Connect with us

ಬಸವಮಯವಾಗಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ ಬದುಕು | ಡಾ.ಬಸವಕುಮಾರ ಸ್ವಾಮೀಜಿ

athini sri

ಮುಖ್ಯ ಸುದ್ದಿ

ಬಸವಮಯವಾಗಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ ಬದುಕು | ಡಾ.ಬಸವಕುಮಾರ ಸ್ವಾಮೀಜಿ

CHITRADURGA NEWS | 08 JULY 2024
ಚಿತ್ರದುರ್ಗ: ವಿಭಿನ್ನ ಆಲೋಚನೆ ಹೊಂದಿ ಸಾಮಾನ್ಯ ಮನುಷ್ಯರ ಜೀವನ ಕ್ರಮಕ್ಕಿಂತ ಬೇರೆಯದೆ ಆದ ಸಮಾಜ ಸುಧಾರಣೆಗೆ ಆದ್ಯತೆ ನೀಡುವಂತಹವರು ಶರಣರು. ಅಂಥವರ ಸಾಲಿಗೆ ಅಥಣಿ ಮುರುಘೇಂದ್ರ ಶಿವಯೋಗಿಗಳು ಸೇರುತ್ತಾರೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಮುರುಘಾ ಮಠದ ರಾಜಾಂಗಣದಲ್ಲಿ ಏರ್ಪಡಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶಿವಯೋಗಿಗಳವರ ಬದುಕು ಬಸವಮಯ ಆಗಿತ್ತು. ಅವರ ಜೀವನ ನೋಡಿದರೆ ಅಲ್ಲಿ ಬಸವತತ್ವದ ಅನುಷ್ಠಾನವೇ ಗೋಚರಿಸುತ್ತಿತ್ತು. ಅಷ್ಟರಮಟ್ಟಿಗೆ ಬಸವಣ್ಣನವರ ವಿಚಾರಧಾರೆಗಳನ್ನು ಅಪ್ಪಿಕೊಂಡಿದ್ದರು ಎಂದರು.

ಕ್ಲಿಕ್‌ ಮಾಡಿ ಓದಿ: ಆತಂಕ ಸೃಷ್ಟಿಸಿದ ಡೆಂಗ್ಯೂ | ಕೋವಿಡ್ ಮಾದರಿಯಲ್ಲಿ ನಿಯಂತ್ರಣಕ್ಕೆ ಸಜ್ಜು

ಸಮತಾವಾದ ಮತ್ತು ಜಾತ್ಯಾತೀತ ನಿಲುವಿನ ವಿಚಾರವಾದಿಯಾಗಿದ್ದ ಶ್ರೀಗಳು, ಹರ್ಡೇಕರ್ ಮಂಜಪ್ಪನಂಥವರನ್ನು ಸಾಮೀಪ್ಯಕ್ಕೆ ಕರೆದುಕೊಂಡು ಅವರು ಬಸವತತ್ವ ಪರಿಪಾಲನೆಗೆ ಪ್ರೇರಣೆಯಾದರು ಎಂದು ತಿಳಿಸಿದರು.

ದೂರದೃಷ್ಟಿ, ಚಿಕಿತ್ಸಕತನ ಶಿವಯೋಗಿಗಳಲ್ಲಿತ್ತು. ಭೌತಿಕ ವಿಚಾರಗಳತ್ತ ಗಮನಹರಿಸದೆ ಬೌದ್ಧಿಕ ವಿಚಾರಕ್ಕೆ ಮಹತ್ವ ಕೊಟ್ಟವರು. ದಯೆ, ಮಾನವೀಯತೆ ಅವರ ಮೇರುಗುಣಗಳಾಗಿದ್ದವೆಂದು ಅವರ ಬಹುಮುಖ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ವಿವರಿಸಿದರು.

ಕ್ಲಿಕ್‌ ಮಾಡಿ ಓದಿ: ಶಾಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ | ಹಿರಿಯೂರಿನಲ್ಲಿ ಘಟನೆ

ಲಾಳನಹಳ್ಳಿಯ ಶರಣೆ ಜಯದೇವಿ ತಾಯಿ ಅವರು, ಬಸವಾದಿ ಶಿವಶರಣರ ಜೀವನ ಮೌಲ್ಯವನ್ನು ಅರ್ಥ ಮಾಡಿಕೊಂಡಿದ್ದ ಶಿವಯೋಗಿಗಳು ಅದರಂತೆ ನಡೆದು ಮಾದರಿ ಜೀವನ ನಡೆಸಿದರು. ಅವರ ಬದುಕು ತೆರೆದ ಪುಸ್ತಕದಂತೆ ಇತ್ತು ಎಂದು ನುಡಿದರು.

ಶ್ರೀ ಮುರುಘೇಶ ಸ್ವಾಮೀಜಿ, ಶರಣೆ ಚಿನ್ಮಯಿತಾಯಿ, ಮಾತೆ ಅನ್ನಪೂರ್ಣೇಶ್ವರಿ ತಾಯಿ, ಗುರುಕುಲದ ಸಾಧಕರು, ವಿದ್ಯಾರ್ಥಿಗಳು, ಭಕ್ತಾದಿಗಳು ಭಾಗವಹಿಸಿದ್ದರು. ಜಮುರಾ ಕಲಾವಿದ ಉಮೇಶ್‌ ಪತ್ತಾರ್‌ ವಚನಗೀತೆ ಹಾಡಿದರು. ಚಿನ್ಮಯಿ ದೇವರು ಸ್ವಾಗತಿಸಿದರು. ವಿದ್ಯಾರ್ಥಿ ಸುದೀಪ್ ಕಾರ್ಯಕ್ರಮ ನಿರೂಪಿಸಿದರು. ವರುಣ್ ಸಂದೇಶ್ ಶರಣುಸಮರ್ಪಣೆ ಮಾಡಿದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version