ಮುಖ್ಯ ಸುದ್ದಿ
ELECTION; ವೀರಶೈವ ಮಹಾಸಭಾ ಜಿಲ್ಲಾ ಘಟಕದ ಚುನಾವಣೆ | 9 ಜನರಿಂದ ನಾಮಪತ್ರ ಸಲ್ಲಿಕೆ | ನಾಮಪತ್ರ ಹಿಂಪಡೆಯಲು ಇಂದು ಕೊನೆ ದಿನ | ಜು.21 ರಂದು ಮತದಾನ
CHITRADURGA NEWS | 8 JULY 2024
ಚಿತ್ರದುರ್ಗ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ (ELECTION) ಘೋಷಣೆಯಾಗಿದ್ದು, ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಯಸಿ 9 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಜುಲೈ 21 ರಂದು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಜೂನ್ 27 ರಿಂದ ನಾಮಪತ್ರ ಸಲ್ಲಿಕೆಯ ಭರಾಟೆ ನಡೆಯುತ್ತಿದೆ.
ಇದನ್ನೂ ಓದಿ: ಝೀ ಕನ್ನಡದ ಮಹಾನಟಿ ಶೋ | ಚಿತ್ರದುರ್ಗದ ಗಗನ ಭಾರಿ ಫೈನಲ್‍ಗೆ ಆಯ್ಕೆ
ಈಗಾಗಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿದಿದ್ದು, ಇಂದು ಜು.8 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ.
ಕಣದಲ್ಲಿರುವ ಅಭ್ಯರ್ಥಿಗಳು:
- ಮಹಡಿ ಶಿವಮೂರ್ತಿ(ಹಾಲಿ ಅಧ್ಯಕ್ಷ)
- ಜಿ.ಎನ್.ಮಹೇಶ್ (ಹಾಲಿಪ್ರಧಾನ ಕಾರ್ಯದರ್ಶಿಯಾಗಿದ್ದ)
- ಶ್ಯಾಮಲಾ ಶಿವಪ್ರಕಾಶ್
- ಮೋಕ್ಷಾ ರುದ್ರಸ್ವಾಮಿ
- ಪಿ.ವೀರೇಂದ್ರಕುಮಾರ್
- ಎಂ.ಎನ್.ವಿಜಯಕುಮಾರ್
- ಕೆ.ಎಸ್.ವಿಜಯ
- ಎ.ವಿ.ಮಂಜುನಾಥ್
- ಕೆ.ಎಸ್.ನಾಗರಾಜ್
ಇದನ್ನೂ ಓದಿ: ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ದೀಕ್ಷಾ ರಜತ ಮಹೋತ್ಸವ | ಭೋವಿ ಗುರುಪೀಠದಲ್ಲಿ ಪೂರ್ವಭಾವಿ ಸಭೆ
9 ನಿರ್ದೇಶಕರ ಅವಿರೋಧ ಆಯ್ಕೆ:
ಒಟ್ಟು 30 ನಿರ್ದೇಶಕರ ಸ್ಥಾನಗಳಿದ್ದು, ಇದರಲ್ಲಿ 20 ಪುರುಷರಿಗೆ 10 ಮಹಿಳೆಯರಿಗೆ ಮೀಸಲಾಗಿವೆ.
ಮಹಿಳೆಯರಿಗೆ ಮೀಸಲಾಗಿರುವ 10 ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆಯಾಗಿದೆ. 1 ಅರ್ಜಿ ತಿರಸ್ಕøತಗೊಂಡಿದೆ.
ಪುರುಷರಿಗೆ ಮೀಸಲಾಗಿರುವ 20 ನಿರ್ದೇಶಕರ ಸ್ಥಾನಗಳಿಗೆ 32 ನಾಮಪತ್ರ ಸಲ್ಲಿಕೆಯಾಗಿದ್ದು, ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಅನಾರೋಗ್ಯದಿಂದ ನರಳುತ್ತಿದೆ ಆಸ್ಪತ್ರೆ ಮುಂದಿರುವ ಪಾರ್ಕ್ | ಡೆಂಘಿ ಸೊಳ್ಳೆ ಇಲ್ಲಿಲ್ಲ ಅಂತಿರಾ..!
ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣಾಧಿಕಾರಿಗಳಾಗಿ ಟಿ.ಪಿ.ಜ್ಞಾನಮೂರ್ತಿ ಹಾಗೂ ಪಿ.ದಯಾನಂದ ಪಾಟೀಲ್ ನೇಮಕವಾಗಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, 9 ನಾಮಪತ್ರಗಳು ಸಲ್ಲಿಕೆಯಾಗಿವೆ. ಇಂದು ಮಧ್ಯಾಹ್ನ 3 ಗಂಟೆವರೆಗೆ ವಾಪಾಸು ಪಡೆಯಲು ಅವಕಾಶವಿದೆ. ಜಿಲ್ಲೆಯಲ್ಲಿ ಈವರೆಗೆ ಕೇಂದ್ರದಿಂದ ನಮಗೆ ಕಳಿಸಿರುವ ಮಾಹಿತಿ ಅನುಸಾರ 2480 ಮತದಾರರಿದ್ದಾರೆ.
| ಟಿ.ಪಿ.ಜ್ಞಾನಮೂರ್ತಿ, ಚುನಾವಣಾಧಿಕಾರಿ.