Connect with us

ಭದ್ರಾ ಮೇಲ್ದಂಡೆ ಯೋಜನೆ ಸಿರಿಗೆರೆ ಶ್ರೀ ಅಂಗಳಕ್ಕೆ | ದಶಕಗಳಿಂದ ಕುಂಟುತ್ತಾ ಸಾಗಿರುವ ಯೋಜನೆಗೆ ಹೊಸ ಬೆಳಕು

Upperbhadra project gose to sirigere mutt

ಮುಖ್ಯ ಸುದ್ದಿ

ಭದ್ರಾ ಮೇಲ್ದಂಡೆ ಯೋಜನೆ ಸಿರಿಗೆರೆ ಶ್ರೀ ಅಂಗಳಕ್ಕೆ | ದಶಕಗಳಿಂದ ಕುಂಟುತ್ತಾ ಸಾಗಿರುವ ಯೋಜನೆಗೆ ಹೊಸ ಬೆಳಕು

CHITRADURGA NEWS | 14 JANUARY 2025

ಚಿತ್ರದುರ್ಗ: ಕಳೆದ ಎರಡು ದಶಕಗಳಿಂದ ಕುಂಟುತ್ತಾ ಸಾಗಿರುವ ಮಧ್ಯ ಕರ್ನಾಟಕ ದಮಹತ್ವದ ಭದ್ರಾ ಮೇಲ್ದಂಡೆ ಯೋಜನೆಯ ಸಮಸ್ಯೆಯನ್ನು ರೈತರು ಸಿರಿಗೆರೆ ಮಠದ ಅಂಗಳಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಆಳುವ ಎಲ್ಲ ಸರ್ಕಾರಗಳು ಚುನಾವಣೆ ವೇಳೆಯಲ್ಲಿ ಮಾತ್ರ ಯೋಜನೆ ಬಗ್ಗೆ ಜಪಿಸಿ, ರೈತರ ಹಾದಿ ತಪ್ಪಿಸಿ ಮತ ಪಡೆದು ಮತ್ತೆ ಮೋಸ ಮಾಡುವುದು ಹಲವು ಚುನಾವಣೆಗಳಿಂದ ನಡೆದುಕೊಂಡು ಬಂದಿದೆದೆ.

ಇದನ್ನೂ ಓದಿ: ಮನೆ ಕಳ್ಳತನ, ಬೈಕ್ ಕಳ್ಳರ ಬಂಧಿಸಿದ ಭರಮಸಾಗರ ಪೊಲೀಸರು

ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಧಿಟ್ಟ ನಿರ್ಧಾರ ಕೈಗೊಂಡು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಬಳಿ ತೆರಳಿ ಯೋಜನೆಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಮಾಡಿದ್ದಾರೆ.

ಜಿಲ್ಲೆಯ ಹಲವು ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಕಾರ್ಯಗತಗೊಳಿಸಿ ಆಧುನಿಕ ಭಗೀರಥ ಎಂದೇ ಹೆಸರಾಗಿರುವ ಸಿರಿಗೆರೆ ಶ್ರೀಗಳಲ್ಲಿ ಜಿಲ್ಲೆಯ ರೈತ ಸಂಘಗಳ ಒಕ್ಕೂಟಗಳ ಸದಸ್ಯರು ತಮ್ಮ ಒಮ್ಮತದ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.

ಭದ್ರಾ ಮೇಲ್ಡಂಡೆ ಯೋಜನೆಯ ಕಾಮಗಾರಿ ತೀವ್ರಗೊಳಿಸಲು ಹಾಗೂ ಯೋಜನೆಯಲ್ಲಿ ಕೈಬಿಟ್ಟಿರುವ ಕೆರೆಗಳಿಗೆ ನೀರು ತುಂಬಿಸಲು ಜಿಲ್ಲೆಯ ರೈತ ಒಕ್ಕೂಟಗಳು ಆಯೋಜಿಸಿದ್ದ ರೈತರ ನಡೆ ಸಿರಿಗೆರೆ ಮಠದ ಕಡೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಹುತೇಕ ರೈತ ಮುಖಂಡರು ತಮ್ಮ ಅಳಲನ್ನು ಹಂಚಿಕೊಂಡರು.

ಇದನ್ನೂ ಓದಿ: ಅಡಿಕೆ ಧಾರಣೆ | ಇಂದಿನ ಅಡಿಕೆ ಮಾರುಕಟ್ಟೆಗಳ ನೋಟ

ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 200 ಮಠಾಧೀಶರಿದ್ದು ಅವರು ಭದ್ರಾ ಮೇಲ್ಡಂಡೆ ವಿಚಾರವಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಬೇಕು.

ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕಿನ ಜನರು ನೀರಾವರಿ ಯೋಜನೆಗಳು ಇಲ್ಲದೆ ನೊಂದಿದ್ದೇವೆ. ನಮ್ಮ ತಾಲ್ಲೂಕುಗಳಲ್ಲಿ 1500 ಅಡಿ ಕೊಳವೆ ಬಾವಿಯಲ್ಲೂ ನೀರು ಸಿಗುತ್ತಿಲ್ಲ. ಈ ತಾಲ್ಲೂಕುಗಳ ಯುವಕರು ಯಾರಿಗೂ ಹೇಳದೆ ಪಟ್ಟಣಗಳನ್ನು ಸೇರಿಕೊಂಡಿದ್ದಾರೆ. ರೈತರು ದುರಂತದಲ್ಲಿ ಬೇಯುತ್ತಿದ್ದೇವೆ ಎಂದು ರೈತ ಮುಖಂಡ ನಿಜಲಿಂಗಪ್ಪ ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆ

ಭದ್ರಾ ಮೇಲ್ದಂಡೆ ಕಾಮಗಾರಿ ಆರಂಭವಾಗಿ 16 ವರ್ಷಗಳು ಕಳೆದಿವೆ. 21 ಸಾವಿರ ಕೋಟಿ ಯೋಜನೆಯಲ್ಲಿ ಇದುವರೆಗೆ ಕೇವಲ 10,580 ಕೋಟಿ ಖರ್ಚು ಮಾಡಲಾಗಿದೆ. ಗುತ್ತಿಗೆದಾರರಿಗೆ 2329 ಕೋಟಿ ರೂ. ಬಾಕಿ ಪಾವತಿ ಮಾಡಬೇಕಿದೆ. ಗುತ್ತಿಗೆದಾರರು ಗುಳೆ ಹೋಗುತ್ತಿದ್ದಾರೆ.

ಕೇಂದ್ರ ಸರ್ಕಾರ 2022 ರಲ್ಲಿ 52000 ಕೋಟಿ ರೂ.ಗಳ ಹಣಕಾಸು ನೆರವು ಘೋಷಣೆ ಮಾಡಿ, ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿತ್ತು. ಕ್ರಮೇಣ ಈ ಯೋಜನೆಯನ್ನು ಕೈಬಿಟ್ಟಿತು. ಇದೊಂದು ದುರಂತದ ವಿಷಯ ಎಂದು ತಿಮ್ಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:  ಸಚಿವ ಡಿ.ಸುಧಾಕರ್ ವರ್ತನೆಗೆ ಶಾಸಕ ಬಿ.ಜಿ.ಗೋವಿಂದಪ್ಪ ಅಸಮಧಾನ | ಹಿನ್ನೀರಿನ ರೈತರ ಸಂಕಷ್ಟ ಸೌಜನ್ಯಕ್ಕೂ ಆಲಿಸಿಲ್ಲ

ತರಳಬಾಳು ಶ್ರೀಗಳು ಚಿತ್ರದುರ್ಗ, ಕೋಲಾರ, ತುಮಕೂರು ಜಿಲ್ಲೆಗಳಿಗೆ ನೆರವಾಗುವ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಬೇಕು. ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿದ್ದ 52000 ಕೋಟಿ ಅನುದಾನವನ್ನು ಬಿಡುಗಡೆಗೊಳಿಸುವಂತೆ ಕಿವಿ ಹಿಂಡಬೇಕು ಎಂದು ಮನವಿ ಮಾಡಿದರು.

ಶ್ರೀಗಳು ಕೈಗೆತ್ತಿಕೊಂಡ ಭರಮಸಾಗರ ಏತ ನೀರಾವರಿಯ 42 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಕೇವಲ 2 ವರ್ಷಗಳಲ್ಲಿ ಆಗಿದೆ. ಭದ್ರಾ ಮೇಲ್ದಂಡೆ ವಿಚಾರವಾಗಿ ರಾಜ್ಯವು ಕೇಂದ್ರದತ್ತ, ಕೇಂದ್ರವು ರಾಜ್ಯದತ್ತ ಬೆರಳು ಮಾಡುತ್ತಾ ಕುಳಿವೆ. ಆದ್ದರಿಂದ ರೈತ ಸಮುದಾಯ ತರಳಬಾಳು ಶ್ರೀಗಳ ಮೊರೆ ಹೊಕ್ಕಿದ್ದೇವೆ. ಅಧಿಕಾರಿಗಳ ನಿಧಾನ ಪ್ರವೃತ್ತಿ, ಕಾಮಗಾರಿ ನಿಧಾನ, ಪರಿಹಾರ ಹಣದ ವ್ಯತ್ಯಾಸ ಕುರಿತು ಶ್ರೀಗಳಲ್ಲಿ ಅರಿಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಕುನುಗಲಿ ಷಣ್ಮುಖಪ್ಪ ಹೇಳಿದರು.

ಹಿರಿಯ ಪತ್ರಕರ್ತ, ಭದ್ರಾ ಮೇಲ್ದಂಡೆ ಯೋಜನೆಯ ಹೋರಾಟಗಾರ ಚಿಕ್ಕಪ್ಪನಹಳ್ಳಿ ಷಣ್ಮುಖ ಶ್ರೀಗಳು ಭರಮಸಾಗರ ಭಾಗದ 42, ಜಗಳೂರು ಭಾಗದ 53 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮಂಜೂರು ಮಾಡಿಸಿ ಅನುμÁ್ಠನಗೊಳಿಸಿದ್ದಾರೆ. ಕೇಂದ್ರ ಸರ್ಕಾರ ಬಹಿರಂಗವಾಗಿಯೇ ಘೋಷಣೆ ಮಾಡಡಿದ್ದ 52000 ಕೋಟಿ ರೂ.ಗಳ ಯೋಜನೆಯಿಂದ ಹಿಂದೆ ಸರಿದಿದೆ. ಶ್ರೀಗಳು ಸರ್ಕಾರದ ಮೇಲೆ ಒತ್ತಡ ತಂದು ಈ ಕೆಲಸ ಆಗುವಂತೆ ಮಾಡಬೇಕು ಎಂದರು.

ಇದನ್ನೂ ಓದಿ: ದಿನ ಭವಿಷ್ಯ | ಜನವರಿ 14 | ಕುಟುಂಬ ಸದಸ್ಯರೊಂದಿಗೆ ವಿವಾದ, ಮಕ್ಕಳ ಆರೋಗ್ಯದಲ್ಲಿ ಎಚ್ಚರ, ಹೊಸ ವಾಹನ ಯೋಗ

ಹೊಳಲ್ಕೆರೆಯ ಸನಾವುಲ್ಲಾ, ಭರಮಸಾಗರದ ಶಾಂತಾ ಅಶೋಕ್, ನಾಗರಾಜ್, ಶ್ರೀರಾಂಪುರದ ನಾಗರಾಜ್ ಮುಂತಾದವರು ಮಾತನಾಡಿದರು.

ಯೋಜನೆ ಚುರುಕುಗೊಳಿಸುವ ಭರವಸೆ ನೀಡಿದ ಶ್ರೀಗಳು:

ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಧಾನವಾಗಿರುವ ಭದ್ರಾ ಯೋಜನೆ ಕಾಮಗಾರಿಯನ್ನು ಚುರುಕುಗೊಳಿಸುವ ಪ್ರಯತ್ನವನ್ನು ಎಲ್ಲರೂ ಸೇರಿ ಮಾಡೋಣ.

ಯೋಜನೆಯ ಪೂರ್ಣ ನೀಲನಕ್ಷೆಯನ್ನು ಅಧ್ಯನ ನಡೆಸಿ, ಕಾಮಗಾರಿಯ ವಿವರಗಳು, ಏನು ಕೆಲಸ ಆಗಿದೆ, ಏನು ಆಗಬೇಕಾಗಿದೆ, ಇದಕ್ಕೆ ಇರುವ ಅಡ್ಡಿಗಳೇನು ಎಂಬ ಮಾಹಿತಿಯನ್ನು ಸಂಗ್ರಹಿಸಿ ಮುಂದಾಗೋಣ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹೇಳಿದರು.

ಇದನ್ನೂ ಓದಿ: ರೀಲ್ಸ್ ಮಾಡಿ ಬಹುಮಾನ ಗೆಲ್ಲಿ | ಪೊಲೀಸ್ ಇಲಾಖೆಯ ಪ್ರಕಟಣೆ

ರೈತ ಸಂಘದ ಪದಾಧಿಕಾರಿಗಳನ್ನು ಸಮಿತಿಯೊಂದನ್ನು ರಚಿಸಿ ಅದರ ಮೂಲಕ ಯೋಜನೆಯ ಸರ್ವೆ ಮಾಡಿಸಿ ವಿವರಗಳನ್ನು ತಮಗೆ ನೀಡಲಿ. ನಂತರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸೋಣ. ಅಧಿಕಾರಿಗಳು ಮತ್ತು ರಾಜಕಾರಣಿಗಳೂ ಸಹ ಹಳ್ಳಿಗಾಡುಗಳು ಜನರೇ ಆಗಿರುವುದರಿಂದ ಅವರಿಗೆ ರೈತರ ಕಷ್ಟಗಳ ನೋವು ಇರುತ್ತದೆ ಎಂದರು.

ಇಂತಹ ಯೋಜನೆಗಳನ್ನು ಜಾರಿ ಮಾಡುವಾಗ ಹಲವು ಅಡೆತಡೆಗಳೂ ಇರುತ್ತವೆ. ಈ ಯೋಜನೆಯಲ್ಲಿಯೂ ಅಂತಹ ತಡೆಗಳು ಇವೆ. ಹೊಳಲ್ಕೆರೆ ಸಮೀಪದ ಆಗಬೇಕಾಗಿರುವ ಕೇವಲ 465 ಮೀಟರ್ ಕಾಮಗಾರಿಯ ಕಾರಣಕ್ಕೆ ಕೆಲಸ ನಿಂತಿದೆ. ಈ ಪ್ರಕರಣ ನಮ್ಮ ನ್ಯಾಯಪೀಠದ ಮುಂದಿದೆ. ರೈತರೂ ಸಹ ಇಂತಹ ಯೋಜನೆಗಳಿಗೆ ಅಡ್ಡಿಪಡಿಸುವ ಪ್ರಕರಣಗಳಿವೆ ಎಂದರು.

ತಾವು ಯಾವುದೇ ಪಕ್ಷದ ಪರವಾಗಿಯೂ ಇಲ್ಲ. ನಮ್ಮದು ಜನಪರ ನಿಲುವು. ರಾಜ್ಯದ ಎಲ್ಲಾ ಸರ್ಕಾರಗಳು ಸಹ ನಮ್ಮ ಜನಪರ ನಿಲುವಿನ ಯೋಜನೆಗಳಿಗೆ ಬೆಂಬಲ ಸೂಚಿಸಿವೆ. ನೈತಿಕವಾದ ನಿಲುವುಗಳನ್ನು ಇಟ್ಟುಕೊಂಡು ಹೋರಾಟ ಮಾಡಿದರೆ ಸರ್ಕಾರಗಳ ಬೆಂಬಲ ಸಿಕ್ಕೇ ಸಿಗುತ್ತದೆ ಎಂದರು.

ಇದನ್ನೂ ಓದಿ: ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು | ಚಳ್ಳಕೆರೆ ತಾಲೂಕಿನಲ್ಲಿ ಘಟನೆ

ಭದ್ರಾ ಮೇಲ್ಡಂಡೆ ಯೋಜನೆಯ ವಿಚಾರದಲ್ಲಿ ಸುಮ್ಮನೆ ಕುಳಿತರೆ ಆಗುವುದಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡೋಣ. ಉಬ್ರಾಣಿ-ಅಮೃತಾಪುರ ಯೋಜನೆಯ ವೆಚ್ಚ ಆಗ ಕೇವಲ 126 ಕೋಟಿ ರೂ. ಆಗಿತ್ತು. ಆ ಭಾಗದ ಜನ ಉತ್ತಮ ಬೆಳೆ ಬೆಳೆದು ಯೋಜನೆಗೂ ಮಿಗಿಲಾದ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದ್ದಾರೆ. ಭರಮಸಾಗರ ಮತ್ತು ಜಗಳೂರು ಯೋಜನೆಯ ವ್ಯಾಪ್ತಿಯಲ್ಲಿಯೂ ಈಗ ಅಂತದ್ದೇ ಕೆಲಸ ಆಗುತ್ತಿದೆ ಎಂದರು.

ಹೊಳಲ್ಕೆರೆಯ ಒಂಟಿಕಂಬ ಮಠದ ತಿಪ್ಪೇರುದ್ರ ಮಹಾಸ್ವಾಮೀಜಿ ಮಾತನಾಡಿ, ಭರಮಸಾಗರ ಭಾಗದ ಕೆರೆಗಳಲ್ಲಿ ನೀರು ಉಕ್ಕುತ್ತಿರುವುದನ್ನು ನೋಡಿ ನಮ್ಮ ಮನ ತುಂಬಿದೆ. ರೈತರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು ಭದ್ರಾ ಮೇಲ್ದಂಡೆ ಯೋಜನೆಯು ಜಾರಿಯಾಗುವಂತೆ ತಾವು ಮಾಡಿದರೆ ರೈತರು ನಿಟ್ಟುಸಿರು ಬಿಡುವ ದಿನಗಳು ಕೊನೆಯಾಗುತ್ತವೆ ಎಂದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version