ಚಿತ್ರದುರ್ಗ ನ್ಯೂಸ್: ಹಿರೇಕಂದವಾಡಿ ಬಳಿ ಜಮೀನಿನಲ್ಲಿ ಶುಕ್ರವಾರ ಶ್ರೀ ಮಾದಾರ ಚನ್ನಯ್ಯ ಶ್ರೀಗಳ ಪೂರ್ವಾಶ್ರಮದ ತಾಯಿ ಶರಣೆ ಗಂಗಮ್ಮ ಅವರ ಕೈಲಾಸ ಶಿವಗಣಾರಾಧನೆ ಹಾಗೂ ಸರ್ವ ಶರಣರ ಸಮ್ಮೇಳನ ನಡೆಯಿತು.
ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಡಾ.ಶ್ರೀ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶ್ರೀ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಿದ್ದಯ್ಯನಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಬಸವಕುಮಾರ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ರಮೇಶ್ ಜಿಗಜಿಣಗಿ, ಮಾಜಿ ಶಾಸಕ ಎ.ವಿ.ಉಮಾಪತಿ, ಕಾಂಗ್ರಸ್ ಮುಖಂಡರಾದ ಜಿ.ಎಸ್.ಮಂಜುನಾಥ್, ಮುರುಳೀಧರ ಹಾಲಪ್ಪ, ಮಾದಿಗ ದಂಡೋರ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ, ಉದ್ಯಮಿ ಜಿ.ಎಸ್.ಅನಿತ್, ನಿವೃತ್ತ ನ್ಯಾಯಾಧೀಶರಾದ ನಾರಾಯಣಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿಗಳಾದ ಲಕ್ಷ್ಮೀನಾರಾಯಣ, ಅನಿಲ್ಕುಮಾರ್, ಬಿಎಸ್ಪಿ ಮುಖಂಡ ಮಾರಸಂದ್ರ ಮುನಿಯಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾವಲ್ಲರೂ ನಮ್ಮ ತಾಯಿ, ತಂದೆ ತೀರಿಕೊಂಡಾಗ ಹೋಗಿ ಬಂದವರು. ಸ್ವಾಮಿಗಳಾದವರ ಅನೇಕ ಕುಟುಂಬಗಳು ಸಂಕಷ್ಟದಲ್ಲಿವೆ. ಹಾಗಂತ ಸ್ವಾಮಿಗಳು ಸಹಾಯ ಮಾಡಲು ಆಗುವುದಿಲ್ಲ, ಮಾಡಬಾರದು. ಆ

ದರೆ, ಸಮಾಜ ಮಾಡಬಹುದು. ಮಾಡಿದರೆ, ಮಠಾಧಿಪತಿಗಳಾಗಲು ಸಂಸ್ಕಾರವಂತರು ಮುಂದೆ ಬರುತ್ತಾರೆ ಎಂದು ಹೇಳಿದರು.
ಧರ್ಮ-ಕರ್ಮ ಸಂಯೋಗ ಎಂಬಂತೆ ಹೇಗೋ ಬೆಳೆದು ಮುಂದೆ ಉತ್ತಮ ಸ್ಥಾನ ಪಡೆಯುತ್ತೇವೆ. ಹೀಗೆ ಪಡೆದಾಗ ನಮ್ಮ ಬೆಳವಣಿಗೆಗೆ ಕಾರಣರಾದ ತಾಯಿ, ತಮ್ಮ, ಅಣ್ಣ ಸೇರಿದಂತೆ ಬಂಧುಗಳನ್ನು ಮರೆಯಬಾರದು. ರಾಜಕಾರಣಿಗಳು ಮತದಾರರನ್ನು ಮರೆಯಬಾರದು ಎಂದರು.
ಭೂಲೋಕಕ್ಕೆ ತಂದು ನಮಗೆ ಗೌರವ ಬರುವಂತೆ ಮಾಡಿರುವ ತಾಯಿಯನ್ನು ಯಾರೂ ಮರೆಯುವಂತಿಲ್ಲ. ಮಾದಾರ ಚನ್ನಯ್ಯ ಸ್ವಾಮಿಗಳು ತಮ್ಮ ತಾಯಿಯನ್ನು ಸ್ಮರಿಸುವ ಕೆಲಸ ಮಾಡುತ್ತಿರುವುದು ಪ್ರಶಂಸಾರ್ಹ ಎಂದು ಹೇಳಿದರು.
ಮಾದಾರ ಚನ್ನಯ್ಯ ಶ್ರೀಗಳು ಮಠಾಧೀರಾಗುವ ಕನಸು ಕಂಡವರಲ್ಲ, ತಾಯಿಯು ಈ ಕಲ್ಪನೆ ಮಾಡಿಕೊಂಡಿರಲಿಲ್ಲ. ಉತ್ತಮ ಕೆಲಸಗಾರರು, ಸಂಘಟಕರು, ವಿನೀತ ಗುಣ ಹೊಂದಿದವರು. ಉತ್ತಮ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಅವರ ಸರಳವಾದ ಬರಹಗಳು ಎಲ್ಲರಿಗೂ ಅರ್ಥವಾಗುತ್ತವೆ ಎಂದರು.
ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಜಗತ್ತಿಗೆ ದೊರೆಯಾದರೂ ತಾಯಿಗೆ ಮಗನೇ. ಜನ್ಮ ನೀಡಿದ ತಂದೆ ತಾಯಿಗಳನ್ನು ಎಂದೂ ಮರೆಯಬಾರದು. ಇಂದು ಜನ್ಮ ನೀಡಿದವರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿದ್ದಾರೆ. ತಂದೆ ತಾಯಿಗೆ ವಿದೇಶದಲ್ಲಿರುವ ಮಕ್ಕಳು ಪೋನ್ ಪೇ, ವಿಡಿಯೋ ಕಾಲ್ ಮೂಲಕ ಮಾತನಾಡಿಸುತ್ತಿದ್ದಾರೆ ಎಂದರು.
ಆಧುನಿಕರು, ವಿದ್ಯಾವಂತರು ಮಾನವೀಯತೆ ಮರೆತು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಹಣ ತರುವ ವ್ಯಕ್ತಿ ಆಗಬೇಡ. ಮಾನವೀಯ ಮೌಲ್ಯ ಬೆಳೆಸಬೇಕು. ತಾಯಿ ಗಂಗಮ್ಮ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಮಾನವೀಯ ಸೆಲೆಯೊಂದಿಗೆ ಬೆಳೆಸಿದ್ದಾರೆ. ಕರ್ನಾಟಕದ ಯೋಗಿ ಆದಿತ್ಯನಾಥ್ ಆಗಿದ್ದಾರೆ. ಇಡೀ ಭಾರತಕ್ಕೆ ಅವರ ಪರಿಚಯ ಆಗಿದೆ ಎಂದು ಹೇಳಿದರು.
ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಸಮಾಜ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಸ್ವಭಾವ ಹೊಂದಿದೆ. ಮಾದಾರ ಚನ್ನಯ್ಯ ಶ್ರೀಗಳಂತಹ ಅಮೂಲ್ಯ ರತ್ನವನ್ನು ತಾಯಿ ಗಂಗಮ್ಮ ಸಮಾಜಕ್ಕೆಕೊಟ್ಟು ಹೋಗಿದ್ದಾರೆ. ಒಂದು ತಂದೆ ತಾಯಿ ಬಿಟ್ಟು ಸಾವಿರಾರು ತಂದೆ ತಾಯಿಗಳನ್ನು ನೋಡಿಕೊಂಡು ಬದುಕುತ್ತೇವೆ. ಹೆತ್ತವರು ಇದ್ದಾಗ ಚೆನ್ನಾಗಿ
ನೋಡಿಕೊಳ್ಳಬೇಕು ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಗಂಗಮ್ಮ ಸಮಾಜಕ್ಕೆ ಆದರ್ಶಪ್ರಾಯರು. ಬಹಳಷ್ಟು ಜನರ ಉತ್ತಮ ಬದುಕಿಗೆ ಕಾರಣಕರ್ತರು ತಂದೆ ತಾಯಿಗಳು. ಆದರೆ, ಎತ್ತರಕ್ಕೆ ಹೋದಂತೆ ಹೆತ್ತವರನ್ನು ಮರೆಯುವ ನೀಚರೂ ಇದ್ದಾರೆ. ನಾನು ದೇವರಿಗೆ ಕೈ ಮುಗಿಯುವುದಿಲ್ಲ, ಯಾಕಂದರೆ ದೇವರು ಮಾತನಾಡುವುದಿಲ್ಲ, ತಂದೆ, ತಾಯಿ, ಬುದ್ಧ, ಬಸವಣ್ಣ ದಾರ್ಶನಿಕರೇ ದೇವರುಗಳು ಎಂದರು.
ನಾನು ಸಚಿವನಾಗಿದ್ದಾಗ ಅನೇಕರು ವರ್ಗಾವಣೆಗೆ ತಂದೆ ತಾಯಿ ನೋಡಿಕೊಳ್ಳುವ ಕಾರಣ ಬರೆದುಕೊಂಡು ಬರುತ್ತಿದ್ದರು. ಆದರೆ, ಯಾರೂ ನೋಡಿಕೊಳ್ಳುವುದಿಲ್ಲ. ತಂದೆ ತಾಯಿ ಅನಾರೋಗ್ಯ ಹೊಂದಿದ್ದರೂ ಗಂಡ ಹೆಂಡತಿ ತಿರುಪತಿಗೆ ಹೋಗುತ್ತಾರೆ ಎಂದು ವಿಷಾಧಿಸಿದರು.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

