Connect with us

    Jog Falls: ಪ್ರವಾಸಿಗರ ಗಮನಕ್ಕೆ; ದುಬಾರಿಯಾಗಿದೆ ಜೋಗ ಜಲಪಾತ ವೀಕ್ಷಣೆ | ಗಂಟೆ ಲೆಕ್ಕದಲ್ಲಿ ಶುಲ್ಕ ನಿಗದಿ

    Jog Falls

    ಮುಖ್ಯ ಸುದ್ದಿ

    Jog Falls: ಪ್ರವಾಸಿಗರ ಗಮನಕ್ಕೆ; ದುಬಾರಿಯಾಗಿದೆ ಜೋಗ ಜಲಪಾತ ವೀಕ್ಷಣೆ | ಗಂಟೆ ಲೆಕ್ಕದಲ್ಲಿ ಶುಲ್ಕ ನಿಗದಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 23 AUGUST 2024
    ಚಿತ್ರದುರ್ಗ: ಪ್ರವಾಸಿಗರ ನೆಚ್ಚಿನ ತಾಣವಾದ ಮಲೆನಾಡಿನ ಜೋಗದ ಸೌಂದರ್ಯ ಆಸ್ವಾದನೆ ಇದೀಗ ಕೊಂಚ ದುಬಾರಿಯಾಗಿದೆ. ಮಳೆಯಿಂದಾಗಿ ಜೋಗದ ಜಲಪಾತ ಮೈದುಂಬಿದ್ದು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

    ಕ್ಲಿಕ್ ಮಾಡಿ ಓದಿ: ಡೆಂಗ್ಯೂ ಜ್ವರಕ್ಕೆ 7 ವರ್ಷದ ಬಾಲಕ ಬಲಿ

    ಪ್ರಕೃತಿದತ್ತ ಸೌಂದರ್ಯದ ಕಣಜ ವಿಶ್ವ ವಿಖ್ಯಾತ ಜೋಗ ಜಲಪಾತದ ವೀಕ್ಷಣೆಗೆ ಜೋಗ ನಿರ್ವಹಣಾ ಪ್ರಾಧಿಕಾರ ನಿಗದಿಪಡಿಸಿದ್ದ ಪ್ರವೇಶ ಶುಲ್ಕ ಇದೀಗ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರದಂತೆ ಒಂದು ಬಸ್‌ಗೆ ₹ 200 (ಹಳೆ ದರ ₹ 150), ಮಿನಿ ಬಸ್‌ ₹ 150 (ಹಳೆ ದರ ₹100), ಕಾರು, ಜೀಪ್‌ಗೆ ₹ 80 (ಹಳೆ ದರ ₹50), ಆಟೊಗೆ ₹ 40 (ಹಳೆ ದರ ₹30), ದ್ವಿಚಕ್ರ ವಾಹನ ₹ 30 (ಹಳೆ ದರ ₹20), ವಿದೇಶಿ ಪ್ರವಾಸಿಗರಿಗೆ ₹ 100 (ಹಳೆ ದರ ₹50), ಪ್ರವಾಸಿಗರಿಗೆ ₹ 20 (ಹಳೆ ದರ 10), ಕಾಲೇಜು ವಿದ್ಯಾರ್ಥಿಗಳಿಗೆ ₹ 20, ಶಾಲಾ ವಿದ್ಯಾರ್ಥಿಗಳಿಗೆ ₹ 10 ನಿಗದಿಪಡಿಸಲಾಗಿದೆ.

    ಕ್ಲಿಕ್ ಮಾಡಿ ಓದಿ: ಎಚ್‌.ಡಿ.ಪುರದ ಲಕ್ಷ್ಮಿ ನರಸಿಂಹಸ್ವಾಮಿಗೆ ನೂತನ ರಥ | ಎಸ್‌ಎಲ್‌ಎನ್‌ ಟ್ರಸ್ಟ್ ಮನವಿ

    Jog Falls board

    ಪರಿಷ್ಕೃತ ದರದ ಫಲಕ

    ಇನ್ನೂ ಜಲಪಾತ ಪ್ರದೇಶದಲ್ಲಿ ಕ್ಯಾಮೆರಾ ಬಳಸಲು ₹ 100, ಡ್ರೋಣ್‌ ಕ್ಯಾಮೆರಾಗೆ ₹ 500 ನಿಗದಿ ಮಾಡಲಾಗಿದೆ. ವಾಹನ ಮತ್ತು ಪ್ರವಾಸಿಗರ ಶುಲ್ಕ ಪ್ರತ್ಯೇಕವಾಗಿರುತ್ತದೆ. ಟಿಕೆಟ್‌ ಪಡೆದ ನಂತರದ 2 ಗಂಟೆವರೆಗೆ ಮಾತ್ರ ವಾಹನ ನಿಲುಗಡೆ ಮಾಡಬೇಕು. ಇನ್ನೂ ಹೆಚ್ಚಿನ ಹೊತ್ತು ನಿಲುಗಡೆ ಮಾಡಿದ್ದಲ್ಲಿ ಅದಕ್ಕೆ ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ. ಚಲನಚಿತ್ರದ ಚಿತ್ರೀಕರಣ, ಡ್ರೋಣ್ ಬಳಕೆ, ಧಾರಾವಾಹಿ ಚಿತ್ರೀಕರಣ, ಪ್ರೀ ವೆಡ್ಡಿಂಗ್‌ ಶೂಟ್‌, ರಿಯಾಲಿಟಿ ಶೋ ಕಾರ್ಯಕ್ರಮಗಳಿಗೆ ಮುಂಚಿತವಾಗಿಯೇ ಜೋಗ ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆಯಬೇಕು ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯದರ್ಶಿ ಧರ್ಮಪ್ಪ ಸ್ಪಷ್ಟಪಡಿಸಿದ್ದಾರೆ.

    ಕ್ಲಿಕ್ ಮಾಡಿ ಓದಿ: ವಿವಿ ಸಾಗರ ಜಲಾಶಯದ ಒಳಹರಿವು ಹೆಚ್ಚಳ

    ಅಂಗವಿಕಲರು, ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸೈನಿಕರು, ಪತ್ರಿಕಾ ವರದಿಗಾರರು ಮತ್ತು ಟಿ.ವಿ ಮಾಧ್ಯಮದವರಿಗೆ ಮಾತ್ರ ಪ್ರವೇಶ ಉಚಿತವಾಗಿರುತ್ತದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳ ಪ್ರವಾಸ ಕಾರ್ಯಕ್ರಮವಾಗಿದ್ದಲ್ಲಿ ಮುಂಚಿತವಾಗಿ ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆದಿದ್ದರೆ ಶುಲ್ಕದಲ್ಲಿ ಶೇ 50ರಷ್ಟು ವಿನಾಯಿತಿ ನೀಡಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top