Connect with us

ಫೆ.5 ರಿಂದ ಶ್ರೀ ಗುರು ಚೆಲುಮೆರುದ್ರಸ್ವಾಮಿ ಜಾತ್ರಾ ಮಹೋತ್ಸವ 

ಮುಖ್ಯ ಸುದ್ದಿ

ಫೆ.5 ರಿಂದ ಶ್ರೀ ಗುರು ಚೆಲುಮೆರುದ್ರಸ್ವಾಮಿ ಜಾತ್ರಾ ಮಹೋತ್ಸವ 

CHITRADURGA NEWS | 04 EBRUARY 2025

ಚಿತ್ರದುರ್ಗ: ಫೆ. 5 ರಿಂದ 10ರವರೆಗೆ ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತಕ್ಕೊಳಪಟ್ಟಿರುವ ಚಳ್ಳಕೆರೆ ತಾಲೂಕು ನಾಗಗೊಂಡನಹಳ್ಳಿಯ ಶ್ರೀ ಗುರು ಚೆಲುಮೆರುದ್ರಸ್ವಾಮಿ ರಥೋತ್ಸವ ಮತ್ತು ದನಗಳ ಹಾಗೂ ಜಾನಪದ ಜಾತ್ರಾ ಮಹೋತ್ಸವ ನಡೆಯಲಿದೆ ಹಾಗೂ ಕುಸ್ತಿ ಪಂದ್ಯಾವಳಿಗಳು ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀ ಗುರು ಚೆಲುಮೆರುದ್ರಸ್ವಾಮಿಗಳವರ ಗದ್ದುಗೆ ಮಠದ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.

Also Read: ಇಂದಿನಿಂದ ತರಳಬಾಳು ಹುಣ್ಣಿಮೆ ಮಹೋತ್ಸವ | 9 ದಿನಗಳ ಕಾಲ ಭರಮಸಾಗರದಲ್ಲಿ ಹಬ್ಬದ ಸಂಭ್ರಮ

ನಮ್ಮ ಭಾರತ ದೇಶವು ಪುಣ್ಯ ಪುರುಷರಿಗೆ ಜನ್ಮ ನೀಡಿದೆ. ಬುದ್ಧ, ಬಸವ, ಮಹಾವೀರ, ಅಲ್ಲಮಪ್ರಭು, ಅಕ್ಕಮಹಾದೇವಿ, ಅಥಣಿಯ ಮುರುಘೇಂದ್ರ ಶಿವಯೋಗಿಗಳು, ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಗಳು ಇನ್ನೂ ಮುಂತಾದ ಸಾಧು ಸಂತರು, ಸತ್ಪುರುಷರು ಹುಟ್ಟಿ ಜಗಕೆ ಬೆಳಕನ್ನು ನೀಡಿದ್ದಾರೆ.

ಅಂತಹ ಸಾಧುಸಂತರಲ್ಲಿ ಚಳ್ಳಕೆರೆ ತಾಲೂಕಿನ ನಾಗಗೊಂಡನಹಳ್ಳಿ, ಜಾಜೂರು, ಅರವಿಗೊಂಡನಹಳ್ಳಿ ಹಾಗೂ ಹಾಲಿಗೊಂಡನಹಳ್ಳಿ ಗ್ರಾಮಗಳ ಆರಾಧ್ಯ ಸತ್ಪುರುಷರೆನಿಸಿಕೊಂಡಿರುವ ಶ್ರೀ ಚೆಲುಮೆರುದ್ರಸ್ವಾಮಿಗಳು ಒಬ್ಬರಾಗಿದ್ದಾರೆ.

ಶ್ರೀ ಚೆಲುಮೆರುದ್ರಸ್ವಾಮಿಗಳು ಒಬ್ಬ ಮಹಾನ್ ತಪಸ್ವಿಗಳು. ಅವರನ್ನು ಸ್ಮರಿಸಿ, ಗದ್ದುಗೆ ದರ್ಶನ ಪಡೆದರೆ ನೋವು-ಸಂಕಷ್ಟಗಳು, ದುಃಖ ದುಮ್ಮಾನಗಳು ದೂರವಾಗುತ್ತವೆ ಎಂಬುದು ಶ್ರೀಮಠದ ಮೇಲೆ ಅಪಾರವಾದ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಿರುವ ಈ ಭಾಗದ ಭಕ್ತಾದಿಗಳ ನಂಬಿಕೆಯಾಗಿದೆ.

Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ? 

ಶ್ರೀ ಗುರು ಚೆಲುಮೆರುದ್ರಸ್ವಾಮಿ ಗದ್ದುಗೆ ಮಠದ ಟ್ರಸ್ಟಿನ ಅಧ್ಯಕ್ಷರು, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಶಿವಯೋಗಿ.ಸಿ ಕಳಸದ ಅವರ ಅಧ್ಯಕ್ಷತೆಯಲ್ಲಿ, ಸದಸ್ಯರಾದ ಡಾ.ಬಸವಕುಮಾರ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ನಾಗಗೊಂಡನಹಳ್ಳಿ ಬಳಿಯಿರುವ ವೇದಾವತಿ ನದಿ ತೀರದಲ್ಲಿ ಬಯಲಾಗಿರುವ ಶ್ರೀ ಗುರುಚೆಲುವೆ ರುದ್ರಸ್ವಾಮಿ ಗದ್ದುಗೆ ಮಠದ ಕ್ಷೇತ್ರದಲ್ಲಿ ಫೆ. 5ರ ಬುಧವಾರ ಗಂಗಾ ಪೂಜೆ, ರಥಕ್ಕೆ ತೈಲಾಭಿಷೇಕ, ಕಳಸ ಸ್ಥಾಪನೆ, ಮೂರ್ತಿಯ ಗದ್ದುಗೆಗೆ ಆರೋಹಣ ಜಾಜೂರು ಗ್ರಾಮಸ್ಥರಿಂದ ನೆರವೇರಲಿದೆ.

ಫೆ. 6 ರಂದು ಹಾಲಿಗೊಂಡನಹಳ್ಳಿ ಗ್ರಾಮಸ್ಥರಿಂದ ಮಹಾರುದ್ರಭಿಷೇಕ, ಫೆ. 7ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವವು ನಾಗಗೊಂಡನಹಳ್ಳಿ ಗ್ರಾಮಸ್ಥರಿಂದ ನಡೆಯಲಿದೆ.

ಅದೇ ದಿನ ಸಂಜೆ 7 ಗಂಟೆಯಿಂದ ವಿವಿಧ ಜಾನಪದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.8 ರಂದು ಸಂಜೆ 4 ಗಂಟೆಗೆ ಹೂವಿನ ಅಡ್ಡಪಲ್ಲಕ್ಕಿ ಉತ್ಸವವನ್ನು ಅರವಿಗೊಂಡನಹಳ್ಳಿ ಗ್ರಾಮಸ್ಥರು ನಡೆಸಿಕೊಡಲಿದ್ದಾರೆ.

ಈ ಬಾರಿ ವಿಶೇಷವಾಗಿ ಚಿತ್ರದುರ್ಗ ಜಿಲ್ಲಾ ಕುಸ್ತಿ ಸಂಘ ಇವರ ಸಹಭಾಗಿತ್ವದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಶೈಲಿಯ ಪುರುಷ ಹಾಗೂ ಮಹಿಳೆಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಳಿಯನ್ನು ಫೆ. 9 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಟ್ರಸ್ಟ್ ಕಮಿಟಿ ಅಧ್ಯಕ್ಷರು ಹಾಗೂ ಸದಸ್ಯರ ಸಮ್ಮುಖದಲ್ಲಿ ಏರ್ಪಡಿಸಲಾಗಿದೆ.

Also Read: ಭರಮಸಾಗರ ಕೆರೆಯಲ್ಲಿ ಇಂದಿನಿಂದ ಬೋಟಿಂಗ್ | ಮುರುಡೇಶ್ವರದಿಂದ ಬಂದಿವೆ ಬೋಟ್

ಫೆ.10 ರಂದು ಸಮಾರೋಪ ಸಮಾರಂಭವು ನಡೆಯಲಿದ್ದು, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಹಾಗೂ ಹೂವಿನ ಅಡ್ಡಪಲ್ಲಕ್ಕಿ ಉತ್ಸವ ಜಾಜೂರು ಗ್ರಾಮದ ಪ್ರಮುಖ ಬೀದಿಯಲ್ಲಿ ನಡೆದು ಸಂಪನ್ನಗೊಳ್ಳಲಿದೆ.

 ಈ ಭಾಗದ ಆರಾಧ್ಯದೈವ ಚೆಲುಮೆರುದ್ರಸ್ವಾಮಿಗಳವರ ಸ್ವಾಮಿಗಳು ನಡೆದಾಡಿದ ಪುಣ್ಯಕ್ಷೇತ್ರವಾಗಿದ್ದು ಈ ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ತಾವು ಭಾಗಿಯಾಗುವುದರ ಜೊತೆಗೆ ತನು ಮನ ಧನ ನೀಡಿ ಸಹಕಾರ, ನೆರವು ನೀಡಬೇಕೆಂದು ಕಮಿಟಿಯ ಪದಾಧಿಕಾರಿಗಳು ಕೋರಿದ್ದಾರೆ.

ಜಾತ್ರೆ ನಡೆಯುವ ಸ್ಥಳವು ನದಿ ತೀರವಾಗಿದ್ದು ನೀರು ನೆರಳಿನ ವ್ಯವಸ್ಥೆ ಇರುತ್ತದೆ. ಜಾತ್ರೆಯಲ್ಲಿ ಅಂಗಡಿ ಹೋಟೆಲಗಳಿಗೆ ಸುಂಕವಿರುತ್ತದೆ.

ಜಾತ್ರೆಯಲ್ಲಿ ಶ್ರೀ ಸ್ವಾಮಿಯ ಮುಕ್ತಿಧ್ವಜ, ಹೂವಿನ ಹಾರ ಹರಾಜು ಮಾಡಿದ ತಕ್ಷಣ ಸ್ಥಳದಲ್ಲಿ ಹಣವನ್ನು ಪಾವತಿ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ 8951487653, 9980172992, 8050652081, 7483257981, 9902905721 ಗೆ ಸಂಪರ್ಕಿಸಬಹುದು.

Also Read: ದಾಳಿಂಬೆ, ‌ಮಾವು, ಬಾಳೆ ಸೂಕ್ಷ್ಮ ನೀರಾವರಿ ಅಳವಡಿಕೆ ತರಬೇತಿ 

ಈಗಾಗಲೇ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು. ಅಂಗಡಿ ಮುಂಗಟ್ಟುಗಳನ್ನು ಹಾಕಿಕೊಳ್ಳುತ್ತಿದ್ದಾರೆ. ರಥೋತ್ಸವ ಕಟ್ಟುವ ಕೆಲಸ ನಡೆದಿದೆ. ಕುಸ್ತಿ ಅಖಡಾ ರೆಡಿ ಆಗುತ್ತಿದೆ. ದಾಸೋಹ ಭವನ, ಶೌಚಾಲಯ ಸ್ವಚ್ಛತೆ ಇತರೆ ಸೇರಿದಂತೆ ಕೆಲಸಗಳು ಭರದಿಂದ ಸಾಗುತ್ತಿವೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version