By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಕೋಟೆ ಪೊಲೀಸ್ ಠಾಣೆ | ಬೈಕ್ ಗಳ ಬಹಿರಂಗ ಹರಾಜು 
    2 hours ago
    SJM ಸಂಚಾರಿ ದಂತ ಚಿಕಿತ್ಸಾ ಘಟಕದ ವಾಹನಕ್ಕೆ ಚಾಲನೆ
    SJM ಸಂಚಾರಿ ದಂತ ಚಿಕಿತ್ಸಾ ಘಟಕದ ವಾಹನಕ್ಕೆ ಚಾಲನೆ 
    2 hours ago
    ತಂಬಾಕು ಕಾರ್ಯಾಚರಣೆ | 33 ಪ್ರಕರಣ ದಾಖಲು
    ತಂಬಾಕು ಕಾರ್ಯಾಚರಣೆ | 33 ಪ್ರಕರಣ ದಾಖಲು 
    4 hours ago
    ಚಂದ್ರದರ್ಶನ
    ಸಡಗರ, ಸಂಭ್ರಮದ ಯುಗಾದಿ ಆಚರಣೆ | ಹೊಸ ವರ್ಷದ ಆಗಮನ 
    16 hours ago
    ಆಸಿಡ್ ದಾಳಿ ಸಂತ್ರಸ್ತರ ಆರೋಗ್ಯ ವಿಚಾರಿಸಿದ ನ್ಯಾ.ವಿಜಯ್
    ಆಸಿಡ್ ದಾಳಿ ಸಂತ್ರಸ್ತರ ಆರೋಗ್ಯ ವಿಚಾರಿಸಿದ ನ್ಯಾ.ವಿಜಯ್
    18 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಭೀಕರ ಅಪಘಾತ | ಮೂವರು ಪೊಲೀಸ್ ಅಧಿಕಾರಿಗಳು ಸಾವು | ಹೆಗ್ಗೆರೆ ಬಳಿ ಘಟನೆ
    6 days ago
    SNAKE BYTE
    ಬಾಲಕಿಗೆ ಕಚ್ಚಿದ ನಾಗರಹಾವು | ಬಾಯಿಂದಲೇ ವಿಷ ತೆಗೆದ ಶಿಕ್ಷಕ ರವಿಶಂಕರ್‌ ಸಮಯಪ್ರಜ್ಞೆ | ಇಬ್ಬರಿಗೂ ಚಿಕಿತ್ಸೆ
    7 days ago
    DC Office Chitradurga
    ಡಿಸಿ, ಎಡಿಸಿ ಸಹಿ ದುರ್ಬಳಕೆ | 6 ಮಂದಿ ನೌಕರರ ವಿರುದ್ಧ ದೂರು | 15 ಲಕ್ಷ ರೂ. ಮೊತ್ತದ ನಕಲಿ ಬಿಲ್‌ ಸೃಷ್ಟಿ | ಡಿಸಿ ಕಚೇರಿ ಸಂಕೀರ್ಣದಲ್ಲೇ ನಡೆದ ಅಕ್ರಮ
    7 days ago
    ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ
    ಕುಡಿಯಲು ಹಣ ಕೊಡದಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಪಾಪಿಗೆ ಜೀವಾವಧಿ ಶಿಕ್ಷೆ
    3 weeks ago
    SP Ranjith Kumar Bandaru
    ಚಾಕು ಇರಿದ ಆರೋಪಿ ಬಂಧನ | ಕೆಲವೇ ಗಂಟೆಗಳಲ್ಲಿ ಆರೋಪಿ ಪತ್ತೆ ಮಾಡಿದ ಪೊಲೀಸರು
    3 weeks ago
  • ತಾಲೂಕು
    ತಾಲೂಕುShow More
    ಕುಂಚಿಟಿಗ ಮಠದಲ್ಲಿ 65 ಗ್ರಾಮದ ಪ್ರಮುಖರಿಗೆ‌ ಸನ್ಮಾನ
    ಕುಂಚಿಟಿಗ ಮಠದಲ್ಲಿ 65 ಗ್ರಾಮದ ಪ್ರಮುಖರಿಗೆ‌ ಸನ್ಮಾನ | ಸುಜ್ಞಾನ ಸಂಗಮ
    1 week ago
    ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ
    ನಾಯಕನಹಟ್ಟಿ ರಥೋತ್ಸವ | ಮುಕ್ತಿ ಭಾವುಟ ಹರಾಜು | ಈ ವರ್ಷ ಎಷ್ಟು ಮೊತ್ತಕ್ಕೆ ?
    2 weeks ago
    SRI SHANTHAVEERA SWAMIJI PATTADIKARA MAHOTHSAVA
    ಶ್ರೀ ಶಾಂತವೀರ ಸ್ವಾಮೀಜಿ 25ನೇ ಪಟ್ಟಾಧಿಕಾರ ಮಹೋತ್ಸವ | ಸಂಗಮೇಶ್ವರ ಜಯಂತಿ | ಪುಷ್ಪವೃಷ್ಠಿ, ಅಭಿನಂದನೆಗಳ ಮಹಾಪೂರ
    3 weeks ago
    Sri Shanthaveera swamiji
    ಇಂದು ಹೊಸದುರ್ಗದ ಶ್ರೀಶಾಂತವೀರ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ
    3 weeks ago
    CAR ACCIDENT NEAR HIREHALLY
    ಭೀಕರ ಅಪಘಾತ | ಮೂರು ಮಂದಿ ಸ್ಥಳದಲ್ಲೇ ಸಾವು | ನಜ್ಜುಗುಜ್ಜಾದ ಕಾರು
    3 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    ARECANUT RATE
    ಅಡಿಕೆ ಧಾರಣೆ | ಯುಗಾದಿ ನಂತರದ ಅಡಿಕೆ ಮಾರುಕಟ್ಟೆ ರೇಟ್‌
    20 hours ago
    ARECANUT RATE
    ಅಡಿಕೆ ಧಾರಣೆ | 17 ಮಾರ್ಚ್‌ | ಯಾವ ಅಡಿಕೆಗೆ ಎಷ್ಟು ರೇಟ್‌
    4 days ago
    ARECANUT RATE
    ಸಾಗರ ಅಡಿಕೆ ಮಾರುಕಟ್ಟೆಯಲ್ಲಿ 59 ಸಾವಿರ ದಾಟಿದ ರಾಶಿ ಅಡಿಕೆ
    5 days ago
    ARECANUT RATE
    ತೀರ್ಥಹಳ್ಳಿ ಅಡಿಕೆ ಮಾರುಕಟ್ಟೆ ವಿವರ
    7 days ago
    ARECANUT RATE
    ಅಡಿಕೆ ಧಾರಣೆ | 13 ಮಾರ್ಚ್‌ | ರಾಶಿ ಅಡಿಕೆ ಧಾರಣೆಯಲ್ಲಿ ಹಲ್‌ಚಲ್‌
    1 week ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಮಾರ್ಚ್ 21 | ಉದ್ಯೋಗಗಳಲ್ಲಿ ಹೆಚ್ಚುವರಿ ಕೆಲಸದ ಒತ್ತಡ, ಪ್ರಯಾಣದಲ್ಲಿ ಎಚ್ಚರ
    6 hours ago
    ದಿನ ಭವಿಷ್ಯ
    ದಿನ ಭವಿಷ್ಯ | ಮಾರ್ಚ್ 20 | ಆಕಸ್ಮಿಕ ಧನಲಾಭ, ಹಿರಿಯರ ಅನುಗ್ರಹದಿಂದ ಪ್ರಮುಖ ಕಾರ್ಯಗಳು ಯಶಸ್ವಿ
    1 day ago
    ದಿನ ಭವಿಷ್ಯ
    ದಿನ ಭವಿಷ್ಯ | ಮಾರ್ಚ್ 19 | ಕೈಗೊಂಡ ಕೆಲಸಗಳಲ್ಲಿ ಯಶಸ್ಸು, ಆರೋಗ್ಯದ ಬಗ್ಗೆ ಎಚ್ಚರಿಕೆ
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಮಾರ್ಚ್ 18 | ಶುಭ ಸುದ್ದಿ, ಉದ್ಯೋಗದಲ್ಲಿ ಉತ್ಸಾಹಭರಿತ ವಾತಾವರಣ
    3 days ago
    ದಿನ ಭವಿಷ್ಯ
    ದಿನ ಭವಿಷ್ಯ | ಮಾರ್ಚ್ 17 | ವ್ಯಾಪಾರಗಳಲ್ಲಿ ಹೊಸ ಹೂಡಿಕೆ, ದೀರ್ಘಕಾಲದ ಸಾಲಗಳ ಒತ್ತಡ
    4 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮಾರ್ಚ್ 18 | ಮೆಕ್ಕೆಜೋಳ ರೇಟ್…
    3 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮಾರ್ಚ್ 17 | ಹತ್ತಿ ರೇಟ್ ಎಷ್ಟಿದೆ?
    4 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮಾರ್ಚ್ 16 | ಮೆಕ್ಕೆಜೋಳ, ಶೇಂಗಾ ರೇಟ್…
    5 days ago
    ಮಾರುಕಟ್ಟೆ ಧಾರಣೆ
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್..
    1 week ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮಾರ್ಚ್ 13 | ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ..
    1 week ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ 
    2 hours ago
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ | ಶಾಸಕ ಚಂದ್ರಪ್ಪ, MLC ಕೆ.ಎಸ್.ನವೀನ್ ಭಾಗೀ 
    6 days ago
    ಹೊಳಲ್ಕೆರೆಯಲ್ಲಿ ಹಾಲು ಕರೆಯುವ ಸ್ಪರ್ಧೆ
    ಹೊಳಲ್ಕೆರೆಯಲ್ಲಿ ಹಾಲು ಕರೆಯುವ ಸ್ಪರ್ಧೆ | ಶಿಮುಲ್ ನಿರ್ದೇಶಕ ಶೇಖರ್ ಉದ್ಘಾಟನೆ 
    1 week ago
    Rank Winners
    ಮಲ್ಲಾಡಿಹಳ್ಳಿ ಆಯುರ್ವೇದ ವೈದ್ಯಕೀಯ ಕಾಲೇಜಿಗೆ 15 ರ‍್ಯಾಂಕ್‌ 
    1 week ago
    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸಮ್ಮೇಳನ
    ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ | ಶಾಸಕ ಎಂ.ಚಂದ್ರಪ್ಪ 
    2 weeks ago
  • ಹಿರಿಯೂರು
    ಹಿರಿಯೂರುShow More
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    1 month ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    1 month ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    1 month ago
    M.G. Rangaswamy
    ಹಿರಿಯೂರು ಕಸಾಪ ಸಮ್ಮೇಳನಾಧ್ಯಕ್ಷರಾಗಿ ‘ಎಂಜಿಆರ್‌ʼ
    2 months ago
    Hosayalanadu school anniversery
    ಹೊಸಯಳನಾಡು ಪಬ್ಲಿಕ್‌ ಶಾಲೆ ವಾರ್ಷಿಕೋತ್ಸವ | ಯದುವೀರ ಕೃಷ್ಣದತ್ತ ಒಡೆಯರ್‌, ನಟ ರಮೇಶ್‌ ಅರವಿಂದ್‌ ಭಾಗೀ
    3 months ago
  • ಹೊಸದುರ್ಗ
    ಹೊಸದುರ್ಗShow More
    ಕುಂಚಿಟಿಗ ಮಠದಲ್ಲಿ 65 ಗ್ರಾಮದ ಪ್ರಮುಖರಿಗೆ‌ ಸನ್ಮಾನ
    ಕುಂಚಿಟಿಗ ಮಠದಲ್ಲಿ 65 ಗ್ರಾಮದ ಪ್ರಮುಖರಿಗೆ‌ ಸನ್ಮಾನ | ಸುಜ್ಞಾನ ಸಂಗಮ
    1 week ago
    SRI SHANTHAVEERA SWAMIJI PATTADIKARA MAHOTHSAVA
    ಶ್ರೀ ಶಾಂತವೀರ ಸ್ವಾಮೀಜಿ 25ನೇ ಪಟ್ಟಾಧಿಕಾರ ಮಹೋತ್ಸವ | ಸಂಗಮೇಶ್ವರ ಜಯಂತಿ | ಪುಷ್ಪವೃಷ್ಠಿ, ಅಭಿನಂದನೆಗಳ ಮಹಾಪೂರ
    3 weeks ago
    Sri Shanthaveera swamiji
    ಇಂದು ಹೊಸದುರ್ಗದ ಶ್ರೀಶಾಂತವೀರ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ
    3 weeks ago
    MUDHOL HOUND
    ಸ್ಫೋಟಕ ಸೇವಿಸಿ ಮುಧೋಳ ನಾಯಿ ಸಾವು!
    4 weeks ago
    ಸುಜ್ಞಾನ ಸಂಗಮ ಕಾರ್ಯಕ್ರಮ
    ಆಲಸ್ಯದಿಂದ ಆರೋಗ್ಯ ಹಾಳು | ಶ್ರೀ ಶಾಂತಿವೀರ ಸ್ವಾಮೀಜಿ
    1 month ago
  • Life Style
    Life StyleShow More
    U' shaped tilak
    ಹಣೆಯ ಮೇಲೆ ‘U’ ಆಕಾರದ ತಿಲಕ ಇಡುವುದೇಕೆ ಗೊತ್ತಾ?
    6 hours ago
    Gooseberry (Amla)-Turmeric Juice
    ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ(ಆಮ್ಲಾ)-ಅರಿಶಿನ ಜ್ಯೂಸ್ ಕುಡಿಯಿರಿ ಈ ಪ್ರಯೋಜನ ಪಡೆಯಿರಿ
    7 hours ago
    red bumps on the eyes
    ಕಣ್ಣುಗಳ ಮೇಲೆ ಕೆಂಪು ಗುಳ್ಳೆಗಳು ಮೂಡಲು ಕಾರಣವೇನು ಗೊತ್ತಾ?
    1 day ago
    honey
    ಈ ರೀತಿ ಜೇನುತುಪ್ಪ ತಿಂದರೆ ಅದು ಹಾನಿಕಾರಕವಂತೆ
    1 day ago
    ಕ್ರ್ಯಾನ್‌ಬೆರಿ
    ಕ್ರ್ಯಾನ್‌ಬೆರಿಗಳು ಆರೋಗ್ಯಕ್ಕೆ ಒಂದು ವರದಾನವಾಗಿದೆ; ಯಾಕೆ ಗೊತ್ತಾ?
    2 days ago
Reading: ಚಿತ್ರದುರ್ಗದಲ್ಲಿ ಫೆ.7, 8 ರಂದು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ | ಜಿಲ್ಲೆಯ ಐತಿಹಾಸಿಕ ಸ್ಥಳಗಳ ಮಹತ್ವ ತಿಳಿಸಿ | ಡಿಸಿ ಟಿ.ವೆಂಕಟೇಶ್ 
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಚಿತ್ರದುರ್ಗದಲ್ಲಿ ಫೆ.7, 8 ರಂದು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ | ಜಿಲ್ಲೆಯ ಐತಿಹಾಸಿಕ ಸ್ಥಳಗಳ ಮಹತ್ವ ತಿಳಿಸಿ | ಡಿಸಿ ಟಿ.ವೆಂಕಟೇಶ್ 

News Desk Chitradurga News
Last updated: 2 February 2025 19:24
News Desk Chitradurga News
1 year ago
Share
ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ
SHARE

CHITRADURGA NEWS | 02 FEBRUARY 2025

ಚಿತ್ರದುರ್ಗ: ಫೆ.7 ಹಾಗೂ 8 ರಂದು ಚಿತ್ರದುರ್ಗ ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ 2024-25ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ಕಾರ್ಯಕ್ರಮ ಯಶಸ್ವಿಗೆ ಉಪ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಹೊರ ಜಿಲ್ಲೆಗಳಿಂದ ಆಗಮಿಸುವ ಮಕ್ಕಳು ಶಿಕ್ಷಕರ ವಸತಿ ಹಾಗೂ ಊಟದ ವ್ಯವಸ್ಥೆಗೆ ಪ್ರಾಮುಖ್ಯತೆ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Also Read: Kannada Novel: 18. ಜಂಗಮಯ್ಯರಿಗೆ ಪುತ್ರೋತ್ಸವ

ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2007 ರಲ್ಲಿ ಚಿತ್ರದುರ್ಗ ಜಿಲ್ಲೆಯ ಅತಿಥೇಯದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಜರುಗಿದ್ದವು. ಪುನಃ ಅತಿಥೇಯ ವಹಿಸುವ ಜವಬ್ದಾರಿ ಜಿಲ್ಲೆಗೆ ಲಭಿಸಿದ್ದು, ಎರಡು ದಿನಗಳ ಕಾಲ 35 ಶೈಕ್ಷಣಿಕ ಜಿಲ್ಲೆಗಳಿಂದ 1378 ವಿದ್ಯಾರ್ಥಿಗಳು ಹಾಗೂ 105ಕ್ಕೂ ಹೆಚ್ಚು ನೋಡಲ್ ಅಧಿಕಾರಿಗಳು ಮತ್ತು ಮಾರ್ಗದರ್ಶಿ ಶಿಕ್ಷಕರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮ ಸ್ಮರಣೀಯವಾಗಿಸುವಂತೆ ಶಿಕ್ಷಣ ಇಲಾಖೆ ಸಿದ್ಧತೆಗಳನ್ನು ಆರಂಭಿಸಬೇಕು. ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಅತಿಥಿಗಳ ಆಹ್ವಾನ ಮತ್ತು ಶಿಷ್ಟಾಚಾರದ ಪಾಲನೆ ಸಮಿತಿ ರಚಿಸಬೇಕು. ನಗರಕ್ಕೆ ಆಗಮಿಸುವ ವಿದ್ಯಾರ್ಥಿಗಳ ಮಾರ್ಗದರ್ಶನಕ್ಕಾಗಿ ಕೆ.ಎಸ್.ಆರ್.ಟಿ. ಬಸ್ ನಿಲ್ದಾಣದಲ್ಲಿ ಮಾಹಿತಿ ಕೇಂದ್ರ ತೆರಯಬೇಕು.

Also Read: ಕೇಂದ್ರದ ಬಜೆಟ್‍ನಿಂದ ಯಾರಿಗೆ ಅನುಕೂಲ | ಹಾಲಿ, ಮಾಜಿ ಸಂಸದರು ಏನು ಹೇಳಿದ್ರು ?

5 ಜಿಲ್ಲೆಗಳಿಗೆ ಒಬ್ಬ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಕ ಮಾಡಿ ನಗರಕ್ಕೆ ಆಗಮಿಸುವ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಬಾಲಕ ಹಾಗೂ ಬಾಲಕಿಯರಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಬೇಕು. ನೊಂದಣಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಪ್ರತಿ 2 ಜಿಲ್ಲೆಗಳಿಗೆ ಒಂದು ನೊಂದಣಿಗೆ ಕೌಂಟರ್ ತೆರೆಯಬೇಕು. ವಿದ್ಯಾರ್ಥಿಗಳನ್ನು ಕರೆ ತರಲು ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.

ಆರೋಗ್ಯ ಕೇಂದ್ರ ಸ್ಥಾಪನೆ

ಪ್ರತಿಭಾ ಕಾಂರಜಿ ನಡೆಯುವ ಸ್ಥಳದಲ್ಲಿ ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಬೇಕು. ಇಬ್ಬರು ವೈದ್ಯರು ಸೇರಿದಂತೆ ಅಗತ್ಯ ವೈದ್ಯಕೀಯ ಸಿಬ್ಬಂದಿ, ಔಷಧೋಪಚಾರಗಳು ಸ್ಥಳದಲ್ಲಿ ಲಭ್ಯವಿರಬೇಕು. ತರ್ತು ಸೇವೆಗಾಗಿ ಆಂಬ್ಯುಲೆನ್ಸ್ ಇರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಮಕ್ಕಳಿಗೆ ಕುಡಿಯುಲು ಶುದ್ಧ ಕುಡಿಯುವ ನೀರು ನೀಡಬೇಕು. ಆಹಾರವನ್ನು ಪರೀಕ್ಷೆಗೆ ಒಳಪಡಿಸಿದ ನಂತರವೇ ಮಕ್ಕಳಿಗೆ ವಿತರಿಸಬೇಕು. ಸ್ಪರ್ಧೆಗಳು ಜರುಗುವ ಸ್ಥಳ, ಸಂಪರ್ಕಿಸಬೇಕಾದ ನೋಡಲ್ ಅಧಿಕಾರಿಗಳ ವಿವರಗಳನ್ನು ಮಕ್ಕಳಿಗೆ ಗೋಚರವಾಗುವಂತೆ ಮುದ್ರಿಸಿ ಪ್ರಮುಖ ಸ್ಥಳಗಳಲ್ಲಿ ಲಗತ್ತಿಸಬೇಕು.

Also Read: ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ತಾಯಿ ನಿಧನ

ಶಿಕ್ಷಣ ಇಲಾಖೆ ಜೊತೆಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ವಸತಿ ಸಮಿತಿ ಮೇಲುಸ್ತುವಾರಿಗೆ ನೇಮಿಸಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿ ಅಥವಾ ಕೆ.ಎಸ್.ಆರ್.ಟಿ ಅಧಿಕಾರಿಗಳ ನೇತೃತ್ವದಲ್ಲಿ ಸಾರಿಗೆ ಸಮಿತಿ ರಚಿಸಬೇಕು. ಪ್ರತಿ ಸ್ಪರ್ಧೆಗಳಿಗೂ ಅನುಭವಿಗಳನ್ನು ತೀರ್ಪುಗಾರರನ್ನಾಗಿ ನೇಮಿಸಬೇಕು.

ನಿಷ್ಪಕ್ಷಪಾತವಾಗಿ ತೀರ್ಪುಗಳನ್ನು ನೀಡಬೇಕು. ಯಾವುದೇ ಗೊಂದಲಕ್ಕೆ ಆಸ್ಪದ ನೀಡಬಾರದು. ಬಂದೋಬಸ್ತ್ಗೆ ಅಗತ್ಯ ಇರುವ ಮಹಿಳಾ ಹಾಗೂ ಪುರುಷ ಪೊಲೀಸರನ್ನು ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಐತಿಹಾಸಿಕ ಸ್ಥಳಗಳಿಗೆ ಮಕ್ಕಳ ಪ್ರವಾಸ

ಬೇರೆ ಜಿಲ್ಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಜಿಲ್ಲೆಯ ಐತಿಹಾಸಿಕ ಮಹತ್ವನ್ನು ತಿಳಿಸಿಕೊಡಬೇಕು. ಇದಕ್ಕಾಗಿ ಬ್ರೋಚರ್, ಬ್ಯಾನರ್‌ಗಳನ್ನು ಸ್ಪರ್ಧೆಗಳು ನಡೆಯುವ ಸ್ಥಳದಲ್ಲಿ ಅಳವಡಿಸಬೇಕು.

ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಆಯ್ದ ವಿದ್ಯಾರ್ಥಿಗಳಿಗೆ ಜಿಲ್ಲೆಯ ಐತಿಹಾಸಿ ಸ್ಥಳಗಳಿಗೆ ಪ್ರವಾಸ ಏರ್ಪಡಿಸಬೇಕು. ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಆಗಮಿಸವ ವಿದ್ಯಾರ್ಥಿ ಹಾಗೂ ಶಿಕ್ಷಕರು ಜಿಲ್ಲೆಯಿಂದ ಸವಿ ನೆನಪುಗಳೊಂದಿಗೆ ಮರಳುವಂತೆ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

Also Read: ನಗರಸಭೆ | ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳನ್ನು ಆಯ್ಕೆ ಮಾಡಲು ಅರ್ಜಿ

ಸಭೆಯಲ್ಲಿ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಪಿಯು ಉಪನಿರ್ದೇಶಕ ಪುಟ್ಟಸ್ವಾಮಿ, ಡಿ.ಹೆಚ್.ಓ ಡಾ.ರೇಣುಪ್ರಸಾದ್ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ChitradurgaChitradurga newsChitradurga UpdatesDC T. Venkateshfountain of talentHistorical PlaceKannada Latest NewsKannada NewsState LevelStudentsಐತಿಹಾಸಿಕ ಸ್ಥಳಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಡಿಸಿ ಟಿ.ವೆಂಕಟೇಶ್ಪ್ರತಿಭಾ ಕಾರಂಜಿರಾಜ್ಯ ಮಟ್ಟವಿದ್ಯಾರ್ಥಿಗಳು
Share This Article
Facebook Email Print
Previous Article Puttamma Gulihatty shekar mother ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ತಾಯಿ ನಿಧನ
Next Article ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕಲಿಸಿ | ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣ
Leave a Comment

Leave a Reply Cancel reply

Your email address will not be published. Required fields are marked *

ಕೋಟೆ ಪೊಲೀಸ್ ಠಾಣೆ | ಬೈಕ್ ಗಳ ಬಹಿರಂಗ ಹರಾಜು 
ಮುಖ್ಯ ಸುದ್ದಿ
ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ 
ಹೊಳಲ್ಕೆರೆ
SJM ಸಂಚಾರಿ ದಂತ ಚಿಕಿತ್ಸಾ ಘಟಕದ ವಾಹನಕ್ಕೆ ಚಾಲನೆ
SJM ಸಂಚಾರಿ ದಂತ ಚಿಕಿತ್ಸಾ ಘಟಕದ ವಾಹನಕ್ಕೆ ಚಾಲನೆ 
ಮುಖ್ಯ ಸುದ್ದಿ
ತಂಬಾಕು ಕಾರ್ಯಾಚರಣೆ | 33 ಪ್ರಕರಣ ದಾಖಲು
ತಂಬಾಕು ಕಾರ್ಯಾಚರಣೆ | 33 ಪ್ರಕರಣ ದಾಖಲು 
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up