
CHITRADURGA NEWS | 03 NOVEMBER 2025
ಚಿತ್ರದುರ್ಗ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಅನುಷ್ಠಾನಾಧಿಕಾರಿಗಳ ಪಾತ್ರ ಮುಖ್ಯ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ನವೆಂಬರ್ 3 | ಯಾವ ಅಡಿಕೆಗೆ ಎಷ್ಟು ರೇಟ್

ನಗರದ ಡಯಟ್‌ನಲ್ಲಿ ಜ್ಞಾನಸೇತು, ಮರುಸಿಂಚನ, ಕಲಿಕಾದೀಪ, ಗಣಿತ ಗಣಕ, ಓದು ಕರ್ನಾಟಕ ವಿಷಯ ಕುರಿತು ಶಿಕ್ಷಣ ಸಂಯೋಜಕರು, ಬಿ.ಆರ್.ಪಿ ಮತ್ತು ಸಿ.ಆರ್.ಪಿಗಳಿಗೆ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಎಂ.ಆರ್.ಪಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಶಿಕ್ಷಣಕ್ಕಾಗಿ ಸರ್ಕಾರ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದೆ. ಸಮಾಜದಲ್ಲಿ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಅನುಷ್ಠಾನಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು.
ನಮ್ಮ ವೃತ್ತಿಯಲ್ಲಿ ಶಿಸ್ತು, ಬದ್ಧತೆ ಬೆಳೆಸಿಕೊಳ್ಳುವುದರಿಂದ ಯಶಸ್ಸು ಗಳಿಸಬಹುದು. ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಾಲೂಕು ಹಂತದಲ್ಲಿ ಶಿಕ್ಷಕರಿಗೆ ಪರಿಣಾಮಕಾರಿಯಾಗಿ ತರಬೇತಿ ನೀಡಬೇಕು ಎಂದು ತಿಳಿಸಿದರು.
ಉಪ ಪ್ರಾಂಶುಪಾಲ ನಾಗಭೂಷಣ್ ಮಾತನಾಡಿ, ಪ್ರತಿ ಮಗು ನಿರ್ದಿಷ್ಟ ಸಾಮರ್ಥ್ಯ ಗಳಿಸಬೇಕು. ಶಾಲೆಗಳಲ್ಲಿ ಸಾರ್ವತ್ರಿಕ ದಾಖಲಾತಿ, ಹಾಜರಾತಿ, ಗುಣಮಟ್ಟದ ಶಿಕ್ಷಣ ಮೂರು ಧ್ಯೇಯೋದ್ದೇಶಗಳಿದ್ದು ಅನುಷ್ಠಾನಾಧಿಕಾರಿಗಳು ತಂತ್ರಜ್ಞಾನ ಬಳಕೆ ಮಾಡಿಕೊಂಡು ಶಿಕ್ಷಣ ನೀಡಲು ಶ್ರಮಿಸಬೇಕು.
ಇದನ್ನೂ ಓದಿ: ನ.05 ರಂದು ಚಿತ್ರದುರ್ಗದಲ್ಲಿ ಸುವರ್ಣ ಮಹೋತ್ಸವ | ವ್ಯವಸ್ಥಿತ ಆಯೋಜನೆಗೆ ಕ್ರಮ ವಹಿಸಿ | ಡಿಸಿ
ಮಕ್ಕಳಲ್ಲಿ ಭಾಷಾ ಸಾಮರ್ಥ್ಯ, ಗಣಿತದ ಮೂಲ ಕ್ರಿಯೆಗಳಲ್ಲಿ ಸಾಮರ್ಥ್ಯ ಪಡೆಯಲು ತರಬೇತಿ ಪೂರಕವಾಗಿದೆ. ತರಬೇತಿಯಲ್ಲಿ ಕಲಿತ ಅಂಶಗಳನ್ನು ತಾಲೂಕು ಹಂತದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದರು.
ನೋಡಲ್ ಅಧಿಕಾರಿ ತಿಪ್ಪೇಸ್ವಾಮಿ, ಸಂಪನ್ಮೂಲ ವ್ಯಕ್ತಿಗಳಾದ ಎಸ್. ಬಸವರಾಜು, ರಾಮಚಂದ್ರಪ್ಪ, ಮಂಜುಳಾ, ನಿಜಗುಣಮೂರ್ತಿ, ಗೀತಾ, ಮಂಜುನಾಥ್, ವರಲಕ್ಷ್ಮಿ, ಮೌನೇಶ್, ಬಂಡಿವಡ್ಡರ್, ರಾಜಪ್ಪ, ಚನ್ನವೀರಯ್ಯ, ಅಂಬರೀಷ್, ಮಹಮ್ಮದ್ ಆಲಿ, ಜಾವಿದ್ ಭಾಷಾ, ಮುರಳೀಧರ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
