
CHITRADURGA NEWS | 09 DECEMBER 2025
ಚಿತ್ರದುರ್ಗ: ಚಿತ್ರದುರ್ಗ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದೇ ಡಿ.10ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 09 | ಹತ್ತಿ ರೇಟ್ ಎಷ್ಟಿದೆ?
ಚಿತ್ರದುರ್ಗ ನಗರದ ವಿದ್ಯಾನಗರ ಮಾರ್ಗ ಬರುವ ವಿದ್ಯಾನಗರ, ಎಸ್.ಆರ್.ಲೇಔಟ್, ತರಳಬಾಳು ನಗರ, ವಿಶ್ವೇಶ್ವರಯ್ಯ ನಗರ, ಎಂ.ಆರ್.ನಗರ, ಜೆ.ಎಂ.ಐ.ಟಿ.ಕ್ಯಾಂಪಸ್, ಎಂ.ಕೆ.ಹಟ್ಟಿ, ಹನುಮಂತ ನಗರ, ಗಾರೆಹಟ್ಟಿ, ವಿಜಯಕ್ಷ್ಮೀ ಬಡಾವಣೆ, ಕಾವಡಿಗರಹಟ್ಟಿ ಹಾಗೂ ಮಿಲ್ ಏರಿಯಾ ಮಾರ್ಗದ ದಾವಣಗೆರೆ ರಸ್ತೆ, ಎಂ.ಕೆ.ಪ್ಯಾಲೇಸ್, ರೈಲ್ವೇ ಸ್ಟೇಷನ್, ತಾಜ್‍ಪೀರ್ ಲೇಔಟ್, ಚೋಳಗುಡ್ಡ, ಅಗಸನಕಲ್ಲು, ನೆಹರು ನಗರ ಸಿದ್ದಾರ್ಥ ಬಡಾವಣೆ, ಆಶ್ರಯ ಬಡಾವಣೆ, ಇಟಗಿ ಚನ್ನಬಸಪ್ಪ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ 11 ಕೆ.ವಿ ವಿದ್ಯುತ್ ಮಾರ್ಗ ಸ್ಥಳಾಂತರಿಸುವ ಕಾಮಗಾರಿ ನಿರ್ವಹಿಸುವುದರಿಂದ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
