Connect with us

ಚಿತ್ರದುರ್ಗದಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಚಿಂತನಾ ಬೈಠಕ್

ಶಬರಿ ಮಲೈ ಅಯ್ಯಪ್ಪ ಸೇವಾ ಸಮಾಜಂ ರಾಜ್ಯ ಮಟ್ಟದ ಚಿಂತನಾ ಬೈಠಕ್ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಮುಖ್ಯ ಸುದ್ದಿ

ಚಿತ್ರದುರ್ಗದಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಚಿಂತನಾ ಬೈಠಕ್

CHITRADURGA NEWS | 28 APRIL 2024

ಚಿತ್ರದುರ್ಗ: ಶಬರಿ ಮಲೈ ಅಯ್ಯಪ್ಪ ಸೇವಾ ಸಮಾಜಂ(ಎಸ್‍ಎಎಸ್‍ಎಸ್) ಸಂಘಟನೆಯ ರಾಜ್ಯ ಮಟ್ಟದ ಚಿಂತನಾ ಬೈಠಕ್ ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆಯಿತು.

ಶಬರಿ ಮಲೈ ಅಯ್ಯಪ್ಪ ಸೇವಾ ಸಮಾಜಂ ಸಂಘಟನೆ ರಾಜ್ಯಾಧ್ಯಕ್ಷ ಡಾ.ಎನ್.ಜಯರಾಮ್ ಚಿಂತನಾ ಬೈಠಕ್ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ: ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ | ಮೇಲುದುರ್ಗದಲ್ಲಿ ಭಂಡಾರ ಪೂಜೆ

ಇಂದು ದೇಶಾದ್ಯಂತ ಕೋಟ್ಯಾಂತರ ಭಕ್ತರು ಶಬರಿ ಮಲೆಗೆ ಸ್ವಾಮಿಯ ದರ್ಶನಕ್ಕಾಗಿ ಆಗಮಿಸುತ್ತಾರೆ. ಈ ವೇಳೆ ನಮ್ಮ ಸಂಘಟನೆಯಿಂದ ಸಾಧ್ಯವಾದಷ್ಟು ನೆರವು ಸಿಗಬೇಕು. ಸಂಕಷ್ಟಕ್ಕೆ ಸಿಲುಕಿದವರಿಗೆ ತಕ್ಷಣಕ್ಕೆ ಸ್ಪಂದಿಸಲು ಎಲ್ಲ ಜಿಲ್ಲೆ, ಊರುಗಳಲ್ಲಿ ಸದಸ್ಯರು ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸನಾತನ ಹಿಂದೂ ಧರ್ಮದ ಉಳಿವಿಗಾಗಿ, ನಮ್ಮ ಆಚಾರ, ವಿಚಾರಗಳನ್ನು ಎಲ್ಲೆಡೆ ಪಸರಿಸಲು ಸಾಸ್ ಸಂಘಟನೆ ಬೆಳೆಯಬೇಕು. ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಸಂಘಟನೆ ಸೇವಾ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಬೇಕು.

ಇದನ್ನೂ ಓದಿ: ಸಿರಿಗೆರೆಯಲ್ಲಿ ತರಳಬಾಳು ಶ್ರೀ ಮತದಾನ | ಮತದಾನ ಬಹಿಷ್ಕರಿಸಿದ್ದ ಸಿದ್ದಾಪುರ ಗ್ರಾಮಸ್ಥರ ಮನವೊಲಿಸಿದ ಶ್ರೀಗಳು

ಒಂದು ಅಂದಾಜಿನ ಪ್ರಕಾರ ದೇಶದ ವಿವಿಧ ರಾಜ್ಯಗಳಿಂದ ಪ್ರತಿ ವರ್ಷ 5 ಕೋಟಿ ಭಕ್ತರು ಕೇರಳಾದ ಶಬರಿಮಲೆಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಅಲ್ಲಿನ ಕಮ್ಯುನಿಸ್ಟ್ ಸರ್ಕಾರದಿಂದ ಸರಿಯಾದ ಸಹಕಾರ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಕನಿಷ್ಟ 50 ಲಕ್ಷದಿಂದ 1 ಕೋಟಿ ಜನರಿಗೆ ವಿವಿಧ ಕೇಂದ್ರಗಳಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸುವಂತೆ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಶಬರಿ ಮಲೈ ಅಯ್ಯಪ್ಪ ಸೇವಾ ಸಮಾಜಂ ರಾಜ್ಯ ಮಟ್ಟದ ಚಿಂತನಾ ಬೈಠಕ್ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಇದನ್ನೂ ಓದಿ: ಜನರ ಜೊತೆ ಚಹಾ‌ ಕುಡಿದು, ಹರಟೆ ಹೊಡೆದ ಗೋವಿಂದ ಕಾರಜೋಳ

ಇದರೊಟ್ಟಿಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದು. ಅಬಲರು, ಅಸಹಾಯಕರಿಗೆ ವಿವಿಧ ರೀತಿಯ ಸಹಾಯ ಹಸ್ತ ಚಾಚುವುದು, ಆರೋಗ್ಯ ತಪಾಸಣೆ, ರಕ್ತದಾನ, ದೇವಸ್ಥಾನಗಳ ಸ್ವಚ್ಛತೆ ಸೇರಿದಂತೆ ಸೇವಾ ಚಟುವಟಿಕೆಗಳನ್ನು ವಿಸ್ತರಿಸಬೇಕು ಎಂದು ಸಲಹೆ ನೀಡಿದರು.

ಶಬರಿ ಮಲೈ ಅಯ್ಯಪ್ಪ ಸೇವಾ ಸಮಾಜಂ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಶರಣ್‍ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈರೋಡ್ ಎನ್.ರಾಜಣ್ಣ, ರಾಜ್ಯ ಗೌರವಾಧ್ಯಕ್ಷ ಆನಂದ ವಾಮನ ನಾಯಕ್, ಅನ್ನದಾನ ಸಮಿತಿ ಅಧ್ಯಕ್ಷ ವಿ.ಕೃಷ್ಣಪ್ಪ, ದಕ್ಷಿಣ ಮಧ್ಯ ಪ್ರಾಂತಿಯ ಕಾರ್ಯದರ್ಶಿ ಎಸ್.ಎನ್.ಕೃಷ್ಣಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಸಿ.ಜೈಪ್ರಕಾಶ್, ಉಪಾಧ್ಯಕ್ಷ ಸಂಪತ್ ಕುಮಾರ್, ಸಂಘಟನಾ ಕಾರ್ಯದರ್ಶಿ ದತ್ತು ಶಿಂತ್ರೆ, ಸೂರ್ಯನಾರಾಯಣರಾವ್, ವಂಸತಕುಮಾರ್, ವೆಂಕಟೇಶ್, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version