CHITRADURGA NEWS | 1 JULY 2024
ಏಕತಾನತೆ ಕಾಡಿದಾಗ, ಸ್ವಚ್ಛಂದವಾದ ಗಾಳಿ ಬೇಕು ಅನ್ನಿಸಿದಾಗ ಸೀದಾ ಚಿತ್ರದುರ್ಗಕ್ಕೆ ಬಂದು ಜೋಗಿಮಟ್ಟಿ ಬೆಟ್ಟವೇರಿ ಭೂಮಿ ಮತ್ತು ಆಕಾಶದ ನಡುವೆ ಕುಳಿತುಬಿಡಿ.
ಇಡೀ ಜೀವನ ಒಮ್ಮೆ ರಿಫ್ರೆಶ್ ಅನ್ನಿಸುತ್ತೆ. ಕಳೆಗುಂದಿದ್ದ ಉತ್ಸಾಹ ಮತ್ತೆ ಉಕ್ಕಿ ಬರುತ್ತೆ. ಮತ್ತೊಂದಿಷ್ಟು ದಿನಕ್ಕೆ ನೀವು ರೀಚಾರ್ಜ್ ಆಗಿಬಿಡುತ್ತಿರಿ. ಇಂಥದ್ದೊಂದು ಅದ್ಬುತ ಈ ಪ್ರಕೃತಿಯಲ್ಲಿದೆ.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ ಅಚ್ಚರಿ ಬಾಂಡ್ರಾವಿ ಕಮರದ ಕಾಡು | ಕಾಯಕಕ್ಕೆ ಸಂದ ಅತೀ ದೊಡ್ಡ ಗೌರವ ಕಾಡಿಗೆ ವನಪಾಲಕನ ಹೆಸರೇ ನಾಮಕರಣ
ಜೋಗಿಮಟ್ಟಿಯ ತುತ್ತ ತುದಿ ಭೂಮಿ ಆಕಾಶಕ್ಕೆ ನಡುವೆಯೇ ಇರುವಂತೆ ಭಾಸವಾಗುತ್ತದೆ. ಇಲ್ಲಿರುವ ವೀವ್ ಪಾಯಿಂಟ್‍ನಲ್ಲಿ ಕುಳಿತಾಗ ಈ ಭಾವ ಬಾರದೆ ಇರಲು ಸಾಧ್ಯವೇ ಇಲ್ಲ.
ವೀವ್ ಪಾಯಿಂಟ್‍ನಲ್ಲಿ ನಿಂತು ಗಾಳಿಯ ವೇಗ ಅನುಭವಿಸಿ:
ಇತ್ತ ಮೋಡಗಳು ಮುಖವನ್ನೇ ಸವರಿ ಹೋದರೆ, ಕಣ್ಣ ಮುಂದೆಯೇ ಪ್ರಪಾತದಂತೆ ಕೆರೆ, ಕಟ್ಟೆ, ಊರು. ಕೇರಿಗಳೆಲ್ಲಾ ಪುಟ್ಟದಾಗಿ ಕಾಣಿಸುತ್ತವೆ. ಕಣ್ಣ ಉ ಹಾಯಿಸಿದಷ್ಟೂ ದೂರಕ್ಕೂ ಹಸಿರಿನ ಉಬ್ಬು ತಗ್ಗುಗಳಂತೆ ನೂರಾರು ಬೆಟ್ಟ ಗುಡ್ಡಗಳು ಗೋಚರಿಸುತ್ತವೆ.
ಈ ಬೆಟ್ಟಗಳ ತುದಿಯಲ್ಲಿ ಮಕ್ಕಳು ಆಟಿಕೆಗೆ ತೆಂಗಿನ ಗರಿಯಲ್ಲಿ ಫ್ಯಾನ್ ಮಾಡಿ ಹಿಡಿದಂತೆ ವಿಂಡ್ ಫ್ಯಾನ್ ಅಳವಡಿಸಿದ್ದು, ಪ್ರಕೃತಿಗೆ ಡಿಸ್ಟರ್ಬ್ ಅನ್ನಿಸಿದರೂ, ಒಂದೊಳ್ಳೆ ನೋಟವೂ ಸಿಗುತ್ತದೆ.
ಇದನ್ನೂ ಓದಿ: ಬಯಲು ಸೀಮೆಯ ಊಟಿ | ಸ್ವರ್ಗವ ನಾಚಿಸುವ ಜೋಗಿಮಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು..!
ಜೋಗಿಮಟ್ಟಿಯ ತುತ್ತ ತುದಿಯಲ್ಲಿ ಅತೀ ಹೆಚ್ಚು ಗಾಳಿ ಬೀಸುವ ಅನುಭೂತಿ, ಅನುಭವ ನಿಮಗೆ ದಕ್ಕಲಿ ಎನ್ನುವ ಉದ್ದೇಶದಿಂದ ಅರಣ್ಯ ಇಲಾಖೆಯವರು ಸುಮಾರು 30 ಅಡಿ ಎತ್ತರದಲ್ಲಿ ವೀವ್ ಪಾಯಿಂಟ್ ಮಾಡಿದ್ದಾರೆ.
ಒಂದು ಕ್ಷಣ ಕೈ ಬಿಟ್ಟರೆ ಗಾಳಿಯಲ್ಲಿ ತೇಲಿ ಹೋಗುತ್ತೇವೆಂಬ ಭಯ ಮೂಡುತ್ತದೆ. ಎಡೆಬಿಡದೇ ಕ್ಷಣವೂ ಸುಮ್ಮನಿರದೆ ಸುಯ್ಯನೆ ಬೀಸುವ ಗಾಳಿಗೆ ಒಂದು ಕ್ಷಣ ಸುಸ್ತು ಅನ್ನಿಸಿದರೂ, ಮರು ಕ್ಷಣ ಅದೇ ಗಾಳಿಗೆ ಮುಖ ಒಡ್ಡು ಕೈ ಅಗಲಿಸಿ ನಿಂತು ಫೋಟೋ ತೆಗೆಸಿಕೊಳ್ಳುವ ಉತ್ಸಾಹ ಬರುತ್ತದೆ.
ಔಷಧಿ ನೀಡುತ್ತಿದ್ದ ಜೋಗಿಯೊಬ್ಬರ ಸಮಾಧಿ:
ಈ ವೀವ್ ಪಾಯಿಂಟ್ ಪಕ್ಕದಲ್ಲಿ ಚಿಕ್ಕದಾದ ಗುಡಿಯೊಂದಿದೆ. ಇದು ಇಲ್ಲಿ ಔಷಧಿ ನೀಡುತ್ತಿದ್ದ ಮಚ್ಚೇಂದ್ರನಾಥ ಎಂಬ ಜೋಗಿಯೊಬ್ಬರು ಇದ್ದರು. ಜನೋಪಯೋಗಿಗಳಾಗಿ ಇಲ್ಲಿ ನೆಲೆಸಿದ್ದ ಕಾರಣಕ್ಕೆ, ಜೋಗಿ ಸಿದ್ದೇಶ್ವರ ಗುಡಿ ಇದೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ಬಾಲ ರಾಮನಿಗೆ ಭಾವ ತುಂಬಿದ ಭಾವನಾ | ಚಿತ್ರದುರ್ಗದ ಯುವತಿಯ ಕುಂಚದಲ್ಲಿ ಅರಳಿದ ಸುಂದರ ಕಲಾಕೃತಿ
ಇದು ಅವರ ಸಮಾಧಿ. ಈ ಕಾರಣಕ್ಕೆ ಇದನ್ನು ಜೋಗಿಮರಡಿ ಎನ್ನಲಾಗುತ್ತಿತ್ತು. ಕಾಲ ಕ್ರಮೇಣ ಅದು ಜೋಗಿ ಮಟ್ಟಿಯಾಗಿ ಬದಲಾಯಿತು ಎನ್ನುವ ಮಾತುಗಳಿವೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number