ಮುಖ್ಯ ಸುದ್ದಿ
ರಸ್ತೆ ವಿಸ್ತರಣೆ ಕಾಮಗಾರಿ | ಎರಡು ದಿನ ವಿದ್ಯುತ್ ವ್ಯತ್ಯಯ
CHITRADURGA NEWS | 28 JUNE 2024
ಚಿತ್ರದುರ್ಗ: ರಸ್ತೆ ವಿಸ್ತರಣೆ ಕಾಮಗಾರಿ ಹಿನ್ನೆಲೆಯಲ್ಲಿ ಹಿರಿಯೂರು ನಗರದಲ್ಲಿ ಜೂನ್ 29,30 ರಂದು ವಿದ್ಯುತ್ ವ್ಯತ್ಯಯವಾಗಲಿದೆ.
ಹಿರಿಯೂರು ನಗರದ ಹಳೆಯ 66/11 ಕೆವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೋಗುವ ಮಾರ್ಗದಲ್ಲಿ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿರುವ ಮರಗಳನ್ನು ಕತ್ತರಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ಜೂನ್ 29 ಮತ್ತು 30ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಹರಿಶ್ಚಂದ್ರಘಾಟ್, ಸಾಯಿಗಾರ್ಡನ್, ಸಿ.ಎಂ.ಬಡಾವಣೆ, ಕುವೆಂಪು ನಗರ, ಪುಷ್ಪಾಂಜಲಿ ಚಿತ್ರಮಂದಿರ, ಮೇರಿರಸ್ತೆ, ಅವಧಾನಿನಗರ, ತಾಲ್ಲೂಕು ಕಚೇರಿ, ಹುಳಿಯಾರು ರಸ್ತೆ, ಗಾಡಿಬಸಣ್ಣ ಬಡಾವಣೆ, ಲಕ್ಷ್ಮಮ್ಮ ಬಡಾವಣೆ, ಲಕ್ಕವ್ವನಹಳ್ಳಿ, ಕೆ.ಎಂ. ಕೊಟ್ಟಿಗೆ, ಆಜಾದ್ ಬಡಾವಣೆ, ದೊಡ್ಡಗಟ್ಟ, ಸೀಗೆಹಟ್ಟಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪೀರ್ ಸಾಬ್ ತಿಳಿಸಿದ್ದಾರೆ.