CHITRADURGA NEWS | 01 MAY 2025
ಹೊಸದುರ್ಗ: ಹೊಸದುರ್ಗ ಪಟ್ಟಣದ ಆರ್.ಪಿ. ರೆಸಿಡೆನ್ಶಿಯಲ್ (R.P. RESIDENTIAL PU COLLEGE) ಪಿಯು ಕಾಲೇಜು ಭರ್ಜರಿ ಫಲಿತಾಂಶ ದಾಖಲಿಸುವ ಮೂಲಕ ಹೊಸದುರ್ಗ ತಾಲೂಕಿಗೆ ಹೆಮ್ಮೆ ತಂದಿದೆ.
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ.98 ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಕಾಲೇಜು ಅಮೋಘ ಸಾಧನೆ ಮಾಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಮುರುಘಾ ಮಠದಿಂದ ‘ಸತ್ಯ ಶುದ್ಧ ಕಾಯಕʼ ಪತ್ರಿಕೆ ಲೋಕಾರ್ಪಣೆ
ಕಾಲೇಜಿನ ವಿದ್ಯಾರ್ಥಿ ಧನುಷ್ ಕೆ.ಪಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.98 ರಷ್ಟು ಅಂಕ ಗಳಿಸುವ ಮೂಲಕ ಹೊಸದುರ್ಗ ತಾಲೂಕಿಗೆ ಪ್ರಥಮ ಸ್ಥಾನ, ಚಿತ್ರದುರ್ಗ ಜಿಲ್ಲೆಗೆ ಮೂರನೇ ಸ್ಥಾನ ಪಡೆದಿದ್ದಾನೆ. ವಿದ್ಯಾರ್ಥಿನಿ ಕುಶಲದೀಪ ವೈ.ಯು ಶೇ.97 ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.
ಕಾಲೇಜಿನ ಒಟ್ಟು 127 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 45 ವಿದ್ಯಾರ್ಥಿಗಳು (DISTINCTION) ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. 76 ವಿದ್ಯಾರ್ಥಿಗಳು ಪ್ರಥಮ ದರ್ಜೆ(FIRST CLASS)ಯಲ್ಲಿ ತೇರ್ಗೆಡೆಯಾಗಿದ್ದಾರೆ.
ಈವರೆಗೆ ಕಾಲೇಜಿಗೆ 472 ರ್ಯಾಂಕ್
ಈವರೆಗೆ ಆರ್.ಪಿ. ಪಿಯು ಕಾಲೇಜಿಗೆ 472 ರ್ಯಾಂಕ್ ಲಭಿಸಿದ್ದು, ಇದರಲ್ಲಿ 64 ವಿದ್ಯಾರ್ಥಿಗಳು ಎಂಬಿಬಿಎಸ್, ಬಿಎಎಂಎಸ್ ದಾಖಲಾಗಿದ್ದಾರೆ.
ಇದನ್ನೂ ಓದಿ: SSLC ಪರೀಕ್ಷೆ ಅಕ್ರಮ | ಹತ್ತು ಜನ ಶಿಕ್ಷಕರ ಅಮಾನತು | ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಾ ?
28 ವಿದ್ಯಾರ್ಥಿಗಳು ಜೆಇಇ, 73 ವಿದ್ಯಾರ್ಥಿಗಳು ಬಿಎಸ್ಸಿ ಅಗ್ರಿಕಲ್ಚರ್, ಹಾರ್ಟಿ, ಫಾರೆಸ್ಟ್ರಿ ಕೋರ್ಸ್, 16 ವಿದ್ಯಾರ್ಥಿಗಳು ಬಿ.ಫಾರ್ಮಾ ಇನ್ನಿತರೆ ಕೋರ್ಸ್ ಸೇರಿದ್ದರೆ, 291 ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಸೇರಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
