CHITRADURGA NEWS | 19 NOVEMBER 2024
ಚಿತ್ರದುರ್ಗ: ಜಿಲ್ಲೆಯ ಜೀವನಾಡಿ (Vanivilasa) ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ಒಳಹರಿವು ಮುಂದುವರೆದಿದ್ದು, ನವೆಂಬರ್ 19 ರಂದು ಬೆಳಗ್ಗೆ ನಡೆಸಿದ ಮಾಪನದ ವೇಳೆ 462 ಕ್ಯೂಸೆಕ್ ನೀರು ಬಂದಿದೆ.
135 ಅಡಿ ಎತ್ತರದ ವಿವಿ ಸಾಗರ ಜಲಾಶಯ 130 ಅಡಿ ಎತ್ತರಕ್ಕೆ ನೀರು ಬಂದಾಗ ಕೋಡಿಯಲ್ಲಿ ನೀರು ಹರಿಯುತ್ತದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲೂ ಬಾಂಗ್ಲಾ ವಲಸಿಗರ ಜಾಲ | ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು
ಸದ್ಯ ಜಲಾಶಯದಲ್ಲಿ 128.15 ಅಡಿವರೆಗೆ ನೀರು ಬಂದಿದೆ. 30 ಟಿಎಂಸಿ ಅಡಿ ಸಾಮಥ್ರ್ಯದ ಜಲಾಶಯದಲ್ಲಿ ಇಂದಿಗೆ 28.86 ಟಿಎಂಸಿ ಅಡಿ ನೀರು ಬಂದಿದೆ.
ಇನ್ನೂ ಕೇವಲ 1.14 ಟಿಎಂಸಿ ನೀರು ಬಂದರೆ ಜಲಾಶಯದ ಕೋಡಿಯಲ್ಲಿ ನೀರು ಹರಿಯಲಿದೆ.
ಇದನ್ನೂ ಓದಿ: ಎಪಿಎಂಸಿ ಆವರಣದಲ್ಲಿ ನ.19ರಂದು ವಿಚಾರ ಸಂಕಿರಣ
ಭದ್ರಾ ಜಲಾಶಯದಿಂದ ಇನ್ನೊಂದು ಟಿಎಂಸಿ ನೀರು ಹರಿಯುವ ಸಾಧ್ಯತೆ ಇದ್ದು, ಈ ವರ್ಷದ ಡಿಸೆಂಬರ್ ವೇಳೆಗೆ ಜಲಾಶಯ ಕೋಡಿ ಬೀಳಬಹುದು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

