ಮುಖ್ಯ ಸುದ್ದಿ
ವಿವಿ ಸಾಗರಕ್ಕೆ ಭರ್ತಿ 29 TMC ನೀರು
CHITRADURGA NEWS | 22 NOVEMBER 2024
ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಿವಿ ಸಾಗರ ಜಲಾಶಯಕ್ಕೆ 29 ಟಿಎಂಸಿ(TMC) ಅಡಿ ನೀರು ಬಂದು ಸೇರಿದೆ.
ನ.22 ಶುಕ್ರವಾರ ಬೆಳಗ್ಗೆ 8 ಗಂಟೆಗೆ ನಡೆಸಿದ ಮಾಪನದ ವೇಳೆ ಜಲಾಶಯದಲ್ಲಿ ಭರ್ತಿ 29 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ: ನ.25ಕ್ಕೆ ಚಿತ್ರದುರ್ಗಕ್ಕೆ ಸಚಿವ ಡಾ.ಎಂ.ಸಿ.ಸುಧಾಕರ್ ಭೇಟಿ
ಇಂದು ಬೆಳಗ್ಗೆ ವೇಳೆಗೆ ಜಲಾಶಯಕ್ಕೆ 577 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
135 ಅಡಿ ಎತ್ತರದ ಜಲಾಶಯಕ್ಕೆ 130 ಅಡಿ ದಾಟಿದ ತಕ್ಷಣ ಕೋಡಿಯಲ್ಲಿ ನೀರು ಹರಿಯಲಿದೆ. ಸದ್ಯ ಜಲಾಶಯದ ನೀರಿನ ಮಟ್ಟ 128.30 ಅಡಿಗೆ ತಲುಪಿದ್ದು, ಇನ್ನು 1.70 ಅಡಿ ನೀರು ಬಂದರೆ ಕೋಡಿ ಬೀಳುವುದು ನಿಶ್ಚಿತ.
ಇದನ್ನೂ ಓದಿ:ಬ್ಯಾಂಕುಗಳ ವಿರುದ್ಧ ಗೋವಿಂದ ಕಾರಜೋಳ ಗರಂ | ಹಣಕಾಸು ಸಚಿವರಿಗೆ ಪತ್ರ ಬರೆಯುವುದಾಗಿ ಎಚ್ಚರಿಕೆ
30 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲಿ ಈಗ 29 ಟಿಎಂಸಿ ಅಡಿ ನೀರು ಸಂಗ್ರಹವಾಗಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.