ಮುಖ್ಯ ಸುದ್ದಿ
ಚಿತ್ರದುರ್ಗ, ಹೊಳಲ್ಕೆರೆ ತಾಲೂಕಿನಲ್ಲಿ ನಾಳೆ ಕರೆಂಟ್ ಇರಲ್ಲ
CHITRADURGA NEWS | 27 JANUARY 2025
ಚಿತ್ರದುರ್ಗ: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 220/66/11 ಕೆ.ವಿ ಚಿತ್ರದುರ್ಗ, 66/11 ಕೆ.ವಿ ಚಿತ್ರದುರ್ಗ, ಭರಮಸಾಗರ, ಸಿರಿಗೆರೆ, ವಿಜಾಪುರ, ಹಿರೆಗುಂಟನೂರು, ಪಂಡರಹಳ್ಳಿ, ಹೆಚ್.ಡಿ.ಪುರ, ಚಿತ್ರಹಳ್ಳಿ, ಮಾಡನಾಯಕನಹಳ್ಳಿ, ತುರುವನೂರು, ಬಾಲೇನಹಳ್ಳಿ, ಮಲ್ಲಾಡಿಹಳ್ಳಿ, ರಾಮಗಿರಿ, ಹೊಳಲ್ಕೆರೆ, ಜೆ.ಎನ್.ಕೋಟೆ ವಿ.ವಿ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯಕ್ಕಾಗಿ ವಿ.ವಿ ಕೇಂದ್ರಗಳಿಗೆ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ ಎನ್.ಜೆ.ವೈ ಮತ್ತು ಕೃಷಿ 11 ಕೆ.ವಿ ಮಾರ್ಗಗಳಲ್ಲಿ ಇದೇ ಜ.28ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
Also Read: ಕಳಚಿಬಿತ್ತು ಆಸ್ಪತ್ರೆ ಸೀಲಿಂಗ್ | ಬೆಡ್ ಮೇಲಿದ್ದ ರೋಗಿ ಜಸ್ಟ್ ಮಿಸ್
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ಚಿತ್ರದುರ್ಗ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳು, ಭರಮಸಾಗರ, ಸಿರಿಗೆರೆ, ವಿಜಾಪುರ, ಹಿರೆಗುಂಟನೂರು, ಪಂಡರಹಳ್ಳಿ, ಹೆಚ್.ಡಿ.ಪುರ, ಚಿತ್ರಹಳ್ಳಿ, ಮಾಡನಾಯಕನಹಳ್ಳಿ, ತುರುವನೂರು, ಬಾಲೇನಹಳ್ಳಿ, ಮಲ್ಲಾಡಿಹಳ್ಳಿ, ರಾಮಗಿರಿ, ಹೊಳಲ್ಕೆರೆ, ಜೆ.ಎನ್.ಕೋಟೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ತಿಮ್ಮರಾಯ ತಿಳಿಸಿದ್ದಾರೆ.