CHITRADURGA NEWS | 19 NOVEMBER 2026
ಚಿತ್ರದುರ್ಗ: ಕಾನೂನಿನಲ್ಲಿ ಮಹಿಳೆಯರಿಗೆ ಇರುವಂತ ರಕ್ಷಣೆ ಪುರುಷರಿಗೂ ಸಿಗಬೇಕಾಗಿರುವುದರಿಂದ ಪ್ರತ್ಯೇಕವಾಗಿ ಪುರುಷರಿಗೂ ಕಾನೂನು ಜಾರಿ ಮಾಡುವಂತೆ ಕರ್ನಾಟಕ ನಾಗರೀಕರ ರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ನವೆಂಬರ್ 19 | ಹತ್ತಿ ರೇಟ್ ಎಷ್ಟಿದೆ?
ಕರ್ನಾಟಕ ನಾಗರೀಕರ ರಕ್ಷಣಾ ವೇದಿಕೆ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ ಮಾತನಾಡಿ, ಸಾಂಸಾರಿಕ ಜೀವನ ಸುಖಮಯವಾಗಿರಬೇಕಾದರೆ ದಂಪತಿಗಳ ಪಾತ್ರ ಅತಿ ಮುಖ್ಯ. ಎಲ್ಲಾ ಕುಟುಂಬಗಳಲ್ಲಿಯೂ ಮನಸ್ತಾಪ ಮೂಡುವುದು ಸಹಜ. ಸಮಸ್ಯೆಗಳನ್ನು ಮನೆಯೊಳಗೆ ಬಗೆಹರಿಸಿಕೊಳ್ಳಬೇಕು. ಬೀದಿಗೆ ತರಬಾರದು. ಕಲಂ 497 ರ ಅನ್ವಯ ವಿವಾಹಿತ ಮಹಿಳೆ ಪರ ಪುರುಷನೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಕಾನೂನು ಬಾಹಿರವಾಗಿತ್ತು.
2018 ರಲ್ಲಿ ಸುಪ್ರೀಂಕೋರ್ಟ್ ಈ ಕಾಯಿದೆಯನ್ನು ರದ್ದುಪಡಿಸಿ ಯಾವುದೇ ಒಬ್ಬ ಮಹಿಳೆ ಪರ ಪುರುಷನೊಂದಿಗೆ ದೈಹಿಕ ಸಂಪರ್ಕ ಹೊಂದುವುದು ಕಾನೂನು ಬಾಹಿರವಲ್ಲ ಎಂಬ ತೀರ್ಪು ನೀಡಿರುವುದು ಪುರಷರಿಗೆ ಅನ್ಯಾಯವಾಗಿದೆ. ಎಷ್ಟೊ ಮಹಿಳೆಯರು ಇದನ್ನೆ ಅಸ್ತ್ರವನ್ನಾಗಿಸಿಕೊಂಡು ಪುರುಷರ ಮೇಲೆ ವರದಕ್ಷಿಣೆ ಕಿರುಕುಳ, ಅತ್ಯಾಚಾರದ ಕೇಸ್ಗಳನ್ನು ದಾಖಲಿಸುತ್ತಿದ್ದಾರೆ. ಸರ್ಕಾರ ಪುರುಷರ ರಕ್ಷಣೆಗಾಗಿ ಪ್ರತ್ಯೇಕ ಕಾನೂರು ರಚಿಸುವಂತೆ ಜಿಲ್ಲಾಡಳಿತದ ಮೂಲಕ ಆಗ್ರಹಿಸಿದರು.
ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ ಹೀಗೆ ಅನೇಕ ಕೇಸುಗಳಾಗುತ್ತಿರುವುದರಿಂದ ಅಮಾಯಕ ಪುರುಷರು ಜೈಲು ಪಾಲಾಗಿದ್ದಾರೆ. ಅದಕ್ಕಾಗಿ ಮಹಿಳೆಯರ ರಕ್ಷಣೆಗೆ ಕಾಯಿದೆಯಿರುವಂತೆ ಪುರುಷರಿಗೂ ಪ್ರತ್ಯೇಕ ಕಾನೂನು ರೂಪಿಸಿ ರಕ್ಷಣೆ ನೀಡಬೇಕು. ಹೆಸರಿಗಷ್ಟೆ ಪುರುಷರ ದಿನಾಚರಣೆ ಬೇಡವೆಂದು ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ: ಲೋಕಾಯುಕ್ತ ದಾಳಿ ಯಾರ ಬಳಿ ಎಷ್ಟೆಷ್ಟು ಆಸ್ತಿ | ಶಾಲೆ,ಆಸ್ಪತ್ರೆ ಸೈಟು, ಮನೆ…
ನ್ಯಾಯವಾದಿ ಬಿ.ಕೆ.ಎಸ್.ಅಂಜುಮ್ ಮಾತನಾಡಿ, ಕೆಲವು ಮಹಿಳೆಯರು ತಮ್ಮ ರಕ್ಷಣೆಗಾಗಿ ಇರುವ ಕಾನೂನನ್ನು ದುರಪಯೋಗ ಮಾಡಿಕೊಳ್ಳುತ್ತಿರುವುದರಿಂದ ಏನು ತಪ್ಪು ಮಾಡದ ಪುರುಷರು ಕಾನೂನಿನಡಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ಪತಿ ತನ್ನ ಪತ್ನಿಯ ತಪ್ಪನ್ನು ಪ್ರಶ್ನಿಸಿದಾಗ ವರದಕ್ಷಿಣೆ ಕಿರುಕುಳ ನೀಡುತ್ತಾರೆಂದು ದೂರು ದಾಖಲಿಸಿ ಮಾನಸಿಕವಾಗಿ ಹಿಂಸೆ ನೀಡುವುದನ್ನು ನೋಡಿದ್ದೇವೆ. ಕಾನೂನು ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಅದಕ್ಕಾಗಿ ಪುರುಷರ ರಕ್ಷಣೆಗೂ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ನ್ಯಾಯವಾದಿ ಶ್ರೀದೇವಿ ಮಾತನಾಡಿ, ಪ್ರತಿ ಕುಟುಂಬವೂ ನೆಮ್ಮದಿಯಿಂದ ಇರಬೇಕಾದರೆ ಸ್ತ್ರೀ-ಪುರುಷ ಇಬ್ಬರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬೇಕು. ಮಹಿಳೆ ಅಬಲೆ ಎನ್ನುವ ಕಾರಣವನ್ನೇ ಮುಂದಿಟ್ಟುಕೊಂಡು ಪುರುಷರಿಗೆ ನಾನಾ ರೀತಿಯ ತೊಂದರೆ ನೀಡುತ್ತಿರುವುರಿಂದ ಅನೇಕರು ಜೈಲು ಪಾಲಾಗುತ್ತಿದ್ದಾರೆ. ಹೆಸರಿಗಷ್ಟೆ ಪುರುಷ ಪ್ರದಾನ ಸಮಾಜವೆನ್ನುವುದು ಬೇಡ. ಮಹಿಳೆಯರಂತೆ ಪುರುಷರಿಗೂ ರಕ್ಷಣೆ ಸಿಗಬೇಕೆಂದು ಜಿಲ್ಲಾಡಳಿತವನ್ನು ವಿನಂತಿಸಿದರು.
ಇದನ್ನೂ ಓದಿ: ಪಡಿತರ ಚೀಟಿದಾರರೇ ಎಚ್ಚರ! ಇ-ಕೆವೈಸಿಗೆ ನ.30 ಡೆಡ್ಲೈನ್
ನ್ಯಾಯವಾದಿಗಳಾದ ಸೌಮ್ಯ, ಪುಷ್ಪ, ಚಂಪ, ಅಶ್ವಿನಿ, ಅರ್ಚನ, ಮಮತ, ಲಿಖಿತ, ಮನ್ಸೂರ್, ಮುಯಿನ್, ಅಶೋಕ್ಬೆಳಗಟ್ಟ, ಎಂ.ಜೆ.ತಿಪ್ಪೇಸ್ವಾಮಿ, ನವಾಜ್ಖಾನ್, ಕೀರ್ತಿ ಇತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

