
ಚಿತ್ರದುರ್ಗ ನ್ಯೂಸ್.ಕಾಂ:
ಸಾಮಾನ್ಯವಾಗಿ ಮುದುಕರು ಮಕ್ಕಳಾದರು. ಮಕ್ಕಳಂತೆ ಕುಣಿದು ಕುಪ್ಪಳಿಸಿದರು ಎನ್ನುವ ಮಾತುಗಳನ್ನು ಕೇಳಿರುತ್ತೇವೆ. ಆದರೆ, ಮಕ್ಕಳು ಮುದುಕರಾಗುವುದು ಕೇಳಿದ್ದೀರಾ.
ಹೌದು, ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ‘ಅಜ್ಜಿ ತಾಂತದಿರ’ ದಿನಾಚರಣೆ ಹೆಸರಿನಲ್ಲಿ ವಿಶಿಷ್ಟ ಆಚರಣೆಯೊಂದು ನಡೆದಿದೆ. ಮಕ್ಕಳು ವೃದ್ಧರಂತೆ ವೇಷ ಧರಿಸಿ ಹಣ್ಣು ಹಣ್ಣು ಮುದುಕರಂತೆ ಅಭಿನಯಿಸಿದ ದೃಶ್ಯಗಳು ಮಾತ್ರ ಅದ್ಬುತ.
ಅಜ್ಜ – ಅಜ್ಜಿ ಎಂಬ ಪದಗಳೇ ಅಚ್ಚರಿ, ತಾತನ ಅಪ್ಪುಗೆ, ಅಜ್ಜಿಯ ಕಥೆಗಳಿಗೆ ಈ ಜಗತ್ತಿನಲ್ಲಿ ಬೇರಾವುದು ಸಾಟಿಯಿಲ್ಲ. ಅಪ್ಪ ಗದರಿದಾಕ್ಷಣ ತಾತ-ಅಜ್ಜಿಯ ಮಡಿಲಲ್ಲಿ ಬಚ್ಚಿಟ್ಟುಕೊಂಡು ಬೆಚ್ಚಗಿನ ಅನುಭವ ಪಡೆಯುವಾಗ ಸಿಗುವ ಸುಖ ಇಂದು ಅನೇಕ ಮಕ್ಕಳಿಗೆ ಸಿಗುತ್ತಿಲ್ಲ. ಈ ಎಲ್ಲವನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ವಿದ್ಯಾವಿಕಾಸ ಶಾಲೆಯಲಿ ಗ್ರಾಂಡ್ ಪೇರೆಂಟ್ಸ್ ಡೇ ಆಚರಿಸಲಾಯಿತು.
ಇದನ್ನೂ ಓದಿ: ಜಲವರ್ಣ ಕಲಾಕೃತಿಯ ಮಾಂತ್ರಿಕ ಪ್ರಸ್ನಕುಮಾರ್: ಅತ್ಯುತ್ತಮ ಶಿಕ್ಷಕ ಗೌರವ
ಇಳಿಯವಸ್ಸಿನಲ್ಲಿ ಅಜ್ಜಿ ತಾತಂದಿರ ದಿನಾಚರಣೆಯಲ್ಲಿ ಭಾಗವಹಿಸಿ ತಮ್ಮ ಮೊಮ್ಮಕ್ಕಳ ಮುಖದಲ್ಲಿ ಮಂದಹಾಸ ಬೀರಿಸಿದ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು.
ಸಂಸ್ಥೆಯ ಆಡಳಿತಾಧಿಕಾರಿ ಡಾ|ಕೆ.ಎನ್.ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಹೆಚ್ಚು ಮುದ್ದು ಮಾಡುವುದರಿಂದ ಮೊಮ್ಮಕ್ಕಳು ದಾರಿ ತಪ್ಪುವ ಸಾಧ್ಯತೆ ಹೆಚ್ಚು ಅದ್ದರಿಂದ ಮೊಮ್ಮಕ್ಕಳಿಗೆ ಪ್ರೀತಿ ಕರುಣೆ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಕಲಿಸಿಕೊಡಬೇಕು, ಮೊಬೈಲ್‍ಗಳನ್ನು ಕೊಡಬಾರದು ಎಂಬ ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿರ್ಮಲ ಮಾತನಾಡಿ, ಮೊಮ್ಮಕ್ಕಳಿಗೆ ಅಜ್ಜಿ ತಾತಂದಿರು ಎಂದರೆ ತುಂಬಾ ಅಚ್ಚು ಮೆಚ್ಚು, ಅದ್ದರಿಂದ ಅಜ್ಜಿ ತಾತಂದಿರು ತಮ್ಮ ಮೊಕ್ಕಳಿಗೆ ಊಟ ಮಾಡಿಸುವುದು, ಸ್ನಾನ ಮಾಡಿಸುವುದು ಆಟ, ಪಾಠ ಹಾಗೂ ನಿದ್ರೆ ಇತ್ಯಾದಿಗಳನ್ನು ಮಾಡಿಸುವುದರ ಮೂಲಕ ನಾವು ಅವರ ಜೊತೆಯಲ್ಲಿ ಕಾಲ ಕಳೆಯುತ್ತೇವೆ ಎಂದರು.
ಮತ್ತೋರ್ವ ಅತಿಥಿ ರಮೇಶ್ ರಾವ್ ಮಾತನಾಡಿ, ಕಾಲ ಬದಲಾದಂತೆ ಕುಟುಂಬದ ವ್ಯವಸ್ಥೆಯು ಬದಲಾಗುತ್ತಿದೆ. ಈಗಿನ ಅಧುನಿಕ ಕಾಲದಲ್ಲಿ ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಿದೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಇಳಿವಯಸ್ಸಿನಲ್ಲಿ ಹಿರಿಯರಿಗೆ ಮೊಮ್ಮಕ್ಕಳ ಆಸರೆ ಬೇಕು ಆದರೆ ಈಗಿನ ಮೊಮ್ಮಕ್ಕಳು ಬೆಳದು ದೊಡ್ಡವರಾದ ನಂತರ ಹಿರಿಯರ ಮಾತಿಗೆ ಬೆಲೆ ಕೊಡುವುದಿಲ್ಲ. ಅವರು ತಮ್ಮದೇ ಆದ ಪ್ರತ್ಯೇಕ ದಾರಿಯಲ್ಲಿ ನಡೆಯುತ್ತಾರೆ. ನಮ್ಮ ಮಕ್ಕಳಲ್ಲಿರುವ ಭಾವನೆ ಬದಲಾಗಬೇಕು ತಂದೆ ತಾಯಿರು ಇಲ್ಲದೆ ಮಕ್ಕಳಿಲ್ಲ ಎಂಬ ಭಾವನೆ ಈಗಿನ ಯುವ ಪೀಳಿಗೆಗೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳು ಅಜ್ಜಿ – ತಾತಂದಿರ ವೇಷ ಧರಿಸಿ ಸಂಭ್ರಮಿಸಿದರು, ಹಾಗೂ ಬಣ್ಣ ಬಣ್ಣದ ಉಡುಗೆ ತೊಟ್ಟು, ನೃತ್ಯ ಮಾಡಿ ಹಿರಿಯರಿಗೆ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಐಸಿಎಸ್‍ಇ ಪ್ರಿನ್ಸಿಪಾಲರಾದ ಪಿ.ಬಸವರಾಜಯ್ಯ, ಮುಖ್ಯಶಿಕ್ಷಕ ಸಿ.ಡಿ.ಸಂಪತ್‍ಕುಮಾರ್ ಮತ್ತಿತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

