ಮುಖ್ಯ ಸುದ್ದಿ
ರೀಲ್ಸ್ ಮಾಡಿ ಬಹುಮಾನ ಗೆಲ್ಲಿ | ಪೊಲೀಸ್ ಇಲಾಖೆಯ ಪ್ರಕಟಣೆ
CHITRADURGA NEWS | 13 JANUARY 2025
ಚಿತ್ರದುರ್ಗ: ಜಿಲ್ಲಾ ಪೊಲೀಸ್ ವತಿಯಿಂದ ಚಿತ್ರದುರ್ಗ ಸೈಬರ್ ಮಿತ್ರ ಎಂಬ ನೂತನ ಕಾರ್ಯಕ್ರಮದಡಿ ಸೈಬರ್ ವಂಚನೆಗಳ ಬಗ್ಗೆ ವಿನೂತನವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Also Read: ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು | ಚಳ್ಳಕೆರೆ ತಾಲೂಕಿನಲ್ಲಿ ಘಟನೆ
ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಆಸಕ್ತಿಯುಳ್ಳವರು ಡಿಜಿಟಲ್ ಅರೆಸ್ಟ್, ಇನ್ವೆಸ್ಟ್‍ಮೆಂಟ್ ಫ್ರಾಡ್, ಆನ್‍ಲೈನ್ ಜಾಬ್ ಫ್ರಾಡ್, ಮೂಲ್ ಅಕೌಂಟ್ಸ್, ಡ್ರಗ್ ಅವೇರ್‍ನೆಸ್, ರಿವೇಜ್ ಪೋರ್ನ್, ಆನ್‍ಲೈನ್ ಲೋನ್ ಫ್ರಾಡ್ಸ್ ಕುರಿತು 90 ಸೆಕೆಂಡ್‍ಗಳಿಗೆ ಮೀರದಂತೆ ರೀಲ್ಸ್ ಮಾಡಿ ಕಳುಹಿಸಬಹುದು.
ರೀಲ್ಸ್ ಕನ್ನಡ ಭಾಷೆಯಲ್ಲಿ ಇರಬೇಕು. ಸಾಂದರ್ಭಿಕವಾಗಿ ಇಂಗ್ಲೀಷ್ ಭಾಷೆಯನ್ನು ಬಳಸಬಹುದು.
ಆಸಕ್ತಿಯುಳ್ಳವರು, ರೀಲ್ಸ್ ನಿರ್ದೇಶಿಸಿ, ನಟಿಸಿ, ಪ್ರಕಟಿಸುವ ಹಕ್ಕಿನೊಂದಿಗೆ ಮೊಬೈಲ್ ಸಂಖ್ಯೆ 9480803173 ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಇದೇ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು. ಅತ್ಯುತ್ತಮ ರಿಲ್ಸ್‍ಗಳನ್ನು ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗುವುದು.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಪ್ರಥಮ ಸ್ಥಾನ ಪಡೆದ ರೀಲ್ಸ್‍ಗೆ ರೂ.10,000, ದ್ವೀತಿಯ ಸ್ಥಾನ ಪಡೆದ ರೀಲ್ಸ್‍ಗೆ ರೂ.5,000 ಹಾಗೂ ತೃತೀಯ ಸ್ಥಾನ ಪಡೆದ ರೀಲ್ಸ್‍ಗೆ ರೂ.2,000 ನಗದು ಸೇರಿದಂತೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು.
ಇದರೊಂದಿಗೆ 10 ಸಮಾಧಾನಕರ ಬಹುಮಾನ ನೀಡುವುದಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.