ಮುಖ್ಯ ಸುದ್ದಿ
ಮುರುಘಾಮಠದಲ್ಲಿ ಸಮಾಲೋಚನಾ ಸಭೆ | ಸೂಕ್ತ ಸಲಹೆ–ಸೂಚನೆಗೆ ಮನವಿ
CHITRADURGA NEWS | 28 APRIL 2024
ಚಿತ್ರದುರ್ಗ: ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಏಪ್ರಿಲ್ 29ರಂದು ಬಸವ ಜಯಂತಿ ಪೂರ್ವಭಾವಿ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿದೆ.
ಮಠದ ರಾಜಾಂಗಣದಲ್ಲಿ ಅಂದು ಸಂಜೆ 5.30ಕ್ಕೆ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿದೆ. ಬಸವೇಶ್ವರರ ಜಯಂತಿಯನ್ನು ಪ್ರತಿ ವರ್ಷ ಪ್ರಪಂಚದಾದ್ಯಂತ ಭಕ್ತಿ, ಗೌರವ. ಸಂಭ್ರಮದೊಂದಿಗೆ ಆಚರಿಸಲಾಗುತ್ತಿದೆ.
ಕ್ಲಿಕ್ ಮಾಡಿ ಓದಿ: ಈ ವರ್ಷ ಬಹಳ ಬಿಸಿಲು ಸ್ವಾಮೀಜಿ | ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್
ಈ ಲೋಪವನ್ನು ನೀಗಿಸುವ ನಿಟ್ಟಿನಲ್ಲಿ ಶ್ರೀಮಠದ ಆಡಳಿತ ಸಮಿತಿ ಚಿಂತನೆ ನಡೆಸಿ. ಈ ವರ್ಷದಿಂದ ಮೂರು ದಿನಗಳ ಕಾಲ ಬಸವ ಜಯಂತಿ ಕಾರ್ಯಕ್ರಮವನ್ನು ಶ್ರೀಮಠದ ಆವರಣದಲ್ಲಿ ವ್ಯವಸ್ಥಿತವಾಗಿ, ಅರ್ಥಪೂರ್ಣವಾಗಿ, ಆದರ್ಶಪ್ರಾಯವಾಗಿ ನಡೆಸಬೇಕೆಂದು ಸಂಕಲ್ಪ ಮಾಡಿದೆ.
ಕ್ಲಿಕ್ ಮಾಡಿ ಓದಿ: 29ರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ | 9 ಕೇಂದ್ರಗಳಲ್ಲಿ ಸಜ್ಜು
ಬಸವತತ್ವಗಳನ್ನು ವಿಶ್ವಮಟ್ಟದಲ್ಲಿ ಪ್ರಸರಿಸುವ ಮಹತ್ವಾಂಕ್ಷೆಯನ್ನು ಈ ಕಾರ್ಯಕ್ರಮದಲ್ಲಿ ಬಿಂಬಿಸುವುದು ಸೂಕ್ತವಾಗಿರುವುದರಿಂದ ಈ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸುವಾಗ ಎಲ್ಲ ಆಸಕ್ತರ ಅಭಿಪ್ರಾಯ ಸಂಗ್ರಹಿಸಿ, ಯಾವುದೇ ನ್ಯೂನತೆ ಆಗದಂತೆ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಉದ್ದೇಶಿಸಲಾಗಿದೆ.
ಕ್ಲಿಕ್ ಮಾಡಿ ಓದಿ: ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ | ಮೇಲುದುರ್ಗದಲ್ಲಿ ಭಂಡಾರ ಪೂಜೆ