CHITRADURGA NEWS | 5 AUGUST 2025
ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ಈ ವರ್ಷದ ಮಳೆಗಾಲದ ಮೊದಲ ನೀರು ಹರಿದು ಬಂದಿದೆ.
ಭದ್ರಾ ಜಲಾಶಯದಿಂದಲೂ ವೇದಾವತಿ ನದಿ ಮೂಲಕ ನೀರು ಹರಿಸಲಾಗುತ್ತಿದ್ದು, ಇಂದು ಭದ್ರಾ ನೀರು ಬಂದು ವಿವಿ ಸಾಗರ ತಲುಪಿದೆ.
ಇದನ್ನೂ ಓದಿ: ಜಿಲ್ಲೆಯ ಮೇಲೆ ಕೃಪೆ ತೋರಿದ ಮಳೆರಾಯ | ರಾತ್ರಿ ಸುರಿದ ಮಳೆಗೆ ರೈತರ ಸಂತಸ
ಆಗಸ್ಟ್ 5 ರಂದು ಬೆಳಗ್ಗೆ ಮಳೆ ನೀರಿನ ಜೊತೆಗೆ ಭದ್ರಾ ನೀರು ಕೂಡಾ ಹರಿದು ಬಂದಿದೆ.
ವೇದಾವತಿ ನದಿ ಸೇರುವ ಚಿಕ್ಕಮಗಳೂರು ಜಿಲ್ಲೆಯ ಮದಗದ ಕೆರೆ ಹಾಗೂ ಅಯ್ಯನಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿದ್ದು, ಅಲ್ಲಿಂದ ವೇದಾವತಿ ಸೇರಿ ವಿವಿ ಸಾಗರದ ಒಡಲು ಸೇರಿದೆ.
ಇದನ್ನೂ ಓದಿ:ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ
ಇಂದು ಹರಿದು ಬಂದ ನೀರೆಷ್ಟು ?
135 ಅಡಿ ಎತ್ತರದ, 30 TMC ಸಾಮರ್ಥ್ಯದವಾಣಿವಿಲಾಸ ಸಾಗರ ಜಲಾಶಯದಲ್ಲಿ ಆಗಸ್ಟ್ 5 ಕ್ಕೆ 123 ಅಡಿ ನೀರಿದೆ. ಅಂದರೆ, 22.938 TMC ಅಡಿ ನೀರಿದೆ.
ಇಂದು ಬೆಳಗ್ಗೆ 8 ಗಂಟೆ ಹೊತ್ತಿಗೆ ಜಲಾಶಯಕ್ಕೆ 1220 ಕ್ಯೂಸೆಕ್ ನೀರು ಹರಿದು ಬಂದಿದೆ.
ಇದನ್ನೂ ಓದಿ: ತೆಂಗಿನ ಸಸಿ ನಾಟಿ ಮಾಡಲು ಸಹಾಯಧನ | ರೈತರಿಂದ ಅರ್ಜಿ ಅಹ್ವಾನ
ಕಳೆದ ವರ್ಷ ಇದೇ ದಿನ ಅಂದರೆ 2024 ಆಗಸ್ಟ್ 5 ರಂದು ಜಲಾಶಯದಲ್ಲಿ 114.70 ಅಡಿ ನೀರಿತ್ತು. ಅಂದರೆ, 18.70 TMC ನೀರಿತ್ತು.
ಈ ವರ್ಷದ ಪ್ರಮಾಣ ಇನ್ನೂ ಹೆಚ್ಚಾಗಿಯೇ ಇರುವುದರಿಂದ ವಿವಿ ಸಾಗರ ಈ ವರ್ಷ ಬಹು ಬೇಗ ಕೋಡಿ ಬೀಳುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿವೆ.



________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
