CHITRADURGA NEWS | 25 SEPTEMBER 2025
ಚಿತ್ರದುರ್ಗ: ಕಲಾವಿದರ ರಾಜ್ಯ ಸಮ್ಮೇಳನ ನಡೆಸುವ ಕುರಿತು ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ಪರಿಷತ್ ರಾಜ್ಯ ಶಾಖೆ ಚಿತ್ರದುರ್ಗ ವತಿಯಿಂದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಇದನ್ನೂ ಓದಿ: ಜಿ.ಆರ್.ಹಳ್ಳಿ ಪಿಜಿ ಸೆಂಟರ್ ಅನ್ನು ಮೆಡಿಕಲ್ ಕಾಲೇಜಿಗೆ ಕೊಡಿ | ಹೊಸ ಡಿಸಿ ಕಚೇರಿಗೆ ವಿವಿ ಸ್ಥಳಾಂತರಿಸಿ
ಪರಿಷತ್‍ನ ರಾಜ್ಯಾಧ್ಯಕ್ಷ ಪರಶುರಾಮ್ ಗೊರಪ್ಪರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಕಲೆ ಮತ್ತು ಕಲಾವಿದರ ಸಮಸ್ಯೆಗಳನ್ನು ಆಲಿಸಿ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪಡೆಯಬೇಕಾಗಿರುವುದರಿಂದ ರಾಜ್ಯ ಸಮ್ಮೇಳನ ನಡೆಸಲು ತೀರ್ಮಾನಿಸಿದ್ದೇವೆ.
ನಾಡಿನ ನಾನಾ ಭಾಗಗಳಲ್ಲಿರುವ ಕಲಾವಿದರುಗಳನ್ನು ಹಾಗೂ ಡಾ.ರಾಜ್‍ಕುಮಾರ್ ಕುಟುಂಬದವರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗುವುದೆಂದರು.
ಇದನ್ನೂ ಓದಿ: ಪಿ.ರಘು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ನೇಮಕ
ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ಪರಿಷತ್ ರಾಜ್ಯ ಶಾಖೆ ಕಾರ್ಯಾಧ್ಯಕ್ಷ ಹೆಚ್.ಶಿವಣ್ಣ, ಗೌರವಾಧ್ಯಕ್ಷ ಕೆ.ಬಿ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಯಲ್ಲೇಶ್, ರಾಜ್ಯ ಸಂಚಾಲಕ ದಿವುಶಂಕರ್, ಖಜಾಂಚಿ ಡಿ.ಜಗದೀಶ್, ಗೌರವ ಕಾರ್ಯದರ್ಶಿ ತಿಪ್ಪೇಸ್ವಾಮಿ ಹಾಗೂ ಮಹಿಳಾ ಪದಾಧಿಕಾರಿಗಳಾದ ಯಶೋಧಮ್ಮ, ಉಷಾದೇವಿ, ಶಾಂತಮ್ಮ, ಕಮಲಮ್ಮ, ಸುನಿತಾಗಾಂಧಿ, ಶಾರದಮ್ಮ ಇವರುಗಳು ಪೂರ್ವಭಾವಿ ಸಭೆಯಲ್ಲಿ ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
