CHITRADURGA NEWS | 03 SEPTEMBER 2026
ಚಿತ್ರದುರ್ಗ: ಕೇಂದ್ರ ರಸ್ತೆ ಮತ್ತು ಮೂಲಸೌಲಭ್ಯ ನಿಧಿಯಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ದಿಗೆ ಕೇಂದ್ರ ಸರ್ಕಾರದ ಹೆದ್ದಾರಿ ಸಚಿವಾಲಯ 23 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸಯಳನಾಡು ಕರ್ನಾಟಕ ಪಬ್ಲಿಕ್ ಶಾಲೆ ರಾಜ್ಯಕ್ಕೆ ಮಾದರಿ | ಗಣ್ಯರ ಮೆಚ್ಚುಗೆ
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇನ್ನೊಂದು ತಿಂಗಳ ಒಳಗಾಗಿ ಟೆಂಡರ್ ಪ್ರಕ್ರಿಯೆ ಪೂರೈಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹೆದ್ದಾರಿ ವಿಭಾಗ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕ್ಷೇತ್ರಕ್ಕೆ ನಮ್ಮ ಶಿಫಾರಸ್ಸಿನ ಮೇರೆಗೆ ಅನುದಾನ ಬಿಡುಗಡೆ ಮಾಡಿರುವ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅನುದಾನ ಮಂಜೂರಾಗಿರುವ ರಸ್ತೆಗಳ ವಿವರ:
· ಚಿತ್ರದುರ್ಗತಾಲ್ಲೂಕಿನ ಜಾನುಕೊಂಡ-ಬುರುಜನರೊಪ್ಪ ರಸ್ತೆಯಿಂದ ಅನ್ನೇಹಾಳ್-ವಡ್ಡರಹಟ್ಟಿ ರಸ್ತೆ 10 ಕಿ.ಮೀ. ರವರೆಗೆ ಆಯ್ದಭಾಗಗಳಲ್ಲಿ ಉಪ್ಪನಾಯಕನಹಳ್ಳಿ, ಓಬೇನಹಳ್ಳಿ, ನಂದೀಪುರ, ಸೊಂಡೇಕೊಳ, ಗೊಡಬನಾಳ್, ಮುಸಂಡಿಹಾಳ್ ಮಾರ್ಗವಾಗಿ ಸಂಪರ್ಕಿಸುವ ರಸ್ತೆಯ ಅಭಿವೃದ್ದಿಗಾಗಿ 3 ಕೋಟಿ.
· ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿಯಿಂದ (ರಾಜ್ಯ ಹೆದ್ದಾರಿ-48) ಓಬೇನಹಳ್ಳಿ (ರಾಜ್ಯ ಹೆದ್ದಾರಿ-243) ಗೆ ಸಂಪರ್ಕಿಸುವ ರಸ್ತೆಯ ಕಿ.ಮೀ. 3.60 ರಿಂದ 16.00 ರವರೆಗೆ ಹಾಗೂ ಕಿ.ಮೀ. 17.00 ರಿಂದ ಕಿ.ಮೀ. 36.13 ರವರೆಗೆ ಆಯ್ದಭಾಗಗಳಲ್ಲಿ ರೆಡ್ಡಿಹಳ್ಳಿ, ಗೋಪನಹಳ್ಳಿ, ಚಿಕ್ಕನಹಳ್ಳಿ, ಯಲಗಟ್ಟ, ಕೋನಿಹಾರಹಳ್ಳಿ, ಗೋಸಿಕೆರೆ ಕಾವಲ್, ಗೋಸಿಕೆರೆ ಚಿಕ್ಕಚೆಲ್ಲೂರು ಮಾರ್ಗವಾಗಿ ಸಂಪರ್ಕಿಸುವ ರಸ್ತೆಯ ಅಭಿವೃದ್ದಿಗಾಗಿ 3 ಕೋಟಿ.
· ಮೊಳಕಾಲ್ಮೂರು ತಾಲ್ಲೂಕಿನ ನಾಯಕನಹಟ್ಟಿಯಿಂದ (ರಾಜ್ಯ ಹೆದ್ದಾರಿ-45) ತೊರೆಕೋಲಮ್ಮನಹಳ್ಳಿಗೆ (ರಾಜ್ಯ ಹೆದ್ದಾರಿ-65)ಗೆಸಂಪರ್ಕಿಸುವ ಗುಂತಕೋಲ್ಲಮ್ಮನಹಳ್ಳಿ ಮಾರ್ಗವಾಗಿ ಸಂಪರ್ಕಿಸುವ ರಸ್ತೆಯ ಅಭಿವೃದ್ದಿಗಾಗಿ 3 ಕೋಟಿ ರೂ.
· ಹಿರಿಯೂರು ತಾಲ್ಲೂಕಿನ ರಾಜ್ಯ ಹೆದ್ದಾರಿ 123 ಕಿ.ಮೀಯಿಂದ 142.64 ರವರೆಗೆ, ವಿಶ್ವನಾಥನಹಳ್ಳಿ ಹೆದ್ದಾರಿ ಸಂಪರ್ಕಿಸುವ ಪರಶುರಾಮ ದೇವರಕೋಟೆ, ಧರ್ಮಪುರ, ಸಕ್ಕರ, ದ್ವಾರನಕುಂಟೆ, ಕೋಡಿಹಳ್ಳಿ, ಇಕ್ಕನೂರು, ಪಿಟ್ಲಾಲಿ, ಆದಿವಾಲ, ಹಿರಿಯೂರು, ಲಕ್ಕವ್ವನಹಳ್ಳಿ, ದೊಡ್ಡಘಟ್ಟ, ಕುರುಬರಹಳ್ಳಿ, ಭರಮಗಿರಿ ಮಾರ್ಗಗಳಲ್ಲಿ ಆಯ್ದ ಭಾಗಗಳ ಅಭಿವೃದ್ಧಿಗಾಗಿ 3 ಕೋಟಿ ರೂ.
· ಹೊಸದುರ್ಗ ತಾಲ್ಲೂಕಿನಲ್ಲಿ ರಾಜ್ಯ ಹೆದ್ದಾರಿ 369ರಲ್ಲಿ ಶಿವಗಂಗಾದಿಂದ ಅಮ್ಮನಹಟ್ಟಿ ರಸ್ತೆಯ ಕಿ.ಮೀ. 43.56 ರಿಂದ 53.56 ರವರೆಗೆ ಮದ್ದೇರು, ತಾಳ್ಯ ಕುಮ್ಮಿನಗಟ್ಟ, ಜಾನಕಲ್-ಹೊಸದುರ್ಗ, ಹಾಗಲಕೆರೆ, ಮತ್ತೋಡು, ವಡ್ಡರಹಟ್ಟಿ, ಕಿಟ್ಟದಹಳ್ಳಿ, ಚಿಕ್ಕಬ್ಯಾಲದಕೆರೆ ಮಾರ್ಗಗಳನ್ನು ಸಂಪರ್ಕಿಸುವ ರಸ್ತೆ ಅಭಿವೃದ್ದಿಗಾಗಿ 3 ಕೋಟಿ ರೂ.
· ಹೊಳಲ್ಕೆರೆ ತಾಲ್ಲೂಕಿನಲ್ಲಿ ಕಡೂರು-ಹಿರೇನಲ್ಲೂರು-ಅಜ್ಜಂಪುರ-ಯರಗನಹಳ್ಳಿ ರಸ್ತೆಯಕಿ.ಮೀ. 31.00 ರಿಂದ 33.60, ಕಿ.ಮೀ 34.50 ರಿಂದ 35.10, ಕಿ.ಮೀ. 35.90 ರಿಂದ 37.52 ರವರೆಗೆ ಹೆದ್ದಾರಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ.
· ಸಿರಾ ತಾಲ್ಲೂಕಿನಲ್ಲಿ ಪಟ್ಟನಾಯಕನಹಳ್ಳಿ, ಬರಗೂರು, ಹಾರೋಗೆರೆ ಮುಖಾಂತರ ಆಂಧ್ರಪ್ರದೇಶ ಗಡಿ ಸಂಪರ್ಕಿಸುವ ರಸ್ತೆವರೆಗೆ 2.50 ಕೋಟಿ.
· ಪಾವಗಡ ತಾಲ್ಲೂಕಿನ ವಿರುಪಸಮುದ್ರ ಗ್ರಾಮದಲ್ಲಿ ಆಂಧ್ರಪ್ರದೇಶ ಗಡಿಯಿಂದ ಮುಖ್ಯ ರಸ್ತೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ 2.50 ಕೋಟಿ ರೂ. ಅನುದಾನ ಮಂಜೂರಾಗಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

