CHITRADURGA NEWS | 03 JULY 2026
ಚಿತ್ರದುರ್ಗ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕೆ.ಎಸ್.ಒ.ಯು.) 2026-27ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ.
ಇದನ್ನೂ ಓದಿ: ಜಿಲ್ಲಾಸ್ಪತ್ರೆಯಲ್ಲಿ ಉಚಿತ ಮೂತ್ರಕೋಶ ತಪಾಸಣೆ
ಪ್ರಥಮ ವರ್ಷದ ಕಲಾ ಪದವಿ (ಬಿ.ಎ), ವಾಣಿಜ್ಯಶಾಸ್ತ್ರ ಪದವಿ (ಬಿ.ಕಾಂ), ವಿಜ್ಞಾನ ಪದವಿ (ಬಿ.ಎಸ್ಸಿ), ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪದವಿ (ಬಿ.ಲಿಬ್.ಐ.ಎಸ್ಸಿ), ಗಣಕ ಅನ್ವಯಿಕ ಪದವಿ (ಬಿಸಿಎ), ವ್ಯವಹಾರ ಆಡಳಿತ ಪದವಿ (ಬಿಬಿಎ), ಸಮಾಜ ಕಾರ್ಯ ಪದವಿ (ಬಿ.ಎಸ್.ಡಬ್ಲ್ಯೂ) ಹಾಗೂ ಸ್ನಾತಕೋತ್ತರ ಪದವಿಗಳಾದ ಕಲಾ ಸ್ನಾತಕೋತ್ತರ (ಎಂ.ಎ), ವಾಣಿಜ್ಯಶಾಸ್ತ್ರ ಸ್ನಾತಕೋತ್ತರ (ಎಂ.ಕಾಂ), ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ (ಎಂ.ಎ-ಎಂ.ಸಿ.ಜೆ), ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಸ್ನಾತಕೋತ್ತರ (ಎಂ.ಲಿಬ್.ಐ.ಎಸ್ಸಿ), ವ್ಯವಹಾರ ಆಡಳಿತ ಸ್ನಾತಕೋತ್ತರ (ಎಂಬಿಎ), ವಿಜ್ಞಾನ ಸ್ನಾತಕೋತ್ತರ (ಎಂ.ಎಸ್ಸಿ), ಗಣಕ ಅನ್ವಯಿಕ ಸ್ನಾತಕೋತ್ತರ (ಎಂಸಿಎ), ಸಮಾಜ ಕಾರ್ಯ ಸ್ನಾತಕೋತ್ತರ (ಎಂ.ಎಸ್.ಡಬ್ಲ್ಯೂ) ಕೋರ್ಸ್‌ಗಳು ಸೇರಿದಂತೆ ವಿವಿಧ ಪಿಜಿ ಡಿಪ್ಲೋಮಾ, ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಅಧಿಕೃತ ಆನ್‌ಲೈನ್ ಅಡ್ಮಿಷನ್ ಪೋರ್ಟಲ್ https://ksouportal.com/views/
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೆ, ಡಿಫೆನ್ಸ್ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ, ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ, ಕೆ.ಎಸ್.ಆರ್.ಟಿ.ಸಿ. ನೌಕರರುಗಳಿಗೆ ನಿಯಮಾನುಸಾರ ಬೋಧನಾ ಶುಲ್ಕದಲ್ಲಿ ರಿಯಾಯಿತಿ ಇರುತ್ತದೆ.ಕೋವಿಡ್-19 ರಿಂದ ಮೃತಪಟ್ಟವರ ಮಕ್ಕಳಿಗೆ, ತೃತೀಯ ಲಿಂಗಿಗಳಿಗೆ ಹಾಗೂ ಶೇಕಡ 50ಕ್ಕೂ ಹೆಚ್ಚಿನ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ (ಬಿ.ಇಡಿ ಮತ್ತು ಎಂಬಿಎ ಕೋರ್ಸ್‌ಗಳನ್ನು ಹೊರತುಪಡಿಸಿ) ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ವಿದ್ಯಾರ್ಥಿಗಳು ಏಕಕಾಲದಲ್ಲಿ ರೆಗ್ಯುಲರ್ ಹಾಗೂ ದೂರಶಿಕ್ಷಣ ಕ್ರಮದಲ್ಲಿ ಕೋರ್ಸ್ ಕಲಿಯಲು ಅವಕಾಶವಿದೆ.
ಇದನ್ನೂ ಓದಿ: BRC ಶಾಲಾ ಸಿದ್ಧತಾ ಕೇಂದ್ರಗಳಲ್ಲಿ ಹುದ್ದೆ | ಅರ್ಜಿ ಅಹ್ವಾನ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಧಿಕೃತ ವೆಬ್‌ಸೈಟ್: www.ksoumysuru.ac.in ಮೊಬೈಲ್ ಸಂಖ್ಯೆಗಳಾದ 9738014893, 7204352581, 9008905457, 8310111244, 9972499704, 7090762378 ಕರೆ ಮಾಡಬಹದು.
ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸುವುದು ಎಂದು ಚಿತ್ರದುರ್ಗ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಕೆ.ಪಿ. ಮಹಾಲಿಂಗಯ್ಯ ಅವರು ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
