Connect with us

ವರ್ಷದ ಸಾಧಕ ಪ್ರಶಸ್ತಿಗೆ ಸಂಗೀತ ಕಲಾವಿದ ತೋಟಪ್ಪ ಉತ್ತಂಗಿ ಆಯ್ಕೆ

Thotappa Utthangi

ಮುಖ್ಯ ಸುದ್ದಿ

ವರ್ಷದ ಸಾಧಕ ಪ್ರಶಸ್ತಿಗೆ ಸಂಗೀತ ಕಲಾವಿದ ತೋಟಪ್ಪ ಉತ್ತಂಗಿ ಆಯ್ಕೆ

CHITRADURGA NEWS | 15 APRIL 2025

ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಜಮುರಾ ಕಲಾಲೋಕದ ಸಂಗೀತ ಕಲಾವಿದರಾದ ತೋಟಪ್ಪ ಉತ್ತಂಗಿಯವರು ಬೆಂಗಳೂರು ಬಸವ ಸಮಿತಿಯ 2025ನೇ ಸಾಲಿನ ವರ್ಷದ ಸಾಧಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ಅರವಿಂದ ಜತ್ತಿ ಅವರು ತಿಳಿಸಿದ್ದಾರೆ.

Also Read: ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಪರಿಶೀಲನೆ | ಶಾಸಕ ಕೆ.ಸಿ.ವಿರೇಂದ್ರ (ಪಪ್ಪಿ)

ತೋಟಪ್ಪ ಅವರು ಕಳೆದ 35 ವರ್ಷಗಳಿಂದ ವಚನ ಗಾಯಕರಾಗಿ, ವಚನ ಸಂಗೀತ, ರೂಪಕ ಮತ್ತು ನಾಟಕಗಳ ಮೂಲಕ ನಾಡಿನೆಲ್ಲೆಡೆ ಬಸವಪ್ರಜ್ಞೆಯನ್ನು ಹರಡುತ್ತ ಬಂದಿದ್ದಾರೆ.

ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ|| ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ ಹಿಂದೂಸ್ಥಾನಿ ಸಂಗೀತ ಅಭ್ಯಾಸ ಮಾಡಿ, ವಿದ್ವತ್ ಪದವಿ ಪಡೆದಿದ್ದಾರೆ.

ಅಕ್ಕ-ತಂಗಿ ಭೇಟಿ ಉತ್ಸವದ ವೀಡಿಯೋ ನೋಡಿ: 

ಸಂಗೀತ ನಿರ್ದೇಶಕರಾಗಿ, ಬಸವಾದಿ ಶರಣರು ರಚಿಸಿದ ವಚನಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಮುಂಬೈ, ದೆಹಲಿ, ಊಟಿ, ಪೂನಾ, ಗೋವಾ, ಹೈದರಾಬಾದ್, ದುಬೈ ಹಾಗೂ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಇವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ವಚನ ಸಂಗಿತೋತ್ಸವ, ಹಂಪಿ ಉತ್ಸವ, ದುರ್ಗೋತ್ಸವ, ಹಾವೇರಿ ಜಿಲ್ಲಾ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

Also Read: ನಾಳೆ ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ

ಏಪ್ರಿಲ್ 30ರಂದು ಬಸವ ಸಮಿತಿಯಲ್ಲಿ ನಡೆಯುವ ವಿಶ್ವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಯು 1 ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version