ಮುಖ್ಯ ಸುದ್ದಿ
ತರಳಬಾಳು ಹುಣ್ಣಿಮೆ ಮಹೋತ್ಸವ | ವಾಹನಗಳ ಪಾರ್ಕಿಂಗ್ ಮಾಡುವ ಜಾಗ ಇಲ್ಲಿವೆ ನೋಡಿ..
CHITRADURGA NEWS | 04 FEBRUARY 2025
ಚಿತ್ರದುರ್ಗ: ಸಿರಿಗೆರೆ ತರಳಬಾಳು ಬೃಹನ್ಮಠದಿಂದ ನಡೆಯುವ ತರಳಬಾಳು ಮಹೋತ್ಸವಕ್ಕೆ ಬರುವ ವಾಹನಗಳು ಪಾರ್ಕಿಂಗ್ ಮಾಡುವ ಸ್ಥಳ ಇಲ್ಲಿವೆ.
Also Read: ಇಂದಿನಿಂದ ತರಳಬಾಳು ಹುಣ್ಣಿಮೆ ಮಹೋತ್ಸವ | 9 ದಿನಗಳ ಕಾಲ ಭರಮಸಾಗರದಲ್ಲಿ ಹಬ್ಬದ ಸಂಭ್ರಮ
ಮೋಟಾರ್‌ಸೈಕಲ್ & ಕಾರು-ಲಘು ವಾಹನ :
ಭರಮಸಾಗರ ಗ್ರಾಮದ ಜಿಲ್ಲಾ ಮುಖ್ಯ ರಸ್ತೆ ಮುಖಾಂತರ ಬಂದು ಹಳೇ ಹೆದ್ದಾರಿಯ ಮುಖಾಂತರ ಕಾರ್ಯಕ್ರಮ ಸ್ಥಳಕ್ಕೆ ಬಂದು ಸೇರುವುದು, ಕಾರ್ಯಕ್ರಮ ಮುಗಿದ ನಂತರ ಅದೇ ಮಾರ್ಗವಾಗಿ ವಾಪಸ್ಸು ಹೋಗುವುದು.
ಹೆಗ್ಗೆರೆ & ಹಂಪನೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಮಾರ್ಗಗಳ ವಿವರ :
ಮೋಟಾರ್‌ಸೈಕಲ್ & ಕಾರು-ಲಘು ವಾಹನ :- ಹೆಗ್ಗೆರೆ ರಸ್ತೆ ರಾಷ್ಟ್ರೀಯ ಹೆದ್ದಾರಿ ಕೆಳ ಸೇತುವೆ ಮುಖಾಂತರ ನಂತರ ಸರ್ವಿಸ್ ರಸ್ತೆ ಮಾರ್ಗವಾಗಿ ಬರುವುದು, ಅದೇ ರೀತಿ ಹಂಪನೂರು ಗ್ರಾಮದ ರಸ್ತೆ ಬಳಿಯ ರಾಷ್ಟ್ರೀಯ ಹೆದ್ದಾರಿ ಕೆಳ ಸೇತುವೆ ಮುಖಾಂತರ ನಂತರ ಸರ್ವಿಸ್ ರಸ್ತೆ ಮಾರ್ಗವಾಗಿ ಕಾರ್ಯಕ್ರಮ ಸ್ಥಳಕ್ಕೆ ಬಂದು ಸೇರುವುದು, ಕಾರ್ಯಕ್ರಮ ಮುಗಿದ ನಂತರ ಅದೇ ಮಾರ್ಗವಾಗಿ ವಾಪಸ್ಸು ಹೋಗುವುದು.
Also Read: ಭರಮಸಾಗರ ಕೆರೆಯಲ್ಲಿ ಇಂದಿನಿಂದ ಬೋಟಿಂಗ್ | ಮುರುಡೇಶ್ವರದಿಂದ ಬಂದಿವೆ ಬೋಟ್
ವಿಷೇಶ ಸೂಚನೆ :
ಕಾರ್ಯಕ್ರಮಕ್ಕೆ ಬರುವ ಎಲ್ಲಾ ಸದ್ಭಕ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮ ಸ್ಥಳದ ಪಕ್ಕದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಇರುವ ಕಾರಣ ಯಾರೂ ಕೂಡ ಪಾದಚಾರಿಯಾಗಿ ಹೆದ್ದಾರಿಯನ್ನು ದಾಟುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಹಾಗೆಯೇ ಹೆದ್ದಾರಿಯಲ್ಲಿ ವಿವಿಧ ಬಗೆಯ ಬ್ಯಾನರ್‌ಗಳನ್ನು ಅಳವಡಿಸುವುದನ್ನು ಸಹ ನಿಷೇಧಿಸಲಾಗಿದೆ.
ಕಾರ್ಯಕ್ರಮಕ್ಕೆ ಬರುವ ಸದ್ಭಕ್ತರು ಹಾಗೂ ಸಾರ್ವಜನಿಕರು ಡಿಜಿಟಲ್ ಪಾರ್ಕಿಂಗ್ ವ್ಯವಸ್ಥೆಯ ಅನುಕೂಲವನ್ನು ಪಡೆದುಕೊಳ್ಳುವುದು.