುಮಾರಸ್ವಾಮಿ, ರಾಮನ ಅವತಾರ ಚಲನಚಿತ್ರದ ನಿರ್ದೇಶಕ ವಿಕಾಸ್ ಪಂಪಾಪತಿ ಹಾಗೂ ಚಿತ್ರತಂಡದವರು, ರೂಪದರ್ಶಿ ಡಾ. ಸೃಜನಾ ವೀರೇಂದ್ರ ಕುಮಾರ್, ಫಿಟ್ನೆಸ್ ಕೋಚ್ ಶಿವರಾಜ್ ಪೂಜಾರಿ, ಇ.ಸಂತೋಷ್, ವಿವಿಧ ಇಲಾಖಾ ಮುಖ್ಯಸ್ಥರು, ಸಿಬ್ದಂದಿ ವರ್ಗದವರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

