ಮುಖ್ಯ ಸುದ್ದಿ
ZEE KANNADA; ಝೀ ಕನ್ನಡದ ಮಹಾನಟಿ ಶೋ | ಚಿತ್ರದುರ್ಗದ ಗಗನ ಭಾರಿ ಫೈನಲ್‍ಗೆ ಆಯ್ಕೆ
CHITRADURGA NEWS | 07 JULY 2024
ಚಿತ್ರದುರ್ಗ: ಝೀ ಕನ್ನಡ (ZEE KANNADA) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಹಾನಟಿ’ ರಿಯಾಲಿಟಿ ಶೋ ನಾಡಿನ ಮನೆ ಮಾತಾಗಿದ್ದು, ಈ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಚಿತ್ರದುರ್ಗ ಜಿಲ್ಲೆಯ ಪ್ರತಿಭೆ ಗಗನ ಭಾರಿ ಸಾಕಷ್ಟು ಜನಮನ್ನಣೆ ಪಡೆದಿದ್ದಾರೆ.
ಇಂದು ಭಾನುವಾರ ರಾತ್ರಿ ಪ್ರಸಾರವಾದ ಸೆಮಿಫೈನಲ್ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆ ಬಿ.ಜಿ.ಕೆರೆ ಗ್ರಾಮದ ಗಗನ ಭಾರಿ ಫೈನಲಿಸ್ಟ್ ಆಗಿ ಆಯ್ಕೆಯಾಗುವ ಮೂಲಕ ಕೋಟೆನಾಡಿನ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ.
ಇದನ್ನೂ ಓದಿ: ಬದುಕು ಬೋರಾದಾಗ ರಿಫ್ರೆಶ್ ಆಗಲು ಜೋಗಿಮಟ್ಟಿಗೆ ಬನ್ನಿ | ಇಲ್ಲಿನ ಹಸಿರು, ಗಾಳಿ, ನೋಟ ನಿಮ್ಮನ್ನು ರೀಚಾರ್ಜ್ ಮಾಡುತ್ತೆ
ಆನ್‍ಸ್ಪಾಟ್ ಡೈಲಾಗ್, ನೃತ್ಯ, ಹಾಡು, ಮಾತು, ಸ್ಕ್ರಿಪ್ಟ್ ಇಲ್ಲದೆ ಗಗನ ಆಡುವ ಮಾತುಗಳು ಎಲ್ಲರನ್ನೂ ಮಂತ್ರಮುಗ್ದರನ್ನಾಗಿಸಿವೆ.
ಈ ವಾರ ನಡೆದ ಸೆಮಿ ಫೈನಲ್ ಶೋನಲ್ಲಿ, ಐದು ಜನ ನಟಿಯರನ್ನು ಫೈನಲ್‍ಗೆ ಆಯ್ಕೆ ಮಾಡಬೇಕಿತ್ತು. ಮೊದಲ ಹಂತದಲ್ಲಿ ನಾಲ್ವರನ್ನು ಮೊದಲೇ ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ ಉಳಿದಿದ್ದ ಐದು ಜನರಲ್ಲಿ ಗಗನ ಕೂಡಾ ಒಬ್ಬರಾಗಿದ್ದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ ಅಚ್ಚರಿ ಬಾಂಡ್ರಾವಿ ಕಮರದ ಕಾಡು | ಕಾಯಕಕ್ಕೆ ಸಂದ ಅತೀ ದೊಡ್ಡ ಗೌರವ ಕಾಡಿಗೆ ವನಪಾಲಕನ ಹೆಸರೇ ನಾಮಕರಣ
ನಿರ್ದೇಶಕ ತರುಣ್ ಸುಧೀರ್ 5ನೇ ಹೆಸರಾಗಿ ಗಗನ ಭಾರಿ ಅವರ ಹೆಸರನ್ನು ಹೇಳುತ್ತಿದ್ದಂತೆ ಜಿಲ್ಲೆಯ ಜನತೆ ಸಂತಸ ವ್ಯಕ್ತಪಡಿಸಿದರು.
ಮಹಾನಟಿ ವೇದಿಕೆಯಲ್ಲಿ ಗಗನ ಮಿಂಚಿಂಗ್:
ಏಪ್ರಿಲ್ ತಿಂಗಳಲ್ಲಿ ಆರಂಭವಾದ ಝೀ ಕನ್ನಡದ ಮಹಾನಟಿ ರಿಯಾಲಿಟಿ ಶೋನಲ್ಲಿ ನಟಿಯರಿಗೆ ಅನೇಕ ರೀತಿಯ ಟಾಸ್ಕ್, ಪಾತ್ರಗಳನ್ನು ನೀಡಿ ಅಭಿನಯ ಮಾಡಿಸಲಾಗುತ್ತಿದೆ.
ಇದನ್ನೂ ಓದಿ: ಬಯಲು ಸೀಮೆಯ ಊಟಿ | ಸ್ವರ್ಗವ ನಾಚಿಸುವ ಜೋಗಿಮಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು..!
ಗಗನ ಭಾರಿ ಅವರ ಅಭಿನಯಕ್ಕೆ ಕಾರ್ಯಕ್ರಮದ ತೀರ್ಪುಗಾರರಾಗಿರುವ ನಿರ್ದೇಶಕ ತರುಣ್ ಸುಧೀರ್, ಹಿರಿಯ ನಟಿ ಪ್ರೇಮಾ ಹಾಗೂ ನಿಶ್ವಿಕಾ ಅವರ ಮೆಚ್ಚುಗೆ ಪಡಿಸಿದ್ದರು.
ಒಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶಕ ತರುಣ್ ಸುಧೀರ್ ತಮ್ಮ ಮುಂದಿನ ಚಿತ್ರಕ್ಕೆ ಗಗನ ಭಾರಿ ಅವರಿಗೆ ಅವಕಾಶ ಕೊಡುವುದಾಗಿ ಭರವಸೆ ನೀಡಿ ಮಹಾನಟಿ ವೇದಿಕೆಯಲ್ಲೇ 500 ರೂ. ಟೋಕನ್ ಅಡ್ವಾನ್ಸ್ ಕೂಡಾ ನೀಡಿದ್ದರು.
ಇದನ್ನೂ ಓದಿ: ಐತಿಹಾಸಿಕ ಕೋಟೆಗೆ ಧ್ವನಿ ಬೆಳಕಿನ ವೈಭವ | ಜಿಲ್ಲಾಧಿಕಾರಿ ಟಿ.ವೆಂಕಟೇಶ್
ಸ್ವರ್ಗ ನಮ್ಮ ದುರ್ಗ ಎನ್ನುತ್ತಾ, ಮಹಾನಟಿ ಕಾರ್ಯಕ್ರಮದಲ್ಲಿ ಆಕರ್ಷಣೆಯ ಕೇಂದ್ರಬಿಂಧುವಾಗಿರುವ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ಗಗನ ಭಾರಿ ಫೈನಲ್ ಗೆದ್ದು ದುರ್ಗಕ್ಕೆ ಕಾಲಿಡಲಿ ಎಂದು ಗಗನ ಅಭಿಮಾನಿಗಳು ಆಶಿಸುತ್ತಿದ್ದಾರೆ.
ಮಹಾನಟಿ ಶೋನಲ್ಲಿ ಗಗನ ಭಾರಿ ಜೊತೆಗೆ ಫೈನಲಿಸ್ಟ್‍ಗಳಾಗಿ ಪ್ರಿಯಾಂಕ, ಶ್ವೇತಾ ಭಟ್, ಧನ್ಯಶ್ರೀ ಹಾಗೂ ಅನುರಾಧ ಭಟ್ ಕೂಡಾ ಆಯ್ಕೆಯಾಗಿದ್ದಾರೆ. ಮುಂದಿನ ಭಾನುವಾರ ಫೈನಲ್ ಶೋ ನಡೆಯಲಿದೆ.