Connect with us

Maharshi Valmiki: ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ ಸಂಭ್ರಮ | ವೇದಾವತಿಯಿಂದ ಗಂಗಾ ಪೂಜೆ

ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ

ಚಳ್ಳಕೆರೆ

Maharshi Valmiki: ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ ಸಂಭ್ರಮ | ವೇದಾವತಿಯಿಂದ ಗಂಗಾ ಪೂಜೆ

CHITRADURGA NEWS | 21 NOVEMBER 2024

ಚಳ್ಳಕೆರೆ: ತಾಲ್ಲೂಕಿನ ಮೈಲನಹಳ್ಳಿಯ ಬಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಮಹರ್ಷಿ ವಾಲ್ಮೀಕಿ(Maharshi Valmiki) ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭ ಸಡಗರ ಸಂಭ್ರಮದಿಂದ ಜರುಗಿತು.

ಕ್ಲಿಕ್ ಮಾಡಿ ಓದಿ: ಮಲ್ಲಿಕಾರ್ಜುನ ಖರ್ಗೆ ನಾಗಪುರದ RSS ಕಚೇರಿಗೆ ಬರಲಿ | ಗೋವಿಂದ ಕಾರಜೋಳ ಆಹ್ವಾನ

ಮುಂಜಾನೆ ಸಮೀಪದ ವೇದಾವತಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ಕುಂಭಗಳಲ್ಲಿ ಗಂಗಾ ಜಲವನ್ನ ತರಿಸಿ ವಾಲ್ಮೀಕಿ ವಿಗ್ರಹಕ್ಕೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಾಲ್ಮೀಕಿ ವಿಗ್ರಹ ಲೋಕಾರ್ಪಣೆಯಾಯಿತು.

ಬಳಿಕ ವೇದಿಕೆ ಕಾರ್ಯಕ್ರಮವನ್ನು ನಿವೃತ್ತ ತಹಶೀಲ್ದಾರ್ ರಘುಮೂರ್ತಿ ಉದ್ಘಾಟಿಸಿ ಮಾತನಾಡಿ, ವರ್ತಮಾನದಲ್ಲಿ ವಾಲ್ಮೀಕಿಯನ್ನು ಮಹರ್ಷಿ, ಆದಿಕವಿ, ಆಧ್ಯಾತ್ಮಿಕ ಚಿಂತಕರಾಗಿ ನೋಡುವುದಕ್ಕಿಂತ ಹೆಚ್ಚಾಗಿ, ಅವರು ಬರೆದ ರಾಮಾಯಣವನ್ನು ನೈತಿಕ ಪಾಠವಾಗಿ ನೋಡುವ ತುರ್ತಿದೆ.

ವಾಲ್ಮೀಕಿ ರಚಿಸಿದ ರಾಮಾಯಣದ ರಾಮ ಮಹಾತ್ಮ ಗಾಂಧಿಗೂ ಮಾದರಿಯಾಗಿದ್ದರು. ವರ್ತಮಾನದಲ್ಲಿ ಯುವ ತಲೆಮಾರು ವಾಲ್ಮೀಕಿಯ ಮೂಲಕ ರಾಮಾಯಣ ನೋಡಬೇಕಿದೆ. ವಾಲ್ಮೀಕಿ ಮೂಲಕ ರಾಮಾಯಣ ಮರುವ್ಯಾಖ್ಯಾನಿಸುವ, ವಾಲ್ಮೀಕಿಯ ಕಣ್ಣಿನಿಂದ ರಾಮಾಯಣದ ಪಾತ್ರಗಳನ್ನು ಮರು ವಿಶ್ಲೇಷಣೆಗೆ ಒಳಪಡಿಸುವಂಥ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಆಗ ಮಾತ್ರವೇ ವಾಲ್ಮೀಕಿಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ ಎಂದರು.

ಕ್ಲಿಕ್ ಮಾಡಿ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್

ರೈತ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿ, ವೃತ್ತಿಯಲ್ಲಿ ಬೇಟೆಗಾರನಾಗಿ, ಕಳ್ಳನೆಂಬ ಅಪಕೀರ್ತಿ ಗಳಿಸಿ ರಾಮಾಯಣವೆಂಬ ಮಹಾಗ್ರಂಥವನ್ನು ರಚಿಸಿ ಜಾಗತಿಕ ಮನ್ನಣೆಗೆ ಸ್ಫೂರ್ತಿಯಾದ ವಾಲ್ಮೀಕಿ ಮಹರ್ಷಿಯಂತಹ ಆದಿಕವಿಗಳ ಇತಿಹಾಸ ಮತ್ತೊಮ್ಮೆ ಚಿಮ್ಮಲಿ ಎಂದರು.

ಪಿಡಿಒ ನಾಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗನ್ನಾಥ್ ಮಾತನಾಡಿದರು.

ಕ್ಲಿಕ್ ಮಾಡಿ ಓದಿ: ವಿವಿ ಸಾಗರ ಭರ್ತಿಗೆ ಇನ್ನೊಂದು ಟಿಎಂಸಿ ಅಡಿ ಬಾಕಿ

ಕಾರ್ಯಕ್ರಮದಲ್ಲಿ ವಾಲ್ಮೀಕಿ ಯುವಕ ಸಂಘದ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡರಾದ ನಾಗಣ್ಣ, ಚನ್ನವೀರಪ್ಪ, ಗೌಡ್ರು ಬಸವರಾಜಪ್ಪ,

ಗ್ರಾಮ ಪಂಚಾಯಿತಿ ಸದಸ್ಯರಾದ ಜಯಲಕ್ಷ್ಮಿ, ವೆಂಕಟೇಶ್, ಶಾಂತಮ್ಮ, ಪಾಲಯ್ಯ, ಮಾಜಿ ಗ್ರಾಪಂ ಸದಸ್ಯ ಕೆ ಪಿ ತಿಪ್ಪೇಸ್ವಾಮಿ, ಈರಣ್ಣ, ಮಂಜುನಾಥ್ ಯಾದವ್ ಸೇರಿದಂತೆ ವಾಲ್ಮೀಕಿ ಯುವಕ ಸಂಘದವರು ಹಾಗೂ ಇತರರು ಇದ್ದರು.

Click to comment

Leave a Reply

Your email address will not be published. Required fields are marked *

More in ಚಳ್ಳಕೆರೆ

To Top
Exit mobile version