ಮುಖ್ಯ ಸುದ್ದಿ
ಮಲ್ಲಿಕಾರ್ಜುನ ಖರ್ಗೆ ನಾಗಪುರದ RSS ಕಚೇರಿಗೆ ಬರಲಿ | ಗೋವಿಂದ ಕಾರಜೋಳ ಆಹ್ವಾನ
CHITRADURGA NEWS | 21 NOVEMBER 2024
ಚಿತ್ರದುರ್ಗ: ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಒಮ್ಮೆ ಆರೆಸ್ಸೆಸ್ಸ್ (RSS)ಕೇಂದ್ರ ಕಚೇರಿ ನಾಗಪುರಕ್ಕೆ ಬಂದು ನೋಡಿ ನಂತರ ಸಂಘದ ಬಗ್ಗೆ ಟೀಕೆ ಮಾಡಲಿ ಎಂದು ಎಂದು ಸಂಸದ ಗೋವಿಂದ ಕಾರಜೋಳ ತಿರುಗೇಟು ನೀಡಿದರು.
ಆರೆಸ್ಸೆಸ್ಸ್, ಬಿಜೆಪಿ ವಿಷಸರ್ಪ ಇದ್ದಂತೆ ಎನ್ನುವ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿ, ಆರೆಸ್ಸೆಸ್ಸ್ ವಿಷಸರ್ಪ ಅಲ್ಲ. ಕಾಂಗ್ರೆಸ್ ನಿಜವಾದ ವಿಷಸರ್ಪ ಎಂದರು.
ಇದನ್ನೂ ಓದಿ: ವಿವಿ ಸಾಗರ ಭರ್ತಿಗೆ ಇನ್ನೊಂದು ಟಿಎಂಸಿ ಅಡಿ ಬಾಕಿ
ಇಡೀ ಜಗತ್ತಿಗೆ ಮಾದರಿಯಾದ ಸಂವಿಧಾನವನ್ನು ಭಾರತಕ್ಕೆ ಕೊಟ್ಟಿರುವ ಡಾ.ಬಿ.ಆರ್.ಅಂಬೇಡ್ಕರರಿಗೆ ಕಾಂಗ್ರೆಸ್ ಮಾಡಿರುವ ದ್ರೋಹವನ್ನು ನೆನಪಿಸಿಕೊಳ್ಳಬೇಕು. ಬಾಬಾ ಸಾಹೇಬರು ನಿಧನರಾದಾಗ ದೆಹಲಿಯಲ್ಲಿ ಅಂತ್ಯಕ್ರಿಯೆಗೆ ಜಾಗ ಕೊಡಲಿಲ್ಲ ಎಂದು ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ದಲಿತರ ಹೆಸರಿನಲ್ಲಿ ದೇಶದಲ್ಲಿ 60 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್, ದಲಿತರಿಗೆ ಉದ್ಯೋಗ ಕೊಡಲಿಲಲ್ಲ. ದೂರ ಇಟ್ಟರು ಎಂದು ಅಸಮಧಾನ ವ್ಯಕ್ತಪಡಿಸಿದರು.
ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ಪತನ:
ರಾಜ್ಯದಲ್ಲಿ ಸರ್ಕಾರ ಎನ್ನುವುದೇ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಅನುದಾನ ಬಿಡುಗಡೆ ಮಾಡದೆ, ಕೇವಲ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಕ್ಕೆ ಮಾತ್ರ 25 ಕೋಟಿ ಅನುದಾನ ಕೊಡಲಾಗಿದೆ. ಹಾಗಾದರೆ, ಬಿಜೆಪಿ, ಜೆಡಿಎಸ್ ಶಾಸಕರು ಗೆದ್ದಿರುವ ಕ್ಷೇತ್ರಗಳ ಅಭಿವೃದ್ಧಿ ಬೇಡವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಭರಮಸಾಗರದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ | ನ.24 ರಂದು ಸಮಾಲೋಚನಾ ಸಭೆ
ಆಡಳಿತ ಪಕ್ಷದ ಶಾಸಕರಿಗೆ ತುಸು ಹೆಚ್ಚು ಅನುದಾನ ಕೊಡುವುದು ಇರುತ್ತದೆ. ಆದರೆ, ಅನುದಾನವನ್ನೇ ಕೊಡದಂತಹ ಸರ್ಕಾರ ಎಂದೂ ಇರಲಿಲ್ಲ. ಈ ಸರ್ಕಾರ ಒಂದೂವರೆ ವರ್ಷದಲ್ಲಿ ಒಂದೇ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ ಎಂದು ಕಾರಜೋಳ ದೂರಿದರು.