Connect with us

DENGUE; ಅನಾರೋಗ್ಯದಿಂದ ನರಳುತ್ತಿದೆ ಆಸ್ಪತ್ರೆ ಮುಂದಿರುವ ಪಾರ್ಕ್ | ಡೆಂಘಿ ಸೊಳ್ಳೆ ಇಲ್ಲಿಲ್ಲ ಅಂತಿರಾ..!

ಅನಾರೋಗ್ಯದಿಂದ ನರಳುತ್ತಿದೆ ಆಸ್ಪತ್ರೆ ಮುಂದಿರುವ ಪಾರ್ಕ್

ಮುಖ್ಯ ಸುದ್ದಿ

DENGUE; ಅನಾರೋಗ್ಯದಿಂದ ನರಳುತ್ತಿದೆ ಆಸ್ಪತ್ರೆ ಮುಂದಿರುವ ಪಾರ್ಕ್ | ಡೆಂಘಿ ಸೊಳ್ಳೆ ಇಲ್ಲಿಲ್ಲ ಅಂತಿರಾ..!

CHITRADURGA NEWS | 08 JULY 2024

ಚಿತ್ರದುರ್ಗ: ನಗರದ ಜಿಲ್ಲಾ ಆಸ್ಪತ್ರೆ ಮುಂದಿನ ಪಾರ್ಕ್ ನಲ್ಲಿ ಸ್ವಚ್ಛತೆ ಇಲ್ಲದೆ ಅನಾರೋಗ್ಯದಿಂದ ನರಳುತ್ತಿದು, ಡೆಂಘಿ ಹರಡಲು ಅನುಕೂಲ ಮಾಡಿಕೊಟ್ಟಂತಾಗಿದೆ.

ಇದನ್ನೂ ಓದಿ: ZEE KANNADA; ಝೀ ಕನ್ನಡದ ಮಹಾನಟಿ ಶೋ | ಚಿತ್ರದುರ್ಗದ ಗಗನ ಭಾರಿ ಫೈನಲ್‍ಗೆ ಆಯ್ಕೆ

ಪಾರ್ಕ್ನಲ್ಲಿ ಕೊಚ್ಚೆ ತುಂಬಿದ್ದು, ಅಲ್ಲಿರುವ ಅಂಗಡಿ ಮುಟ್ಟುಗಳು, ಹೋಟೆಲ್‌ಗಳು ಪಾತ್ರೆ ತೊಳೆದ ನೀರು, ಮಳೆ ನೀರು, ಕೊಚ್ಚೆ ನೀರು, ಎಲ್ಲವೂ ಸಹ ಪಾರ್ಕಿನಲ್ಲಿ ಶೇಖರಣೆಯಾಗಿ ನಿಂತು ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳಿಗೆ ವಾಸ ಸ್ಥಳವಾಗಿದೆ.

ನಗರಸಭೆಯವರು ಮತ್ತು ಸಾರ್ವಜನಿಕರು ಇಬ್ಬರು ಸಹ ಇಲ್ಲಿಯ ಸ್ವಚ್ಛತೆ ಬಗ್ಗೆ ಗಮನ ಹರಿಸದಿರುವುದರಿಂದ, ಮುಂದೊಂದಿನ ಆಸ್ಪತ್ರೆಯ ಮುಂದೆ ರೋಗ ಹರಡುವ ಉಗಮಸ್ಥಾನವಾಗಲಿದೆೆ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಎಸ್.ಸ್ವಾಮಿ ಅವರು ಆರೋಪಿಸಿದ್ದಾರೆ.

ಎಲ್ಲಾ ಕಡೆ ಡೆಂಗು ಹರಡುತ್ತಿದೆ ಎಂದು ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಕೊಡುತ್ತಿರುವ ನಗರಸಭೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಈ ಪಾರ್ಕಿನ ಸುತ್ತ ಒಮ್ಮೆ ಕಣ್ಣಾಡಿಸಿದರೆ, ಎಷ್ಟೊಂದು ಗಲೀಜು ತುಂಬಿಕೊಂಡಿದೆ, ದುರ್ವಾಸನೆ ಬರುತಿದ್ದು, ಜನರಿಗೂ ಪ್ರಾಣ ಗಳಿಗೂ ವ್ಯತ್ಯಾಸವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ಹೆಜ್ಜೆ ಇಟ್ಟು ಪಾರ್ಕಿನೊಳಗೆ ಹೋಗಿ ಕುಳಿತುಕೊಳ್ಳೋಣ ಎಂದು ಯಾರಾದರೂ ಹೊರಗಿನವರು ಬಂದರೆ, ಅವರು ಗಾಬರಿಯಾಗುವುದಂತೂ ನಿಶ್ಚಿತ. ಪಾರ್ಕಿನ ಒಳಗಡೆ ಹೆಜ್ಜೆ ಇಡಲಾರದಷ್ಟು ಗಲೀಜು ನೀರು ತುಂಬಿಕೊಂಡಿದೆ, ಕೊಳಚೆ ಪ್ರದೇಶವಾಗಿದೆ, ಕೊಳಚೆ ತುಂಬಿಕೊಂಡಿರುವ ನೀರಿನ ಸುತ್ತಮುತ್ತ ಹೋಟೆಲ್‌ಗಳು, ಅಂಗಡಿಗಳು ತಲೆ ಎತ್ತಿವೆ.

ಇದನ್ನೂ ಓದಿ: SATISH JARKIHOLI; ಸಚಿವ ಸತೀಶ್‍ ಜಾರಕಿಹೊಳಿ ಭೇಟಿಯಾದ ST ಸೇಲ್ ಅಧ್ಯಕ್ಷ ಬಿ.ಮಂಜುನಾಥ್

ಅಂಗಡಿ ಮಾಲೀಕರು ನಗರಸಭೆಗೆ ಹೆದರಿ, ಎಲ್ಲಾದರೂ ಇದರ ಬಗ್ಗೆ ದೂರು ನೀಡಿದರೆ, ನಮ್ಮ ಅಂಗಡಿಗಳನ್ನು ಎತ್ತಂಗಡಿ ಮಾಡುತ್ತಾರೆ ಎಂದು ಭಯ ಬಿತರಾಗಿದ್ದಾರೆ, ಕೆಲವರು ಸ್ವಲ್ಪ ಧೈರ್ಯ ಮಾಡಿ, ನಗರಸಭೆ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ, ಇಲ್ಲಿ ಕೊಳಚೆ ನಿರ್ಮಾಣವಾಗಿದೆ, ದಯವಿಟ್ಟು ಸ್ವಚ್ಛಗೊಳಿಸಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಆರೋಗ್ಯ ಇಲಾಖೆ ಆಸ್ಪತ್ರೆ ಎದುರುಗಡೆಯೇ ಇರುವ ಜಾಗದಲ್ಲಿ ಸ್ವಚ್ಛತೆ ಇಲ್ಲ ಅಂದಮೇಲೆ, ಇನ್ನು ದೂರದಲ್ಲಿರುವ ಗಲಿಜಿನ ಬಗ್ಗೆ ಚಿಂತಿಸುವರು ಯಾರು?

ನಗರದ ಸ್ವಚ್ಛತೆ ಬಗ್ಗೆ, ಸ್ವಚ್ಛತಾ ಅಧಿಕಾರಿಗಳು, ಆರೋಗ್ಯದ ಅಧಿಕಾರಿಗಳು, ಇವುಗಳನ್ನು ಸ್ವಲ್ಪ ಗಮನವಿಟ್ಟು ನೋಡಿ, ಆ ಕೊಳಚೆಗೆ ಒಂದಿಷ್ಟು ಮಣ್ಣು ಹಾಕಿಸಿ, ಚರಂಡಿಗೆ ನೀರಿನ ಸಂಪರ್ಕ ಕಲ್ಪಿಸಿ, ಅಲ್ಲಿ ಯಾವುದೇ ನೀರು ನಿಲ್ಲದಂತೆ ಮಾಡಿದರೆ, ಪಾರ್ಕ್ ಸುಂದರವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: SILVER JUBILEE; ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ದೀಕ್ಷಾ ರಜತ ಮಹೋತ್ಸವ | ಭೋವಿ ಗುರುಪೀಠದಲ್ಲಿ ಪೂರ್ವಭಾವಿ ಸಭೆ

ಇಲ್ಲದಿದ್ದರೆ ಅಲ್ಲಿ ಡೆಂಗು ಉದ್ಭವವಾಗಲು ನಗರ ಸಭೆಯೇ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಹಾಗಾಗಿ ತಕ್ಷಣ ನಗರ ಸಭೆಯವರು ಮತ್ತು ಸಾರ್ವಜನಿಕರು ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು.

ನಗರ ಸಭೆಯವರು ಸಾರ್ವಜನಿಕರ ಸಹಕಾರ ಪಡೆದು, ಅಲ್ಲಿ ಯಾರು ಶೌಚಾಲಯ, ಮೂತ್ರಾಲಯ, ಕಸ ಎಸೆವುದನಂತೆ ಹೇಳಬೇಕು. ಆಗ ಮಾತ್ರ ಜಿಲ್ಲಾ ಆಸ್ಪತ್ರೆಯ ಮುಂದಿನ ಪಾರ್ಕ್ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಅನುಕೂಲವಾಗುತ್ತದೆ ಎಂದು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಎಸ್.ಸ್ವಾಮಿ ಮನವಿ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version