Connect with us

ಛಲವಾದಿ ಸಮಾಜ ಬಲಪಡಿಸಲು ಮುಖಂಡರ ಸಭೆ

ಮುಖ್ಯ ಸುದ್ದಿ

ಛಲವಾದಿ ಸಮಾಜ ಬಲಪಡಿಸಲು ಮುಖಂಡರ ಸಭೆ

CHITRADURGA NEWS | 13 JANUARY 2025

ಚಿತ್ರದುರ್ಗ: ಸಂಘಟನೆ ಕೊರತೆಯಿರುವುದರಿಂದ ಛಲವಾದಿ ಸಮಾಜವನ್ನು ಬಲಪಡಿಸುವ ಸಂಬಂಧ ನಗರದ ಪ್ರವಾಸಿ ಮಂದಿರದಲ್ಲಿ ಮುಖಂಡರ ಸಭೆ ಜರುಗಿತು.

Also Read: ಡೆಸ್ಟಿನಿ-2025 | 42ನೇ ವರ್ಷದ ಅದ್ದೂರಿ ಉತ್ಸವಕ್ಕೆ ಭರದ ಸಿದ್ಧತೆ | ಮ್ಯೂಸಿಕ್, ರ‍್ಯಾಪ್, ಡಿಜೆ ಅಬ್ಬರ

ಸಭೆಯಲ್ಲಿ ಮಾತನಾಡಿದ ಛಲವಾದಿ ಮಹಾಸಭಾ ಮಾಜಿ ರಾಜ್ಯಾಧ್ಯಕ್ಷ ಎಸ್.ಕೆ.ಬಸವರಾಜ್, ಮಧ್ಯ ಕರ್ನಾಟಕದಲ್ಲಿ ಛಲವಾದಿ ಸಮಾಜದವರು ವೈಯಕ್ತಿಕ ಪ್ರತಿಷ್ಟೆಯನ್ನು ಬದಿಗಿರಿಸಿ ಜನಾಂಗದ ಹಿತದೃಷ್ಟಿಯಿಂದ ಒಂದಾಗಬೇಕಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ನಮ್ಮ ಜನಾಂಗ ಮುಂದೆ ಬರಬೇಕಾಗಿರುವುದರಿಂದ ಎಲ್ಲಾ ಬಣಗಳು ಒಂದಾಗಿ ಸೇರಿದಾಗ ಮಾತ್ರ ಶಕ್ತಿ ಮೂಡಿಸಿದಂತಾಗುತ್ತದೆ.

ರಾಜ್ಯ ಮಟ್ಟದಲ್ಲಿ ಎರಡು ಮೂರು ಸಂಘಟನೆಗಳಾಗಿ ಛಲವಾದಿ ಜನಾಂಗ ಅಲ್ಲಲ್ಲಿ ಚದುರಿರುವುದನ್ನು ಸರಿಪಡಿಸಬೇಕಾಗಿದೆ ಎಂದು ತಿಳಿಸಿದರು.

ದಾವಣಗೆರೆ ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ನಿವೃತ್ತ ಎಸ್ಪಿ ಎನ್.ರುದ್ರಮುನಿ ಸಭೆಯಲ್ಲಿ ಮಾತನಾಡಿ, ರಾಜ್ಯಾದ್ಯಂತ ಹರಿದು ಹಂಚಿ ಹೋಗಿರುವ ಛಲವಾದಿ ಜನಾಂಗವನ್ನು ಒಂದು ವೇದಿಕೆಯಡಿ ಕರೆತಂದು ಸಂಘಟಿಸುವ ಅನಿವಾರ್ಯತೆಯಿದೆ. ಹಾಗಾಗಿ ತಮ್ಮ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಎಲ್ಲರೂ ಒಂದುಗೂಡಬೇಕಿದೆ ಎಂದು ಹೇಳಿದರು.

Also Read: ರೀಲ್ಸ್ ಮಾಡಿ ಬಹುಮಾನ ಗೆಲ್ಲಿ | ಪೊಲೀಸ್ ಇಲಾಖೆಯ ಪ್ರಕಟಣೆ

ಚಿತ್ರದುರ್ಗ ಜಿಲ್ಲಾ ಛಲವಾದಿ ಸಮಾಜದ ಮುಖಂಡ ಹೆಚ್.ಸಿ.ನಿರಂಜನಮೂರ್ತಿ ಮಾತನಾಡಿ, ಛಲವಾದಿ ಸಮಾಜದ ಚದುರುವುದು ಬೇಡ, ಸಂಘಟನೆಗಳ ಜೊತೆ ಚರ್ಚಿಸಿ ಒಂದುಗೂಡಿಸುವ ಪ್ರಯತ್ನ ಮಾಡಬೇಕಿದೆ. ಆಗ ಮಾತ್ರ ಛಲವಾದಿ ಜನಾಂಗದ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು.

ಸಭೆಯಲ್ಲಿ ಚನ್ನಗಿರಿ ನಾಗರಾಜ್, ಸೋಮಶೇಖರ್ ಹೊಸಮನೆ, ನ್ಯಾಯವಾದಿ ಹೆಚ್.ಅಣ್ಣಪ್ಪಸ್ವಾಮಿ, ಎಸ್.ಎನ್.ರವಿಕುಮಾರ್, ದಯಾನಂದ, ಭಾರ್ಗವಿ ದ್ರಾವಿಡ್, ಜಯರಾಂ, ಪಿಲ್ಲಾಳಿ ಪರಮೇಶ್ವರ್, ರಂಗಸ್ವಾಮಿ ಸೇರಿದಂತೆ ಮುಖಂಡರು ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version