ಮುಖ್ಯ ಸುದ್ದಿ
ಭೀಕರ ಬರಗಾಲದಲ್ಲಿ ಕೋಡಿ ಬಿದ್ದ ಚಿತ್ರದುರ್ಗ ಜಿಲ್ಲೆಯ ಕೆರೆ | ನೀರೆಲ್ಲಿಂದ ಬಂತು ಅಂತಿರಾ, ಈ ಸುದ್ದಿ ಓದಿ..
CHITRADURGA NEWS | 28 APRIL 2024
ಚಿತ್ರದುರ್ಗ: ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆ ಭೀಕರ ಬರಗಾಲಕ್ಕೆ ಸಿಕ್ಕಿ ತತ್ತರಿಸಿ ಹೋಗಿದೆ. ರೈತರು ಅಡಿಕೆ, ತೆಂಗು ಸೇರಿದಂತೆ ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.
ಜಿಲ್ಲೆಯ ಸಾಕಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಮಳೆಯ ಅಭಾವದಿಂದ ಕೆರೆ, ಕಟ್ಟೆಗಳೆಲ್ಲಾ ಖಾಲಿಯಾಗಿ ದನ, ಕರುಗಳಿಗೆ ಮೇವು, ನೀರು ಸಿಗದ ಸ್ಥಿತಿ ಸೃಷ್ಟಿಯಾಗಿದೆ.
ಇದನ್ನೂ ಓದಿ: ಇದನ್ನೂ ಓದಿ : ಮುರುಘಾಮಠದಲ್ಲಿ ಸಮಾಲೋಚನ ಸಭೆ | ಸೂಕ್ತ ಸಲಹೆ-ಸೂಚನೆಗೆ ಮನವಿ
ಇಂತಹ ರಣ ಭೀಕರ ಪರಿಸ್ಥಿತಿಯ ನಡುವೆ ಚಿತ್ರದುರ್ಗ ಜಿಲ್ಲೆಯಲ್ಲಿ ಕೆರೆಯೊಂದು ತುಂಬಿ ಕೋಡಿ ಬಿದ್ದಿದೆ. ತೊರೆ ತುಂಬಿ ಹರಿದಿದೆ. ಬ್ಯಾರೇಜ್‍ಗಳಲ್ಲೂ ನೀರು ತುಂಬಿ ಹರಿದಿದೆ.
ಹೌದು, ಹಿರಿಯೂರು ತಾಲೂಕಿನ ಅಂಬಲಗೆರೆ ಗ್ರಾಮದ ಕೆರೆ ಭರ್ತಿಯಾಗಿ ಭೀಕರ ಬರದಲ್ಲಿ ಮೈದುಂಬಿ ಹರಿದಿರುವುದು ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ. ಅಂತರ್ಜಲ ಕುಸಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾಗ ಕೆರೆ ಕೋಡಿ ಬಿದ್ದಿರುವುದು ಅನುಕೂಲವಾಗಿದೆ.
ಇದನ್ನೂ ಓದಿ: ಈ ವರ್ಷ ಬಹಳ ಬಿಸಿಲು ಸ್ವಾಮೀಜಿ | ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್
ಬರಗಾಲದಲ್ಲಿ ಕೆರೆ ತುಂಬಿದ ಕಾರಣ ಇಷ್ಟೇ, ಕುಡಿಯುವ ನೀರಿನ ಉದ್ದೇಶಕ್ಕಾಗಿ ವಾಣಿವಿಲಾಸ ಸಾಗರ ಜಲಾಶಯದಿಂದ ಹಿರಿಯೂರು ತಾಲೂಕಿನ ಮಸ್ಕಲ್, ಬಿದರಕೆರೆ ಹಾಗೂ ಅಂಬಲಗೆರೆ ಕೆರೆಗಳಿಗೆ ಗುರುತ್ವಾಕರ್ಷಣೆ ಬಲದಲ್ಲಿ ಎಡ ನಾಲೆ ಮೂಲಕ 200 ಕ್ಯುಸೆಕ್ ನೀರು ಹರಿಸಿದ್ದರಿಂದ ಬತ್ತಿದ್ದ ಜಲ ಮೂಲಗಳಿಗೆ ಜೀವ ಕಳೆ ಬರುತ್ತಿದೆ.
ಎಡ ನಾಲೆ ಮೂಲಕ ಕೆರೆಗಳಿಗೆ ನೀರು ಹರಿಸುವುದರಿಂದ ಸುತ್ತಮುತ್ತಲಿನ ಹತ್ತಾರು ಗ್ರಾಮದ ಜನ-ಜಾನುವಾರುಗಳ ಕುಡಿವ ನೀರು, ಅಂತರ್ಜಲ ವೃದ್ಧಿಗೆ ಸಂಜೀವಿನಿಯಾಗಿದೆ.
ಇದನ್ನೂ ಓದಿ: ಜನರ ಜೊತೆ ಚಹಾ ಕುಡಿದು, ಹರಟೆ ಹೊಡೆದ ಗೋವಿಂದ ಕಾರಜೋಳ
ಸದಸ್ಯ ವಿವಿ ಸಾಗರ ಜಲಾಶಯದಲ್ಲಿ 113 ಅಡಿ ನೀರು ಸಂಗ್ರಹವಿದೆ, ಈಗಾಗಲೇ ವೇದಾವತಿ-ಸುವರ್ಣಮುಖಿ ನದಿಗೆ ನೀರು ಹರಿಸಿರುವುದು ನದಿಯ ಪರಿಸರದಲ್ಲಿ ಜೀವಕಳೆ ಬಂದಿದೆ. ಇದರಿಂದ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ವರದಾನವಾಗಲಿದೆ.