ಲೋಕಸಮರ 2024
ಬಿಜೆಪಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಗೂಳಿಹಟ್ಟಿ ಶೇಖರ್

CHITRADURGA NEWS | 13 APRIL 2024
ಚಿತ್ರದುರ್ಗ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೇಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಬಿಜೆಪಿಗೆ ಸೆಡ್ಡು ಹೊಡೆದಿದ್ದ ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.
ದೇಶದಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು. ನಾನು ಮೋದಿ ಸಾಹೇಬರ ಅಭಿಮಾನಿ. ಈ ಕಾರಣಕ್ಕೆ ನಮ್ಮೆಲ್ಲಾ ಕಾರ್ಯಕರ್ತರು ಗೋವಿಂದ ಕಾರಜೋಳ ಅವರಿಗೆ ಮತ ಹಾಕಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಭರವಸೆ ಮೂಡಿಸಿದ ವರ್ಷದ ಮೊದಲ ಮಳೆ | ನಿರಾಳರಾದ ಕೃಷಿಕರು
ಏಪ್ರಿಲ್ 16 ರಂದು ನಮ್ಮ ಕಾರ್ಯಕರ್ತರು, ಬೆಂಬಲಿಗರ ಸಭೆ ಕರೆದು ಯಾರಿಗೆ ಬೆಂಬಲ ಸೂಚಿಸಬೇಕು ಎನ್ನುವುದನ್ನು ಹೇಳುವುದಾಗಿ ತಿಳಿಸಿದ್ದೆ. ಆದರೆ, ಅಂದು ಚುನಾವಣಾಧಿಕಾರಿಗಳು ಅನುಮತಿ ನೀಡಿಲ್ಲ. ಅನುಮತಿ ಸಿಕ್ಕರೆ ಸಭೆ ನಡೆಸೋಣ. ಇಲ್ಲದಿದ್ದರೆ ನಾನೇ ಹಳ್ಳಿಗಳಿಗೆ ಬರುತ್ತೇನೆ ಎಂದು ಹೇಳಿದ್ದಾರೆ.
ನಮ್ಮ ತಾಲೂಕಿಗೆ ಅಪಾರ ಪ್ರಮಾಣದಲ್ಲಿ ಅನುದಾನ ನೀಡಿರುವ ಹಿರಿಯರಾದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಗೋವಿಂದ ಕಾರಜೋಳ ಅವರಿಗೆ ಮತ ಹಾಕಲು ಮತ್ತು ಹಾಕಿಸಲು ಬೆಂಬಲಿಗರು, ಕಾರ್ಯಕರ್ತರಿಗೆ ಮತ ಹಾಕಲು ಮನವಿ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಗೆಲ್ಲಬೇಕಿದೆ | ಸಚಿವ ಕೆ. ಹೆಚ್. ಮುನಿಯಪ್ಪ
ಗೋವಿಂದ ಕಾರಜೋಳ ಅವರೊಟ್ಟಿಗೆ ನಾನು ಮಂತ್ರಿಯಾಗಿದ್ದೆ. ಎರಡು ಸಲ ಹಾಲುರಾಮೇಶ್ವರ ಉತ್ಸವಕ್ಕೆ ಕರೆದ ತಕ್ಷಣ ಬಂದಿದ್ದರು. ಆಗ ಮಾಡಿದ ಮನವಿಗೆ ಸ್ಪಂದಿಸಿ ಒಂದೇ ಸಲ 30 ಕೋಟಿ ವಿಶೇಷ ಅನುದಾನ ಕೊಟ್ಟಿದ್ದರು.
ಮೂರು ಹೋಬಳಿಗಳಿಗೆ ಸಂಪರ್ಕ ಕಲ್ಪಿಸುವಂತೆ ಪಂಡಿತಾರಾಧ್ಯ ಮಹಾಸ್ವಾಮಿಗಳ ಹೆಸರಿನಲ್ಲಿ ವಿವಿ ಸಾಗರ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರು ಮೇಲ್ಸೇತುವೆ ಕಾಮಗಾರಿಗೆ 142 ಕೋಟಿ ರೂ. ಅನುದಾನ ಬರಲು ಗೋವಿಂದ ಕಾರಜೋಳ ಅವರು ಪ್ರಮುಖ ಕಾರಣರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೃದಯಾಘಾತದಿಂದ ಮೃತಪಟ್ಟ ಚೇತನ್ PUC ಪರೀಕ್ಷೆಯಲ್ಲಿ FIRSTCLASS
ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆಗಳಿಂದಲೂ ಸಾಕಷ್ಟು ಅನುದಾನ ಕೊಟ್ಟಿದ್ದರು. ತಾಲೂಕಿನಲ್ಲಿ ನಿರ್ಮಾಣವಾಗಿರುವ ಹಲವು ಚೆಕ್‍ಡ್ಯಾಂಗಳು ಅವರ ಅನುದಾನದಲ್ಲಿ ಆಗಿವೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಈ ಲೋಕಸಭಾ ಚುನಾವಣೆಯಲ್ಲಿ ಗೋವಿಂದ ಕಾರಜೋಳ ಅವರಿಗೆ ಮತ ಹಾಕಲು ನನ್ನೆಲ್ಲಾ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ ಎಂದು ಗೂಳಿಹಟ್ಟಿ ಶೇಖರ್ ಆಡಿಯೋ ಸಂಭಾಷಣೆ ಮೂಲಕ ಬೆಂಬಲಿಗರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಹೊಳಲ್ಕೆರೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ | ಕಾಂಗ್ರೆಸ್ ವಿರುದ್ಧ ಹರಿಹಾಯ್ದ ವಿಜಯೇಂದ್ರ
