CHITRADURGA NEWS | 08 FEBRUARY 2026
ಚಿತ್ರದುರ್ಗ: ಸುಧೀರ್ಘ ಅವಧಿಯ ನಂತರ ಜಿಲ್ಲಾ ಬಿಜೆಪಿಗೆ ಪೂರ್ಣ ಪ್ರಮಾಣದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಚಿತ್ರದುರ್ಗ ಜಿಲ್ಲಾ ಘಟಕಕ್ಕೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ಕೆ.ಟಿ. ಅವರು ಫೆಬ್ರವರಿ 08, 2026 ರಂದು ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಪ್ರಮುಖ ಮುಖಂಡರಿಗೆ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದ್ದು, ಅದರ ವಿವರ ಇಲ್ಲಿದೆ:
ನಾಲ್ವರಿಗೆ ಪ್ರಧಾನ ಕಾರ್ಯದರ್ಶಿಗಳು:
ಚಿತ್ರದುರ್ಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾಗಿ ಈ ಬಾರಿ ನಾಲ್ವರನ್ನು ನೇಮಕ ಮಾಡಲಾಗಿದೆ.
ಎಸ್.ಆರ್.ಗಿರೀಶ್(ಮಾಧುರಿ),
ಜಿ.ಎಚ್.ಮೋಹನ್,
ಡಾ.ಮಂಜುನಾಥ್,
ವೆಂಕಟೇಶ್ ಯಾದವ್.
ಮಾದುರಿ ಗಿರೀಶ್ ಅವರು ಈವರೆಗೆ ಜಿಲ್ಲಾ ಖಜಾಂಚಿಯಾಗಿದ್ದರು. ವೆಂಕಟೇಶ್ ಯಾದವ್ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದರು. ಜಿ.ಎಚ್.ಮೋಹನ್ ಜಿಲ್ಲಾ ಕಾರ್ಯದರ್ಶಿ ಹಾಗೂ ಮಂಜುನಾಥ್ ಮೊಳಕಾಲ್ಮೂರು ಮಂಡಲ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಜಿಲ್ಲಾ ಉಪಾಧ್ಯಕ್ಷರು:
ಡಾ: ಸಿದ್ಧಾರ್ಥ ಗುಂಡಾರ್ಪಿ, ದ್ಯಾಮೇಗೌಡ
ಹಿರಿಯೂರು, ರವಿಕುಮಾರ್
ಹೊಸದುರ್ಗ, ಶ್ರೀಮತಿ ಶೈಲಜಾ ರೆಡ್ಡಿ
ಶ್ರೀನಿವಾಸ್ ಸೂರನಹಳ್ಳಿ ಚಳ್ಳಕೆರೆ,
ಲಿಂಗರಾಜು ಜಿ.ಎನ್. ಚಿತ್ರದುರ್ಗ,
ಮಂಜುನಾಥ್ ಉಪ್ಪಾರ್ ಹೊಸದುರ್ಗ,
ಶೈಲೇಶ್ ಕುಮಾರ್ ಹೊಳಲ್ಕೆರೆ.
ಜಿಲ್ಲಾ ಕಾರ್ಯದರ್ಶಿಗಳು:
ವಿಶ್ವನಾಥ್ ಹಿರಿಯೂರು, ಪಾಲಯ್ಯ.ಆರ್ ಕಾಲುವೇಹಳ್ಳಿ
ಬಸವರಾಜ ಅಲ್ಲಾಪುರ ಚಳ್ಳಕೆರೆ,
ಚಂದ್ರಶೇಖರ್ ವಿ.ಎಸ್ ಚಿತ್ರದುರ್ಗ,
ಜಗದೀಶ್ ಶ್ರೀರಾಂಪುರ ಹೊಸದುರ್ಗ,
ಶ್ರೀಮತಿ ರಜನಿ ಲೇಪಾಕ್ಷಿ,
ಶ್ರೀಮತಿ ರೇಖಾ ಚಿತ್ರದುರ್ಗ,
ಕಿರಣ್ ಚಿತ್ರದುರ್ಗ
ಕೋಶಾಧ್ಯಕ್ಷರು:
ಬಿಜೆಪಿ ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ ಚಿತ್ರದುರ್ಗ ಜಿಲ್ಲಾ ಘಟಕಕ್ಕೆ ಎಂಟು ಜಿಲ್ಲಾ ಉಪಾಧ್ಯಕ್ಷರು, ನಾಲ್ವರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಂಟು ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಪ್ರಾತಿನಿಧ್ಯ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಪಕ್ಷದ ಚಟುವಟಿಕೆಗಳನ್ನು ತಳಮಟ್ಟದಿಂದ ಚುರುಕುಗೊಳಿಸಲು ಈ ತಂಡಕ್ಕೆ ಸೂಚಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ಕೆ.ಟಿ. ತಿಳಿಸಿದ್ದಾರೆ.
ಪ್ರಸಾದ್ ಸಿ.ಎಸ್. (ಚಳ್ಳಕೆರೆ)
ಮಾಧ್ಯಮ ವಕ್ತಾರರು: ಶ್ರೀ ನಾಗರಾಜ್ ಬೇದ್ರೆ (ಚಿತ್ರದುರ್ಗ)
ಮಾಧ್ಯಮ ಸಹ ವಕ್ತಾರರು: ಶ್ರೀ ನವೀನ್ ಚಾಲುಕ್ಯ (ಚಿತ್ರದುರ್ಗ)



________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
