Connect with us

ನೂತನ ಆಯುರ್ವೇದ ವನಕ್ಕೆ ಎಡಿಸಿ ಕುಮಾರಸ್ವಾಮಿ ಭೂಮಿಪೂಜೆ‌‌

ನೂತನ ಆಯುರ್ವೇದ ವನಕ್ಕೆ ಎಡಿಸಿ ಕುಮಾರಸ್ವಾಮಿ ಭೂಮಿಪೂಜೆ‌‌

ಮುಖ್ಯ ಸುದ್ದಿ

ನೂತನ ಆಯುರ್ವೇದ ವನಕ್ಕೆ ಎಡಿಸಿ ಕುಮಾರಸ್ವಾಮಿ ಭೂಮಿಪೂಜೆ‌‌

CHITRADURGA NEWS | 28 JUNE 2024

ಚಿತ್ರದುರ್ಗ: ನಗರಸಭೆ, ಅರಣ್ಯ ಇಲಾಖೆ, ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ಶ್ರೀವಿದ್ಯಾಗಣಪತಿ ಸೇವಾ ಸಮಿತಿ, ಅಮೃತ ಆಯುರ್ವೇದ ಕಾಲೇಜು ವತಿಯಿಂದ ಸಿದ್ದಾರ್ಥ ಬಡಾವಣೆ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಅಂಗವಾಗಿ ನೂತನ ಆಯುರ್ವೇದ ವನಕ್ಕೆ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಭೂಮಿಪೂಜೆ‌‌ ನೆರವೇರಿಸಿದರು.

ಇದನ್ನೂ ಓದಿ: ನಿಜಲಿಂಗಪ್ಪ ಉದ್ಘಾಟಿಸಿದ್ದ ದೃಶ್ಯ ಕಲಾ ಕಾಲೇಜಿಗೆ ವಜ್ರ ಮಹೋತ್ಸವ ಸಂಭ್ರಮ

ಈ ವೇಳೆ ಮಾತನಾಡಿದ ಅವರು, ಪ್ರಕೃತಿಯ ಮಡಿಲಲ್ಲಿ ಗಾಳಿ, ನೀರು, ಭೂಮಿ, ಆಕಾಶದ ಸಂಬಂಧದೊಂದಿಗೆ ನಾವು ಬದುಕುತ್ತಿದ್ಧೇವೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಕೃತಿಯನ್ನು ಪ್ರೀತಿಸಿ, ಗೌರವಿಸಿ ಸಂರಕ್ಷಿಸಬೇಕು ಜೊತೆಗೆ ಆಯುರ್ವೇದ ವನ ನಿರ್ಮಾಣ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ.

ಕೋವಿಡ್ ಬಂದ ಭೀಕರ ಸಂದರ್ಭದಲ್ಲಿ ಜನರಿಗೆ ನಿಜವಾಗಿಯೂ ಆಕ್ಸಿಜನ್ ಬೆಲೆ ಗೊತ್ತಾಗಿದ್ದು, ಅಲ್ಲಿವರೆಗೂ ಆಕ್ಸಿಜನ್ ಎಂದರೆ ಗಾಳಿ ಎಂದಷ್ಟೇ ತಿಳಿಸಿದ್ದೆವು, ಹಿಂದೆ ನಮ್ಮ ಪೂರ್ವಿಕರು ಒಂದು ಮರ ಕಡಿದರೆ ಮತ್ತೊಂದನ್ನು ನೆಡುತ್ತಿದ್ದರು. ಇದನ್ನು ನಾವೆಲ್ಲರೂ ಮಾಡಬೇಕು. ಸರ್ಕಾರ ಕಾಡು ಬೆಳೆಸಲು ಎಲ್ಲಾ ಪ್ರಯತ್ನ ಮಾಡುತ್ತದೆ. ಯಾರೇ ಆಗಲಿ ಪರಿಸರ ಉಳಿಸುವ ಒಳ್ಳೆಯ ಕೆಲಸ ಮಾಡಿದರೆ ಅದಕ್ಕೆ ಬೆಂಬಲ ನೀಡಬೇಕು ಎಂದರು.

ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು | ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಕೇಸರಿ ಪಡೆ ಆಕ್ರೋಶ

ಕಾಡು ಬೆಳೆದರೆ ನಾಡು ಬೆಳೆಯುತ್ತದೆ ಜೊತೆಗೆ ಪ್ರತಿಗಿಡಗಳು ಕೂಡ ಆಯುರ್ವೇದ ಗುಣಗಳನ್ನು ಹೊಂದಿರುತ್ತವೆ, ಚಿತ್ರದುರ್ಗ ಎಂಬ ಮಧ್ಯ ಕರ್ನಾಟಕದಲ್ಲಿ ಆಯುರ್ವೇದ ವನ ನಿರ್ಮಾಣ ಮಾಡುವ ಮಹತ್ವದ ಸಂಕಲ್ಪ ಮತ್ತು ಗುರಿ ಹೊಂದಿರುವುದು ಮತ್ತು ಆಯುರ್ವೇದ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳಿಗೆ ಇದೊಂದು ಉಪಯುಕ್ತ ಸಸ್ಯಕ್ಷೇತ್ರವಾಗಲಿ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮಾತನಾಡಿ, ಚಿತ್ರದುರ್ಗ ನಗರದಲ್ಲಿ ಅದೆಷ್ಟೋ ಪಾರ್ಕ್ ಗಳಿವೆ ಆದರೆ ಉಪಯುಕ್ತವಾಗುವುದು ಮುಖ್ಯ, ಪ್ರಸ್ತುತ ಆರೋಗ್ಯ ಬಹಳ ಮುಖ್ಯ, ಕೇವಲ ಜೂನ್ ತಿಂಗಳಲ್ಲಿ ಪರಿಸರ ದಿನಾಚರಣೆ ಮಾಡುವ ಬದಲು ಹೀಗೆ ಉದ್ಯಾನವನ್ನು ಆಯುರ್ವೇದ ಕ್ಷೇತ್ರವನ್ನಾಗಿ ಮಾಡುವುದು ಮುಖ್ಯ. ಅರಣ್ಯ ಇಲಾಖೆ ಮತ್ತು ಆಯುಷ್ ಹಾಗೂ ಎಲ್ಲರ ಸಹಕಾರದೊಂದಿಗೆ ಎಲ್ಲಾ ಬಗೆಯ ಆಯುರ್ವೇದ ಗಿಡಗಳನ್ನು ಬೆಳೆಸಿ ಎಂದರು.

ಸರ್ಕಾರ ಈ ವರ್ಷ 5 ಕೋಟಿ ಗಿಡಗಳನ್ನು ಬೆಳೆಸಲು ತೀರ್ಮಾನಿಸಿರುವುದು ಮಹತ್ವದ ಕಾರ್ಯ ಆದರೆ ಸರ್ಕಾರದೊಂದಿಗೆ ಸಾರ್ವಜನಿಕರೂ ಕೈ ಜೋಡಿಸಿದಾಗ ಮಾತ್ರ ಯೋಜನೆಗಳು ಯಶಸ್ವಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ನಿಮ್ಮ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಮತ್ತು ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದಿಂದ ಜಿಲ್ಲಾಧ್ಯಂತ ಹಸಿರು ಬೆಳೆಸಲು ಎಲ್ಲಾ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಕ್ಲೈಮ್ಯಾಕ್ಸ್‌ ಹಂತಕ್ಕೆ ‘ಮೆಜೆಸ್ಟಿಕ್–2’ | ಹಿರಿಯ ನಟಿ ಶ್ರುತಿ ಎಂಟ್ರಿ

ಈ ಸಂದರ್ಭದಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಡಾ. ಎಂ.ಸಿ ನರಹರಿ, ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ಆಡಳಿತಾಧಿಕಾರಿ ಮಾಲತೇಶ್ ಅರಸ್, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಟಿ.ರುದ್ರಮುನಿ, ನಗರಸಭೆ ಸದಸ್ಯ ಜಯಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version